ಆಡಳಿತ ಸಮಿತಿ ಅಂದರೆ ಏನು – ಅದು ಏನು ಮಾಡಬೇಕು – ಹೆಸರಿಗೆ ಮಾತ್ರ ಇದ್ದರೆ ಸಾಕೆ – ಆಡಳಿತ ಸಮಿತಿ ಎಂಬ ಹೆಸರು ಮಾತ್ರ ಇಟ್ಟುಕೊಂಡು ಉಸಿರಾಡಲು ಕೂಡ ಕಷ್ಟ ಪಡುವ ಸಮಿತಿಗಳು ಎಷ್ಟು ಇವೆ – ಹತ್ತು ವರುಷಕ್ಕೆ ಮಿಗಿಲಾಗಿ ಒಂದು ಸಭೆಯನ್ನು ಕೂಡ ಕರೆಯದಿರುವ ಸಮಿತಿಗಳ ಸಂಖ್ಯೆ ಎಷ್ಟು – ಇವುಗಳಿಗೆ ಜೀವ ತುಂಬುವ ಕೆಲಸ ಮಾಡಬೇಕಾದವರು ಯಾರು – ಸಮಿತಿಯ ಒಳಗೆ ತಿಕ್ಕಾಟ ಯಾಕೆ – ಸಮಿತಿ ತೆಗೆದುಕೊಂಡ ನಿರ್ಧಾರ ಊಟಕ್ಕಿಲ್ಲದ ಉಪ್ಪಿನಕಾಯಿ ಆಗುವುದು ಯಾಕೆ – ಮುಂತಾದುಗಳ ಬಗ್ಗೆ ಸಂಕ್ಷಿಪ್ತ ಪರಿಹಾರ ಸೂತ್ರ ಇಂತಿದೆ . ಇದು ಅಂತ್ಯ ಅಲ್ಲ ಆರಂಭ ಮಾತ್ರ – ನಾವು ನೀವು ಸೇರಿ ಚಿಂತನ ಮಂಥನ ಅನುಷ್ಠಾನ ಮಾಡಿದಾಗ ಹಂತ ಹಂತವಾಗಿ ಪರಿಪೂರ್ಣತೆಗೆ ಬರಬಹುದು – ಕಾರ್ಯ ಪ್ರವರ್ತರಹೋಗೋಣ.
೧. ಆಡಳಿತ ಸಮಿತಿ ಎಂಬುದು ಪ್ರಜಾಪ್ರಭುತ್ವದ ತಳಹದಿ ಮೇಲೆ ನಿಂತಿರುವುದು ನಾವೆಲ್ಲರೂ ಮನದಟ್ಟುಮಾಡಿಕೊಳ್ಳಬೇಕು
೨. ಅಂದಿನ ಅರಸರು – ಇಂದಿನ ಪ್ರಜಾಪ್ರತಿನಿಧಿ – ಇಲ್ಲಿ ಆಡಳಿತ ಸಮಿತಿ ಅಧ್ಯಕ್ಷ ಎಂಬ ಅರಿವು ನಮ್ಮಲಿಲ್ಲಿರಲಿ
೩. ವರುಷಕ್ಕೆ ಒಂದು ಕಾರ್ಯಕ್ರಮ ಆಗುವಲ್ಲಿ ಒಂದು ಯಾ ಎರಡು ಆಡಳಿತ ಸಭೆಗಳು ಸಾಕು – ನಿರಂತರ ಕಾರ್ಯಗಳಾಗುವ ಕ್ಷೇತ್ರಗಳಲ್ಲಿ ಕನಿಷ್ಠ ಪಕ್ಷ ತಿಂಗಳಿಗೊಂದು ಆಡಳಿತ ಸಮಿತಿ ಸಭೆ ಮತ್ತು ಸಾರ್ವಜನಿಕ ಸಭೆ ಕನಿಷ್ಠ ವರುಷಕ್ಕೆ ಒಂದು ಕಡ್ಡಾಯ ಮಾಡಲೇ ಬೇಕು
೪. ಆಡಳಿತ ಸಮಿತಿಯ ಅಧಿಕಾರ ಅಂತಿಮ ,ಪ್ರತಿಯೊಬ್ಬರೂ ಪಾಲಿಸಲೇಬೇಕು , ತಪ್ಪು ಎಸಗಿದವನಿಗೆ ಶಿಕ್ಷಿಸಿ ಸರಿ ದಾರಿಗೆ ತರುವ ಹಕ್ಕು ಇದೆ.
