ದೈವಾರಾಧನೆ ಮಹತ್ವ Importance of divine worship
ಒಬ್ಬ ವ್ಯಕ್ತಿಗೆ ಹುಟ್ಟಿನಿಂದ ಸಾಯುವ ತನಕ ಕರೆದಾಗ ಬಂದು ಸಹಕಾರ ಕೊಟ್ಟು ರಕ್ಷಣೆ ಮಾಡಿ ಇಷ್ಟಾರ್ಥಗಳನ್ನು ಪೂರೈಸುವ ಶಕ್ತಿಯೇ ದೈವ ಮತ್ತು ದೇವರು.
ದೇವರು ಸ್ವತಃ ಬರಲು ವಿಭಿನ್ನ ಕಾರಣಗಳಿಂದ ಆಗದಿರುವುದರಿಂದ – ದೇವದೂತ ಎಂದು ಕರೆಸಿಕೊಳ್ಳುವ ದೈವ ಬಂದು ನಮ್ಮನ್ನು ಸದಾ ಕಾಪಾಡುತದೆ – ಇದು ನಮ್ಮ ದೇಶದ ಉನ್ನತ ಸಂಸ್ಕೃತಿಯ ಪಾಠ ನಾವು ಜೀರ್ಣಿಸಿಕೊಳ್ಳಬೇಕಾದ ಅವಶ್ಯಕತೆಯಿದೆ.
ದೇವರಾದನೆ ಮತ್ತು ದೈವಾರಾಧನೆಯ ಮೂಲ ಉದ್ದೇಶ ಮತ್ತು ವಾಸ್ತವದಲ್ಲಿ ಉತ್ತರ ದಕ್ಷಿಣದಷ್ಟು ಅಂತರ ನಾವು ಕಲ್ಪಿಸಿ – ಜನಸಾಮಾನ್ಯರು ವಿಮುಖರಾಗುವಂತೆ ಮಾಡಿ – ಅಮೃತವನ್ನು ಮಾತ್ರ ಅರಸಿಕೊಳ್ಳಬೇಕಾದ ಮಾನವ ಜನಾಂಗ ವಿಷವನ್ನು ಮಾತ್ರ ಹುಡುಕಿ ಹುಡುಕಿ, ತಾನು ಸೇವಿಸಿ ಅನ್ಯರಿಗೂ ಸೇವಿಸಲು ಪ್ರರೇಪಿಸಿ – ವಿಷಪೂರಿತ ಪ್ರಪಂಚ ಸದಾ ನಮಗೆ ಸ್ವಾಗತ ಕೋರುತಿದೆ.
ಹಳೆಯ ಮನೆಯನ್ನು ಕಿತ್ತು ಹಾಕಿ ಹೊಸ ಮನೆಯನ್ನು ಕಟ್ಟುವಲ್ಲಿಂದ ಹಿಡಿದು – ಅಂಗಡಿ ಉದ್ದಿಮೆ ದೈವಸ್ಥಾನ ದೇವಸ್ಥಾನ ಜೀರ್ಣೋದ್ದಾರ ಮಾಡುವಳಿಯವರೆಗೆ ಯಾವ ಕೆಲಸವನ್ನು ಮೊದಲು ಮಾಡಬೇಕು ಎಂಬ ಜಿಜ್ನಾಷೆ ಮನದಲ್ಲಿ ಹುಟ್ಟಿ ಮಾತಿನ ಮೂಲಕ ಬಿತ್ತರವಾಗಿ – ಕೊರಣದಿಂದಲೂ ಮಿಗಿಲಾದ ವೇಗವನ್ನು ಪಡೆದು ಮಾನವ ಬಂದುಗಳನ್ನೆಲ್ಲ ಕಾಡುವ ಮನೋ ರೋಗವಾಗಿದೆ.
