ದೇವರು ಮೊದಲು ಮಾನವರ ಮಸ್ಸಿನಿಂದ ಓಡಿ ಹೋಗಿ ದೇವಾಲಯದಲ್ಲಿದ್ದರು, ಅಲ್ಲಿಯೂ ನಮ್ಮವರ ಅನಾಚಾರ ತಾಳಲಾರದೆ ಓಡಿ ಹೋಗಿ ಕಾಡಿನಲ್ಲಿದ್ದರು – ನಾವು ಅವರನ್ನು ಹುಡುಕಿಕೊಂಡು ಹೋಗಿ ಅಲ್ಲಿಯೂ ಅವರಿಗೆ ನೆಮ್ಮದಿಯಿಂದಿರಲು ಬಿಡಲಿಲ್ಲ – ಪರಿಹಾರ ಕಾಣದೆ ಕೊರೊನ ರೂಪದಲ್ಲಿ ಬಂದಿದ್ದಾರೆ. ಮಾನವ ಕುಲಕೋಟಿಯ ನಿರಂತರ ಮಂತ್ರ ಪಠಣ – ಕೊರೊನ – ಆಗಿದೆ. ನಿಜವಾದ ದೇವರ ಅರಿವು , ಬದುಕಿನ ಅರಿವು, ದೇವಾಲಯದ ಅರಿವು, ಪೂಜೆಯ ಅರಿವು., ನಿಜವಾದ ಪೂಜೆಯ ಅರಿವು, ನಿಜವಾದ ಪ್ರಜಾಪ್ರಭುತ್ವದ ಅರಿವು, ಚೀನಾ ಯಾವ ರೀತಿಯಲ್ಲಿ ಕೊರೊನ ಮೆಟ್ಟಿ ನಿಂತಿದೆ ಬಗ್ಗೆ ಅರಿವು , ಮಾಧ್ಯಮಗಳು ತಮ್ಮ ಕರ್ತವ್ಯದ ಬಗ್ಗೆ ಅರಿವು, ದೇಶದ ಕಾನೂನು ಪುಸ್ತಕದ ಬದನೆ ಕಾಯಿ ಆಗಿ ಉಳಿಸಿದರೆ ಅದರ ಒಳಿತು ಕೆಡುಕು ಬಗ್ಗೆ ಅರಿವು ಸ್ವಾರ್ಥ ಮಂತ್ರ ಪಠಣ ಮತ್ತು ತ್ಯಾಗ ಮಂತ್ರದ ಸ್ಪಷ್ಟವಾದ ಅರಿವು ಒಂದು ಒಂದಾಗಿ ನಮ್ಮ ಗಮನಕ್ಕೆ ಬಂದು ಸಾವು ಬದುಕಿನಲ್ಲಿ – ಒಂದೇ ಆಯ್ಕೆ – ಮಾನವರೊಂದಿಗೆ ಜೀವರಾಶಿಗಳೊಂದಿಗೆ ಬದುಕಿ ಇಲ್ಲವಾದರೆ ಬದುಕಿಗೆ ಮಂಗಳ ಹಾಡಿ.ನಮ್ಮ ಬದುಕು ನಮ್ಮ ಸಾವು – ನಮ್ಮಿಂದಲೇ ಅರಿತು ಬಾಳಲು ಸಂಯಮದ ಕೋಟೆ ಕಟ್ಟಿ ನೆಮ್ಮದಿ ಬದುಕು ಸಾಗಿಸೋಣ. ಅದಕ್ಕಾಗಿ ನಮ್ಮ ಮನದ ಮತ್ತು ದೇಹದ ಕೊಳಕನ್ನು ಹೊರ ಹಾಕುವ ಪ್ರತಿಜ್ಞೆಯನ್ನು ಮಾನವರಾದ ನಾವೆಲ್ಲರೂ ಕೈಗೊಳ್ಳೋಣ. ಪ್ರಕೃತಿಯೊಂದಿಗೆ ದೇವರು ಕೂಡ ನಮ್ಮ ಬೆಂಗಾವಲಿಗೆ ನಿಂತು ಸಕಲ ರೋಗ ರುಜಿನ , ಕಷ್ಟ ನಷ್ಟಗಳು ತನ್ನಿಂದ ತಾನೇ ಮಾಯವಾಗಿ ಸುಖ ಶಾಂತಿ ನೆಮ್ಮದಿ ನೆಲೆಗೊಳ್ಳುತದೆ.
