ಆತ್ಮಕ್ಕೆ ರೋಗ ಬದುಕಿಗೆ ಕೇಡು
ದೇಹಕ್ಕೆ ರೋಗ ದೇಹಕ್ಕೆ ಕೇಡು
ರೋಗ ಅರಿತು ಮದ್ದು ಮಾಡೆಂದ ———————————————– ಅವ್ಯಕ್ತ
ಆತ್ಮಕ್ಕೆ ರೋಗ ಅಪರಾಧಕ್ಕೆ ಮೂಲ
ಅಪರಾಧಕ್ಕೆ ಶಿಕ್ಷೆ ನೆಮ್ಮದಿಗೆ ಮೂಲ
ಅಪರಾಧಕ್ಕೆ ಶಿಕ್ಷೆ ತಿರುಕನ ಕನಸೆಂದ ——————————————– ಅವ್ಯಕ್ತ
ಜಾತಿ ಶಿಕ್ಷಣ ಮಾನವರ ಸೃಷ್ಟಿ
ಶಾಲಾ ಶಿಕ್ಷಣ ನಿರುದ್ಯೋಗಿಗಳ ಸೃಷ್ಟಿ
ಜಾತಿ ಶಾಲಾ ಶಿಕ್ಷಣ ಬೇಕೆಂದ —————————————————— ಅವ್ಯಕ್ತ
ಮನದ ಮಾತು ಭಾಷಣ ಅಂದು
ಬಾಯಿ ಮಾತು ಭಾಷಣ ಇಂದು
ದೇಹದ ಗುಡಿಯ ದೇವಾ ಮೆಚ್ಚಿಪನೆ —————————————– ಅವ್ಯಕ್ತ
ಜಾತಿ ನೀತಿ ಪಕ್ಷ ನೀತಿ ಮರೆತ ಮಾನವ
ಜಾತಿ ವೇಷ ಪಕ್ಷ ವೇಷ ಹಾಕಿ ಬದುಕುತಿರೆ
ಜಾತಿ ಪಕ್ಷ ನಾಂದಿಗೆ ವೇಷ ಹಾಕಿದವರು ಸಾಕೆಂದ ———————— ಅವ್ಯಕ್ತ
ದೇಶದಿ ದಿನಕೊಂದು ನ್ಯಾಯಕ್ಕಾಗಿ ಹೋರಾಟ
ನ್ಯಾಯಕ್ಕಾಗಿ ನ್ಯಾಯಾಲಯದಿ ಹೋರಾಟ ಮಾಡದಿರೆ
ಹೋರಾಟ ಜನರ ಬದುಕಿಗೆ ಮಾರಕವೆಂದ ———————————— ಅವ್ಯಕ್ತ
ಅಲೆದಾಟದ ವಿದ್ಯೆ ಅಲೆದಾಟದ ಉದ್ಯೋಗ,
ಬದುಕಿಗಾಗಿ ಅಲೆದಾಟ ದೇವರಿಗಾಗಿ ಅಲೆದಾಟ
ಮಾನವನ ಸೃಷ್ಟಿ ಅಲೆದಾಟದ ಜೀವನವೆಂದ —————————————- ಅವ್ಯಕ್ತ
ಆನಲೈನ್ ಶಿಕ್ಷಣ ಆನಲೈನ್ ಬದುಕು
ಆಫ್ ಲೈನ್ ಶಿಕ್ಷಣ ಆಫ್ ಲೈನ್ ಬದುಕು
ಆನಲೈನ್ ಆಫ್ ಲೈನ್ ನಿನಗೆ ಬಿಟ್ಟುದಯ್ಯ ……………….avyaktha