ಸಂಸಾರ ಮತ್ತು ಸನ್ಯಾಸ – ಎರಡು ಬದುಕಿನಲ್ಲಿ ನಮಗೆ ಒಂದನ್ನು ಆಯ್ಕೆ ಮಾಡುವ ಅವಕಾಶ ಪ್ರತಿಯೊಬ್ಬನಿಗೂ ಇದೆ. ಇವುಗಳಲ್ಲಿ ಒಳ್ಳೆಯ ಮನಸ್ಸು ಮತ್ತು ಒಳ್ಳೆಯ ಬುದ್ದಿ ಇರುವವನೇ ಶೇಷ್ಠ – ಅವನ ಮನೆ ಅಂದರೆ ಬದುಕು – ಸಂಸಾರಿ ಯಾ ಸನ್ಯಾಸಿ ಯಾವುದು ಬೇಕಾದರೂ ಆಗಿರಬಹುದು. ದೇವರು ಕೊಡುವ ಭಿಕ್ಷೆ – ಜ್ಞಾನ ಸಂಪತ್ತು ಪ್ರತಿಯೊಬ್ಬನಿಗೂ ಕೊಡುತಾನೆ – ಉಪಯೋಗಿಸುವುದು ಬಿಡುವುದು ನಮಗೆ ಬಿಟ್ಟದ್ದು. ನಾವು ಕುರಿಗಳಾದಾಗ – ಅನ್ಯರ ಮಾತಿಗೆ ಬೆಲೆ ತೆತ್ತು ಬದುಕುವ ಜೀತ ಪದ್ಧತಿ – ನಮ್ಮ ಧಾರ್ಮಿಕ ಶೈಕ್ಷಣಿಕ ಮತ್ತು ಜ್ಞಾನದ ದಿವಾಳಿಯ ಸಂಕೇತ – ಚಿಂತನ ಮಂಥನ ಅನುಷ್ಠಾನ ನಮಗೆ ಬಿಟ್ಟದ್ದು.
ಪ್ರಧಾನಿಯಿಂದ ಹಿಡಿದು – ಘಣ್ಯ ವ್ಯಕ್ತಿಗಳು , ದೊಡ್ಡ ಉದ್ದಿಮೆದಾರರು , ಸನ್ಯಾಸಿಗಳು ಹಾಗು ಇತರರಿಗೆ ಅಂಗರಕ್ಸಕರು ಬೇಕೇ ಬೇಕು – ಇದು ಪ್ರಜಾಪದ್ದತಿಯ ನಿಯಮ – ಅಂಗರಕ್ಷಕನಿಂದ ಕೊಲೆ ನಡೆದುದು ಇದೆ. ಅರಸು ಪದ್ಧತಿ ಪರಂಪರೆಯ ಅಂಗರಕ್ಶಕ ದೈವ – ಅದು ದೇವರಿಗೆ ಮತ್ತು ಸಕಲ ಮಾನವರಿಗೆ – ಇದಕ್ಕೆ ನಮಗೆ ಬೇಕಾದುದು ಶ್ರದ್ದೆ ನಂಬಿಕೆ ಮತ್ತು ವರುಷಕ್ಕೆ ಎರಡು ಬಾರಿ ತಂಬಿಲ ಸೇವೆ (ತಾನು ತಿನ್ನುವ ಆಹಾರದ ಭಾಗವನ್ನು ಕೊಡುವುದು ) ದೈವ ಸನ್ಮಾರ್ಗಿಗೆ ದ್ರೋಹ ಎಂದು ಮಾಡುವುದಿಲ್ಲ.
