ಸ್ವಾವಲಂಬಿ ಮತ್ತು ಸಂತುಷ್ಟ ದೈವಾಲಯ ದೇವಾಲಯಕ್ಕೆ ವಿಭಿನ್ನ ದಾರಿಗಳು – ಆನ್ಲೈನ್ ಪೂಜೆ

ಶೇರ್ ಮಾಡಿ

ದೈವಾಲಯಕ್ಕೆ ಮತ್ತು ದೇವಾಲಯಕ್ಕೆ ಊರಿನ ಅಥವಾ ಅದಕ್ಕೆ ಸಂಬಂಧ ಪಟ್ಟ ಭಕ್ತರು ಜೀವನೋಪಾಯಕ್ಕೆ ಊರು ಬಿಟ್ಟು ಪರ ಊರುಗಳಲ್ಲಿ ಯಾ ಪರದೇಶಗಳಲ್ಲಿ ವಾಸಮಾಡುತಿರುವುದು ವಾಸ್ತವ. ಇಂತಹ ಜನರಿಂದ ವರುಷಕ್ಕೆ ಬಿಟ್ಟುಬಿಡಿ ಹಲವಾರು ವರುಶಗಳಿಗೊಮ್ಮೆ ಪ್ರಸ್ತುತ ಚಾಲ್ತಿಯಲ್ಲಿರುವ ಪೂಜಾ ಪದ್ಧತಿ ಪ್ರಕಾರ ಸೇವೆ ಪೂಜೆ ಮಾಡುವುದು ಕಷ್ಟ ಸಾಧ್ಯ ಎನ್ನುವ ಅರಿವು ನಮಗೆ ಬರಬೇಕಾದರೆ ನಾವು ಅವರ ನೆಲೆಯಲ್ಲಿ ನಿಂತು ಒಮ್ಮೆ ಅವಲೋಕನಮಾಡಬೇಕಾಗುತದೆ. ಇದು ಅವರ ತಪ್ಪು ಖಂಡಿತಾ ಅಲ್ಲವೇಅಲ್ಲಾ – ನಾವು ಈ ನಿಟ್ಟಿನಲ್ಲಿ ಅನುಕೂಲಕರ ವ್ಯವಸ್ಥೆ ಅಳವಡಿಸಬೇಕಾಗಿದೆ. ಕನಿಷ್ಠ ನೂರು ಕಿಲೋಮೀಟರು ದೂರದಿಂದ ಬಂದು ಪೂಜೆ ಮಾಡಿಸಿಕೊಂಡು ಹೋಗುವ ಒಬ್ಬ ವ್ಯಕ್ತಿಗೆ ಬರುವ ವಾಹನದಲ್ಲಿ ಬಂದರೆ ತಗಲುವ ವೆಚ್ಚ ಸ್ವತಃ ವಾಹನದಲ್ಲಿ ಬಂದರೆ ತಗಲುವ ವೆಚ್ಚ ಅವನ ಒಂದು ದಿನದ ಆದಾಯದ ಕೊರತೆ ಇತ್ಯಾದಿ ಒಟ್ಟು ಮೊತ್ತ ಸಾವಿರದಿಂದ ಕೆಲವು ಸಾವಿರಗಳಿಗೆ ತಲುಪಬಹುದು. ಆ ವ್ಯಕ್ತಿ ಬಂದು ಪೂಜೆ ಮಾಡಿಸ್ಕೊಂಡು ಹೋದರೆ ದೇವಾಲಯಕ್ಕೆ ಸಿಗುವ ಆದಾಯ ಸುಮಾರು ಹತ್ತು ರೂಪಾಯಿ ಹುಂಡಿಗೆ ಮತ್ತು ಶೇಕಡಾ ಹತ್ತು ಪೂಜೆಯಲ್ಲಿ ಸಿಗುವ ದೇವಾಲಯದ ಪಾಲು. ಇದನ್ನು ಮನಗಂಡ ವ್ಯಾಪಾರಿ ಮನೋಭಾವನೆಯ ಆಡಳಿತ ವ್ಯವಸ್ಥೆ ದೇವಾಲಯಕ್ಕೆ ಹೆಚ್ಚು ಆದಾಯ ದೊರಕಿಸಿಕೊಡಬಲ್ಲ ವಿನೂತನ ಪೂಜಾಪದ್ಧತಿ ಅನುಸರಿಸಿ ಬಲು ಕಷ್ಟದಿಂದ ದೇವಾಲಯಗಳನ್ನು ನಡೆಸಿಕೊಂಡು ಹೋಗುತಿದ್ದಾರೆ.