ಕೊರೊನ ಮಂತ್ರ ಪಠಣ ನಿಲ್ಲಿಸಿ ನಮಗೆ ತಿಳಿದ ಯಾವುದಾದರು ದೇವರ ಮಂತ್ರ ಪಠಣ ಮಾಡೋಣ
ಮಾದ್ಯಮದವರು ಪರಿಹಾರ ಸೂತ್ರಗಳತ್ತ ಗಮನ ಹರಿಸಿ – ಕರೋನ ವೈಭವೀಕರಣ ಕಡಿಮೆ ಮಾಡಿ
ದೇವರಿಗೆ ಪ್ರತಿಯೊಬ್ಬನಿಗೂ ಮನದಲ್ಲಿ ಪೂಜೆ ಮಾಡುವ ಹಕ್ಕು ಇದೆ, ಅದನ್ನು ಮಾಡೋಣ
ಸಮಾಜಕ್ಕೆ ದಿನ ಚರಿ ಮನ ಚರಿ ಬಗ್ಗೆ ಅರಿವು ಹುಟ್ಟಿಸೋಣ. ದೇಹದಿಂದ ಮಾಡುವ ಕೆಲಸಕ್ಕೆ ದಿನ ಚರಿ ಎಂದು
ಮನಸ್ಸು ಏನು ಮಾಡುತ್ತ ಇತ್ತು ಎಂಬುದ ತಿಳಿಸುವುದೇ ಮನಚರಿ
ಆಡಳಿತ ಯಂತ್ರ – ನೂರಕ್ಕೆ ನೂರು – ಸಮರ್ಪಕವಾಗಿರಬೇಕು – ಇದಕ್ಕೆ ಚೀನಾ ನಿದರ್ಶನ ಪ್ರಪಂಚಕ್ಕೆ
ಅಭಿವೃದ್ಧಿ ಚಿಂತನ ಮಂಥನ ಅನುಷ್ಠಾನಗಳಿಗೆ ಮಾತ್ರ – ಸಕಲ ಮಾಧ್ಯಮಗಳು ತೊಡಗಿಸಿಕೊಳ್ಳಬೇಕು
ಸ್ವಾರ್ಥ ಚಿಂತನೆ – ತ್ಯಾಗಮಯ ಜೀವನದ ಸಮಾಧಿ – ಇಂದಿನ ಪ್ರಕೃತಿಯ ಒಡಲಿನ ಆರ್ಭಟಕ್ಕೆ ನಾಂದಿ
ಮನೋಬಲ ಕುಗ್ಗಿಸುವ ಬದಲು , ಮನೋಬಲ ವೃದಿಸುವತ್ತ ಗಮನ ಹರಿಸೋಣ
ಮನಸ್ಸಿಗೆ ರೋಗ ಬಂದು ದೇಹಕ್ಕೆ ಹರಡುವ ಮರ್ಮವನ್ನು ಮನದಟ್ಟು ಮಾಡುವ
ದೈವ ದೇವರು ಪ್ರಕೃತಿಯಲ್ಲಿ ದೇವರನ್ನು ಕಾಣುವ ನಮಗೆ ದೇವರೇ ಮದ್ದು
ಇಂದಿನ ಬದುಕು ನಾವು ಮರೆತ ಬದುಕನ್ನು ನೆನಪಿಸುತಿದೆ ಮಾತ್ರ
ಬದುಕಿನ ಮೂಲವನ್ನು ಕೊರೊನ ಮೂಲಕ ಬಂದು ನಮ್ಮನ್ನು ಜಾಗ್ರತಗೊಳ್ಸಿದುದನ್ನು ಅರಿತು ಮಾನವರಾಗಿ ಮಾನವ ಜನಾಂಗ ಬದುಕಿ ಬಾಳಲಿ ಎಂಬ ಹಾರೈಕೆ ನಮ್ಮದಾಗಲಿ