ವ್ಯಾಪಾರ ಮತ್ತು ದರೋಡೆ ಮಾಡುವ ಜಗತ್ತಿನಲ್ಲಿ ಸೇವಾದಾರಿ ಮತ್ತು ವೃತ್ತಿಗೆ ಮಾನ್ಯತೆ ಕೊಡುವ ವೈದ್ಯ ಜೋತಿಷ್ಯ ನ್ಯಾಯವಾದಿ ………………ಹುಡುಕಿ ತನ್ನ ಕಷ್ಟ ಪರಿಹಾರ ಮಾಡುವುದು ನಮ್ಮ ಜವಾಬ್ದಾರಿ. ನಮ್ಮ ತಪ್ಪನ್ನು ವೃತಿ ತೊಡಗಿಸಿಕೊಂಡವರ ಮೇಲೆ ಹಾಕುವ ಕೆಟ್ಟ ಪ್ರವೃತಿಗೆ ವಿದಾಯ ಹೇಳೋಣ
ಬಾಹ್ಯ ದೇವರಾದನೆ ದೈವಾರಾಧನೆ ಆದುನಿಕ ಶೈಲಿ – ಮೂಲಕ್ಕೆ ಕೊಡಲಿಯೇಟು – ಶ್ರದ್ದೆ ಭಕ್ತಿ ನಂಬಿಕೆಗೆ ಒತ್ತು ಸಿಗಲಿ – ಕನಿಷ್ಠ ಸೌಲಭ್ಯ ಅನಿವಾರ್ಯ
ದೈವದ ಮೊರೆ ಹೋದರೆ ಮಾನವರಿಗೆ ಆಗುವ ಪ್ರಯೋಜನಗಳು
ಜೀರ್ಣೋದ್ದಾರ ಕಾರ್ಯಗಳಲ್ಲಿ – ಮಾನವ ವಿರೋಧಿಗಳಿಂದ, ಕಳ್ಳರಿಂದ ಇನ್ನಿತರರ ತೊಂದರೆಗಳಿಂದ ಪಾರಾಗಲು ದೈವದ ಕೆಲಸಕ್ಕೆ ಆದ್ಯತೆ ಅಗತ್ಯ
ಕನಿಷ್ಠ ಸಮಯ ಮತ್ತು ಕನಿಷ್ಠ ವೆಚ್ಚದಲ್ಲಿ ನ್ಯಾಯ
ನಿಮ್ಮ ಪತಿ ಪತ್ನಿ ತಂದೆ ತಾಯಿ ಮಕ್ಕಳು ಬಂದುಗಳು ………ದಾರಿ ತಪ್ಪಿದಲ್ಲಿ ನಿಮ್ಮ ಮೊರೆ ಮಾತ್ರ ಪರಿಹಾರ ದೊರಕಿಸಬಲ್ಲುದು
ನಮ್ಮ ಮನೆಗೆ ಬದುಕಿಗೆ , ನಿತ್ಯ ಬದುಕಿನುದ್ದಕ್ಕೂ – ನಿರಂತರ ರಕ್ಷಣೆ
ನಿಮ್ಮ ಭಾರ ಸದಾ ಹೊರುವ ನಿಮ್ಮ ನಿಷ್ಠಾವಂತ ಸೇವಕ
ಶೂನ್ಯ ವೆಚ್ಚದಲ್ಲಿ ಸಕಲ ವ್ಯವಸ್ಥೆ ಪೂರೈಕೆ
ಕಳ್ಳ ಕಾಕರ ಭಯವಿದೆಯೇ ದೈವಕ್ಕೆ ಮೊರೆ ಹೋಗಿ – ಕೆಲವೇ ಸಮಯದಲ್ಲಿ ಮಂಗ ಮಾಯಾ
ನಿಮ್ಮ ಕೆಲಷ ಕಾರ್ಯಗಳಲ್ಲಿ ಸೋಲಾಗುತಿದೆಯೇ – ದೈವದಿಂದ ಪರಿಹಾರ – ನೂರಕ್ಕೆ ನೂರು ಸತ್ಯ
ತ್ಯಾಗಿಗಳಿಗೆ, ಪುಣ್ಯ ಕೆಲಸ ಮಾಡುವವರಿಗೆ ರಕ್ಷಣೆ ನಾವು ಕೊಡಬೇಕು – ನಮ್ಮ ರಕ್ಷಣೆಗೆ ದೈವದ ಮೊರೆ ಅನಿವಾರ್ಯ
ಪ್ರತಿ ಕ್ಷೇತ್ರದ ಪವಿತ್ರ ಸ್ಥಳದ ಘನ ಕಾರ್ಯದ ಕಾರಣಕರ್ತ ಯಾರು ಎಂಬುದು ತಿಳಿದು – ಅಮೃತ ಯಾ ವಿಷದ ಹನಿ ಮುತ್ತುಗಳು ಬಾಯಿಂದ ಹೊರಬರಲಿ
ಪ್ರಕೃತಿ ಎಂದು ಕರ್ತವ್ಯ ಲೋಪ ಮಾಡುವುದಿಲ್ಲ – ನಾವು ಮಾನವರು ಸನ್ಮಾರ್ಗದಲ್ಲಿ ನಡೆಯುವುದು ಮಾತ್ರ ನಮ್ಮ ಕರ್ತವ್ಯ – ಪಾಲಿಸೋಣ