ಕಡಬ ತಾಲೂಕು ಕುಟ್ರಾಪ್ಪಾಡಿ ಗ್ರಾಮದ ಕೇಪು ಶ್ರೀ ಮಹಾಗಣಪತಿ ಲಕ್ಷ್ಮೀ ಜನಾರ್ದನ ದೇವಸ್ಥಾನದ ವಠಾರದಲ್ಲಿ ಶಿಲಾಮಯ ಶ್ರೀ ಪಂಚಮುಖೀ ಆಂಜನೇಯ ಸ್ವಾಮಿಯ ಪ್ರತಿಷ್ಠೆ ಹಾಗೂ ಬ್ರಹ್ಮಲಶೋತ್ಸವ ಕಾರ್ಯಕ್ರಮವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಇತ್ತೀಚಿಗೆ ವಿಜೃಂಭಣೆಯಿಂದ ಜರಗಿದೆ. ದಕ್ಷಿಣಾಭಿಮುಖವಾಗಿ ಆಂಜನೇಯ ಸ್ವಾಮಿ ದೈವಜ್ಞರ ಸೂಚನೆಯಂತೆ ಶ್ರೀಕ್ಷೇತ್ರದಲ್ಲಿ ಪಂಚಮುಖೀ ಆಂಜನೇಯ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆಯಾಗಿದೆ .
ವಿಷ್ಣುವಿನ ಸಾನಿಧ್ಯವಾಗಿರುವ ಇಲ್ಲಿ ಆಕರ್ಷಕ ಗೋಪುರದಲ್ಲಿ ದಕ್ಷಿಣಾಭಿಮುಖವಾಗಿ ಆಂಜನೇಯ ಸ್ವಾಮಿಯ ಸಂಪೂರ್ಣ ಶಿಲಾಮಯ ಮೂರ್ತಿಯನ್ನು ಪ್ರತಿಷ್ಠೆ ಮಾಡಲಾಗಿದ್ದು , ಇದು ಅಪರೂಪದ ಯಾತ್ರಾಸ್ಥಳವಾಗಿ ಕಂಗೊಳಿಸಿದೆ . ವಿಷ್ಣು ಸಾನ್ನಿಧ್ಯದಲ್ಲಿ ಈ ರೀತಿ ದಕ್ಷಿಣಾಭಿಮುಖವಾಗಿ ಆಂಜನೇಯ ಸ್ವಾಮಿಯ ಮೂರ್ತಿ ಪ್ರತಿಷ್ಠಾಪನೆಯಾಗಿರುವುದು ದಕ್ಷಿಣ ಭಾರತದಲ್ಲಿಯೇ ಪ್ರಥಮ ಎನ್ನಲಾಗಿದೆ.Image credits:?
Location ?