ದಾಂಪತ್ಯದ ಬದುಕು ಹಾಲು ನೀರಿನಂತೆ ಬೆಸೆದು ಒಂದಾಗಿ ನೆಮ್ಮದಿ ಜೀವನ – ಆದುನಿಕ ಪ್ರಪಂಚದಲ್ಲಿ ಕಷ್ಟ ಸಾಧ್ಯ ಎಂದು ಅಂತಿಮ ಮುದ್ರೆಯನ್ನು ಒತ್ತಿ ಬಾಳ ಪಯಣ ಸಾಗುತಿರುವುದಕ್ಕೆ ಇತಿಶ್ರೀ ಹಾಡಲು ಪುಟ್ಟ ಹೆಜ್ಜೆಯನ್ನು ಇಡುತಿದ್ದೇವೆ. ಇದು ನಿಮ್ಮ ನಮ್ಮೆಲ್ಲರ ಮನದಾಳದ ಮಾತು – ನಮ್ಮ ಕೈಲಾದ ಕೊಡುಗೆಗಳನ್ನು ಇತ್ತು ದಾಂಪತ್ಯ ವಿರಸ – ಸರಸದತ್ತ ಪರಿವರ್ತನೆಗೆ ಮುನ್ನುಡಿ ಬರೆಯುತ್ತ ಮುಂದೆ ಮುಂದೆ ಸಾಗೋಣ.
ಕೆಲವೊಂದು ಸೂತ್ರಗಳು – ದಾಂಪತ್ಯ ಸ್ವರ್ಗ ಬದುಕಿಗಾಗಿ – ಕೈ ಜೋಳಿಗೆ ಶೇಖರಣೆ
ಅನ್ಯರಲ್ಲಿ ದೇವರನ್ನು ಕಾಣುವ ಮಾನವ ಧಾರ್ಮ ಪಾಲನೆ
ಭಿನ್ನತೆಯಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳುವುದು
ತನ್ನ ಗುಣ ಸ್ವಭಾವವನ್ನು ಸಂಗಾತಿಯಲ್ಲಿ ಹೇರದೆ ಪರಿವರ್ತೇನೆಗೆ ಅವಕಾಶ ಕೊಟ್ಟು – ಸಾಧ್ಯವಾಗದಿದ್ದರೆ ಯಥಾಸ್ಥಿತಿ ಅನುಕರಣೆ ಅನಿವಾರ್ಯ
ಹುಟ್ಟಿನಿಂದ ಬರುವ ತಪ್ಪುಗಳ – ಸರಿಯೆಂದು – ತಿದ್ದಿಕೊಳ್ಳದೆ – ಮುಂದೆ ಸಾಗುವವರ ಜೊತೆಗೆ ಹೊಂದಾಣಿಕೆ ಅತ್ಯಗತ್ಯ
ಸಂಗಾತಿಯ ಶಕ್ತಿ ಸಾಮರ್ಥ್ಯ ಅರಿತು ಬಾಳುವುದು
ಮುಕ್ತವಾಗಿ ಮಾತನಾಡಿ ಭಿನ್ನತೆಗೆ ಹೊಂದಾಣಿಕೆಯ ಬೀಗ ಹಾಕುವುದು
ಸಂಪತ್ತಿನ ಮೇಲೆ ಸ್ವಯಂ ಇತಿ ಮಿತಿ ಹೇರಿಕೊಳ್ಳುವುದು
ದಾಂಪತ್ಯ ವಿರಸಕ್ಕೆ ದಂಪತಿಗಳಿಬ್ಬರು ಹೊಣೆಗಾರರು – ತಪ್ಪಿಸುವಂತಿಲ್ಲ
ಬಾಳಿನ ಪಯಣ ಅರಿತಾಗ ಸುಖ ಪಯಣದ ಬದುಕು ಸಾಧ್ಯ
ಬದುಕು ಮೊಬೈಲ್ ಯಾ ಕಂಪ್ಯೂಟರಿನಂತೆ ಸಾಮರ್ಥ್ಯದ ಅರಿವಿನೊಂದಿಗೆ ಜೀವನ ನಡೆಸುವುದು
ಆಂತರಿಕ ವೇದಿಕೆಯಲ್ಲಿ ಮಾತ್ರ ಪರಿಹಾರ -ಬಾಹ್ಯ ವೇದಿಕೆಯಲ್ಲಿ ಕಷ್ಟ
ಬಾಳಿನ ಪಯಣದಲ್ಲಿ ಬೇರೆ ಬೇರೆ ಸಹಪ್ರಯಾಣಿಕರು ಅರಿಯೋಣ
ಪತಿ ನಂಬದ ಸತಿ ಬಾಳು
ಸತಿ ನಂಬದ ಪತಿ ಬಾಳು
ಸುಖ ಶಾಂತಿ ನೆಮ್ಮದಿ ಬಲಿಗಿಟ್ಟ ಕಿಚ್ಚೆಂದ ………………………ಅವ್ಯಕ್ತ
ಸತಿ ಕೈಗೊಂಬೆಯಾದ ಪತಿ
ಪತಿ ಕೈಗೊಂಬೆಯಾದ ಸತಿ
ಜೀವಂತ ಶವಗಳೆಂದ …………………………………………….ಅವ್ಯಕ್ತ
ದಂಪತಿಗಳ ಭಾವಚಿತ್ರ ಪ್ರಕಟಣೆಗೆ ಅವಕಾಶವಿದೆ . ನೀವು ಅನುಸರಿಸಿದ ಸೂತ್ರಗಳ ಪ್ರಕಟಣೆಗೆ ಅವಕಾಶ – ಮಿತಿ 20 ಪದಗಳು ಮಾತ್ರ