ವದು ಮತ್ತು ವರರ ಮಾಹಿತಿ ಹಂಚಿಕೊಳ್ಳುವುದರಲ್ಲಿ ನಾವು ಇನ್ನು ಕೂಡ ಸುಮಾರು ಐದು ದಶಕಗಳ ಹಿಂದೆ ಇದ್ದು ನೇರವಾಗಿ ವದು ಅಥವಾ ವರ ನನ್ನ ಮಗಳು ಯಾ ಮಗ ಇರುವುದನ್ನು ಯಾರು ಕೂಡ ಇನ್ನೊಬ್ಬರಲ್ಲಿ ಹೇಳಿಕೊಳ್ಳಲು ಇಚ್ಚಿಸುವುದಿಲ್ಲ. ಅದು ಯಾರಿಂದಲೋ ಯಾವುದೊ ಮೂಲಗಳಿಂದ ಗೊತ್ತಾಗಿ ಅವರುಗಳು ಹಾಕುವ ಉಪ್ಪು ಖಾರ ಸಿಹಿ ಕಹಿ ಒಟ್ಟಾಗಿ ಅಂತಿಮ ಹಂತಕ್ಕೆ ಬರುವ ಹೊತ್ತಿಗೆ ಹೆತ್ತವರು ಪಡಬಾರದ ಕಷ್ಟ ಪಟ್ಟಿರುತಾರೆ. ಮಾನಸಿಕ ಹಿಂಸೆ ಮುಗಿದ ಬಳಿಕ ಎದುರಾಗುವುದು ಆರ್ಥಿಕ ಬಹು ದೊಡ್ಡ ಸಮಸ್ಯೆ.
ಸರಳ ಮದುವೆಗೆ ಬೋದಿಸುವವರು – ಮಾಡಿಸುವವರು ಕೂಡ ಅದ್ದೂರಿ ಮದುವೆ ತಾನು ತನ್ನವರಿಗೆ ಮಾಡಿಸುವುದು – ಅದ್ದೂರಿ ಮದುವೆಗೆ ಬೇಕು ಬೇಕಾದ ವ್ಯವಸ್ಥೆಗಳನ್ನು ರೂಪಿಸಿತ್ತಿರುವುದು ಪರೋಕ್ಷ ನಾವೆಲ್ಲರೂ ಸೇರಿ ವೇದಿಕೆ ಮೇಲಿನ ಸಿದ್ಧಾಂತಕ್ಕೂ ಬದುಕಿನ ಸಿದ್ಧಾಂತಕ್ಕೂ ಅಜಗಜಾಂತರ ಎದ್ದು ಕಾಣುತಿದೆ.
ಈ ಸಮಸ್ಯೆ ವದು ವರರ ತಂದೆ ತಾಯಿಗಳದ್ದು ಮಾತ್ರವಲ್ಲ – ಇದು ಸಮಾಜದಲ್ಲಿ ಬದುಕುವ ನಮ್ಮೆಲ್ಲರ ಸಹೋದರ ಸಹೋದರಿಯರ ಸಮಸ್ಯೆ ಎಂದು ಅರಿತು ಸಮಾಜದಲ್ಲಿ ಮನೆ ಮಾಡಿರುವ ನಮ್ಮನ್ನು ಕಾಡುವ ಸಕಲ ಸಮಸ್ಯೆಗಳಿಗೆ ಪರಿಹಾರ ಹುಡುಕುವ ನಿಟ್ಟಿನಲ್ಲಿ ಆಯಾಯ ಜಾತಿವಾರು ಸಂಘಟನೆಗಳು ಪ್ರಾಮುಖ್ಯ ಪಾತ್ರ ವಹಿಸಬೇಕು. ಹಲವಾರು ವೇದಿಕೆಗಳಲ್ಲಿ ಸ್ವತಃ – ವರ ವದು – ಇತ್ತ ಗಮನ ಸೆಳೆದರು ಯಾವುದೇ ರೀತಿಯ ಪರಿಹಾರ ಗೋಚರಿಸುತಿಲ್ಲ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ? ನಾವು ಪ್ರತಿಯೊಬ್ಬರೂ
ಈ ನಿಟ್ಟಿನಲ್ಲಿ ಕಲೆಹಾಕಿದ ಮಾಹಿತಿಯನ್ನು ವ್ಯಕ್ತಪಡಿಸುತ್ತ – ನಮ್ಮ ವೇದಿಕೆ ನಿಮಗಾಗಿ ಸದಾ ಸಿದ್ದ
ವದು ವರರ ಸಂಕ್ಷಿಪ್ತ ವಿವರ ಕೊಡುವುದರಲ್ಲಿ ತಪ್ಪಿಲ್ಲ – ಅವಕಾಶ ಇಲ್ಲಿದೆ
ವದು ವರರ ಹೆಚ್ಚಿನ ಮಾಹಿತಿ ಹತ್ತಿರ ಸಂಬಂಧಿಗಳಿಗೆ ಬಿಟ್ಟವಿಚಾರ
ವದು ವರರ – ಪ್ರಾಯ ,ಎತ್ತರ , ವಿದ್ಯೆ ,ಉದ್ಯೋಗ ,ವಿಧವೆ,ವಿದುರ , ವಾಟ್ಸಪ್ಪ್ ನಂಬರು ಮಾತ್ರ
ಸರಳ ಮದುವೆಗೆ ಹೆಚ್ಚು ಒತ್ತು ಕೊಡಿ
ನಾನು ಮೆಚ್ಚಿದವನ ಬದಲು ನನ್ನನ್ನು ಮೆಚ್ಚಿದವನು ಸೂಕ್ತ
ಕಾಣುವ ಸಂಪತ್ತನ್ನು ನೋಡಿ ಮರುಳಾಗದಿರಿ – ಕಾಣದ ಸಂಪತ್ತು ಜೀವನುದ್ದಕ್ಕೂ ಸಿಗುತದೆ.
ನನ್ನ ಉನ್ನತಿ ಅವನತಿಗೆ ನಾನೆ ಕಾರಣ ಅರಿತಾಗ ಮುಂದಿನ ದಾರಿ ಕಾಣುತದೆ.
ಮಾತಾಪಿತೃಗಳ ಆಯ್ಕೆ ನಿನ್ನದಯ್ಯಾ
ಮಕ್ಕಳು ಬಂದುಗಳ ಆಯ್ಕೆ ನಿನ್ನದಯ್ಯಾ
ಸತಿ ಪತಿಗಳ ಆಯ್ಕೆ ಎಮಗೇಕಯ್ಯ ……………………….ಅವ್ಯಕ್ತ