ದೈವ ದೇವಾಲಗಳ ಆಡಳಿತ ಮಂಡಳಿಗೆ ಕೆಲವೊಂದು ಸಲಹೆಗಳು – ಚಿಂತನ ಮಂಥನ ಅನುಷ್ಠಾನಕ್ಕಾಗಿ
ಊರಿನ ಮತ್ತು ಪರಊರಿನ ಪ್ರತಿ ಮನೆಯ ಪ್ರತಿ ವ್ಯಕ್ತಿಯಿಂದ ದೇವಲಯದಲ್ಲಿ ಸರ್ವಸೇವೆ, ಅಂದರೆ ದೇವಾಲಯದಲ್ಲಿ ಒಂದು ದಿನಕ್ಕೆ ತಗಲುವ ವೆಚ್ಚ
ಮನೆಯಿಂದ ಎಲ್ಲರ ಸೇವೆ ಬೇಕೇ? ಬೇಕು ನಮ್ಮ ನಿರೀಕ್ಷೆ ಎಲ್ಲರಿಗಾಗಿ, ಆದ್ದರಿಂದ ಎಲ್ಲರ ಸೇವೆ ಅನಿವಾರ್ಯ
ಆನ್ಲೈನ್ ಪೂಜೆ ಮಾಡಲು ಸಾಧ್ಯವೇ ? ಖಂಡಿತಾ ಸಾಧ್ಯ , ಅನೇಕರು ಅಳವಡಿಸಿದ್ದಾರೆ , ಕಾಲಕ್ಕೆ ತಕ್ಕಂತೆ ಕೋಲಾ ಅನಿವಾರ್ಯ
ಪ್ರಸಾದ ವಿತರಣೆ ಹೇಗೆ? dry fruits ಉಪಯೋಗ ಮಾಡಿ ಕಳುಹಿಸುವ ಸಾಧ್ಯತೆ ಇದೆ.
ಆನ್ಲೈನ್ ಪೂಜೆಯಲ್ಲಿ ನಿಗದಿ ಮಾಡುವವರಿಗೆ ಮತ್ತು ಪೂಜೆ ಮಾಡುವವರಿಗೆ ಕನಿಷ್ಠ ಪಾಲು ಅಗತ್ಯ
ಪರರಿಂದ ಪೂಜೆ,ದ್ರವ್ಯದಿಂದ ಪೂಜೆ , ಭಾವಪೂಜೆ – ಇವುಗಳಲ್ಲಿ ಭಾವಪೂಜೆ ಶ್ರೇಷ್ಠ – ಅದು ಇಲ್ಲಿ ನೆರವೇರುತದೆ.
ಕೋರೋಣ ಮುಂತಾದ ಕಠಿಣ ಸಂದರ್ಭಗಳಲ್ಲಿ ಕೂಡ ಪೂಜೆಗಳು ನಿತ್ಯ ನಿರಂತರ.
ಆನ್ಲೈನ್ ಬದುಕು ಆನ್ಲೈನ್ ಪೂಜೆಗೆ ಮುನ್ನುಗ್ಗಿ ಜನ ಸಾಮಾನ್ಯರಿಗೆ ದೈವಾಲಯ ದೇವಾಲಯಗಳ ಮಹತ್ವ ಅರಿವಾಗಿ ಸುಖ ಶಾಂತಿ ನೆಮ್ಮದಿ ಬಾಳು ನಮ್ಮದಾಗಲಿ

See also  ಜಿನಾಲಯ ಅಭಿಯಾನ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?