೫. ತಿಂಗಳಿಗೊಮ್ಮೆ ಸಭೆ ಮಾಡದೆ – ಆ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಮಾತ್ರ ಸದ್ಸ್ಯರು ಬದ್ಧರಾಗುತಾರೆ – ತಿಳಿದಿರಲಿ
- ಅಧ್ಯಕ್ಷ ಪದವಿಯಲ್ಲಿ ಕುಳಿತ ವ್ಯಕ್ತಿ ಸಕಲ ಕೆಲಸ ಕಾರ್ಯಗಳಿಗೆ ಬದ್ಧನಾಗಿರುತಾನೆ – ನನಗೆ ಅರಿವಿಲ್ಲದೆ ಆಗಿದೆ ಎಂದು ಹೇಳುವಂತಿಲ್ಲ
೭. ಸಭೆ ಕರೆದರೆ ಯಾರು ಬರುವುದಿಲ್ಲ ಎಂಬ ಬೇಜವಾಬ್ದಾರಿ ಹೇಳಿಕೆ ಅಧ್ಯಕ್ಸನ ರಕ್ಶಣೆಗೆ ಎಂದು ಬರುವುದಿಲ್ಲ
೮. ಆಡಳಿತ ಸಮಿತಿ ಬೇಕು ಬೇಕಾದ (ದೇಶದ ಕಾನೂನಿಗೆ ಪೂರಕವಾದ ಮಾತ್ರ) ನೀತಿ ನಿಯಮಗಳನ್ನು ರೂಪಿಸಿ ಅನುಷ್ಠಾನ ಮಾಡುವ ಹಕ್ಕು ಹೊಂದಿರುತದೆ – ಅದು ಸಾರ್ವಜನಿಕ ಸಭೆಯ ಅನುಮೋದನೆಗೆ ಬದ್ಧವಾಗಿರಬೇಕು
೯. ಅಧ್ಯಕ್ಸನ ಕಾರ್ಯ ವ್ಯಾಪ್ತಿ – ಆಡಳಿತ ಸಮಿತಿಯ ಕಾರ್ಯವ್ಯಾಪ್ತಿ – ನಿರ್ದಿಷ್ಟವಾಗಿ ನಿಯಮಾವಳಿ ಅತ್ಯಂತ ಅಗತ್ಯ
೧೦. ಆಡಳಿತ ಸಮಿತಿ ಇಂದು ಸರ್ವಾಧಿಕಾರಿ – ಅರಸು ಪದ್ದತಿಯ ಸ್ಥಾನ ಮಾನ ಪೂರಕ ಮಾತ್ರ – ಹಕ್ಕು ಚಲಾಯಿಸುವಂತಿಲ್ಲ – ಆದರೆ ಅವನ ವ್ಯಕ್ತಿತ್ವಕ್ಕೆ ದಕ್ಕೆ ಬರುವಲ್ಲಿ ತನ್ನ ನೆಲೆಯನ್ನು ಸೂಕ್ತ ದಾರಿಯಲ್ಲಿ ಭದ್ರಪಡಿಸುವ ಹಕ್ಕು ಯಾರು ಕೂಡ ಪ್ರಶ್ನಿಸುವಂತಿಲ್ಲ – ಒಗ್ಗಟ್ಟಿನ ಮಂತ್ರ – ದೇವ ಮಂತ್ರ – ಪಾಲನೆಗಾಗಿ ಪಠಿಸೋಣ
೧೧. ಅರಸು ಸ್ಥಾನ ಮಾನದ ವ್ಯಕ್ತಿಗಳು ದೈವ ದೇವರಿಗೆ ಬೇಕೇಬೇಕು – ಇಂದಿನ ಪ್ರಜಾ ಪದ್ದತಿಗೆ ಪ್ರತಿನಿಧಿ ಬೇಕು – ದೈವ ದೇವರಿಗೆ ಬೆಲೆ ಕೊಡುವವರಲ್ಲಿ ಅರಸು ಪದ್ದತಿಯ ಸ್ಥಾನ ಮಾನ ಶ್ರೇಷ್ಠ – ಪ್ರಜಾಪದ್ಧತಿಗೆ ಪ್ರಾಮುಖ್ಯ ಎಂದು ತಿಳಿದವರಿಗೆ ಪ್ರಜಾ ಸ್ಥಾನ ಮನವೇ ಶ್ರೇಷ್ಠ. ವಿಧಿಯಾಟ – ಪ್ರಕೃತಿಯಾಟ ಅರಸು ಪದ್ದತಿಯ ಸ್ಥಾನ ಮಾನದ ಕೈಗೊಂಬೆಯಾಗಿದೆ,
೧೨. ಪುಸ್ತಕದ ಬದನೆಕಾಯಿಯಾದ ಪ್ರಜಾಪ್ರಭುತ್ವ ಮಸ್ತಕದ ಬದನೇಕಾಯಿ ಆಗುವವರೆಗೆ ರಾವಣ ರಾಜ್ಜ ಮುಂದುವರಿಯುತದೆ. ಪ್ರಜಾಪ್ರಭುತ್ವದ ನಿಯಮಾವಳಿ ನೂರು ಪ್ರತಿಶತ ಅನುಷ್ಠಾನವಾದಾಗ ರಾಮ ರಾಜ್ಜ – ಸುಖ ಶಾಂತಿ ನೆಮ್ಮದಿ ಬಾಳು – ಮಾನವರದ್ದು – ಹಂಬಲ ನಮಗಿದೆ – ಈ ನೆಮ್ಮದಿ ಬಾಳೆಂಬ ಕೋರೋಣ ವಿಶ್ವ ವ್ಯಾಪ್ತಿಯಾದಾಗ – ನಾವು ನಿಂತ ನೆಲ ಸ್ವರ್ಗ – ನಿರೀಕ್ಷೆ ನಮ್ಮೆಲ್ಲರ ಅನುಷ್ಠಾನದ ಮೇಲೆ ನಿಂತಿದೆ