ಮಾರ್ಗದರ್ಶಿ🙏
ಸಾಧ್ಯತೆಗಳ ಬಗ್ಗೆ ಯೋಚಿಸುತ್ತಿದ್ದರೆ
ಅವಕಾಶಗಳೇ ಗೊಚರಿಸುತ್ತವೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
01-07-2025
🙏ಮಾರ್ಗದರ್ಶಿ🙏
ಸಂತೋಷವು ಆಭಾರಿ (ಉಪಕಾರ ಸ್ಮರಣೆಯ) ಹೃದಯ ಮತ್ತು ಸ್ವಸ್ಥ ಮನಸ್ಸಿನಿಂದ ದೂರವಿರಲು ಸಾಧ್ಯವಿಲ್ಲ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
02-07-2025
🙏ಮಾರ್ಗದರ್ಶಿ🙏
ಸಂತೋಷ ಎಂಬುವುದು
ನಾವು ಬಯಸಿದ್ದನ್ನೆಲ್ಲ ಪಡೆಯುವುದರಲ್ಲಿ ಇಲ್ಲ ಇರುವುದೆಲ್ಲವನ್ನು ಅನುಭವಿಸುವುದರಲ್ಲಿ ಇದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
03-07-2025
🙏ಮಾರ್ಗದರ್ಶಿ🙏
ಕೋಪದಲ್ಲಿ ಮಾಡಿದ ಆಯ್ಕೆಗಳನ್ನು
ರದ್ದುಗೊಳಿಸಲಾಗದು…..
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
04-07-2025
🙏ಮಾರ್ಗದರ್ಶಿ🙏
ನಾವು ಬಯಸಿದ್ದನ್ನು ಮಾಡಿದರೆ
ಅದು ಕೆಲಸ ಅನ್ನಿಸಿಕೊಳ್ಳುವುದಿಲ್ಲ
ಆಯಾಸವೂ ಆಗುವುದಿಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
05-07-2025
🙏ಮಾರ್ಗದರ್ಶಿ🙏
ಬದುಕನ್ನು ಬದುಕಿಸಿ
ಬದುಕಿ ಸಾಧಿಸಿ
ಸಾಧಿಸಿ ಬದುಕನ್ನು ಗೆಲ್ಲಿಸೋಣ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
06-07-2025
🙏ಮಾರ್ಗದರ್ಶಿ🙏
ಕೊನೆಗೆ ಕೊರಗುವ ಬದಲು
ಮೊದಲೇ ಮನಸ್ಸನ್ನು
ಸ್ಥಿಮಿತದಲ್ಲಿ ಇರಿಸಿಕೊಂಡರೆ
ಆಗಬಹುದಾದ ಅನಾಹುತವನ್ನು ತಪ್ಪಿಸಬಹುದು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
07-07-2025
🙏ಮಾರ್ಗದರ್ಶಿ🙏
ಕೋಪ, ಮದ, ಮತ್ಸರ, ಅಹಂಕಾರಗಳು
ತುಂಬಿಕೊಂಡಿರುವ ವ್ಯಕ್ತಿಗೆ
ಬಾಹ್ಯ ಶತ್ರುಗಳ ಅಗತ್ಯವಿಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
08-07-2025
🙏ಮಾರ್ಗದರ್ಶಿ🙏
ಇರುವುದನ್ನು ಆನಂದಿಸಬೇಕಾದರೆ
ಬರುವುದರ ಬಗ್ಗೆ ಹೆಚ್ಚು
ಚಿಂತಿಸುವುದನ್ನು ಬಿಡಬೇಕು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
09-07-2025
🙏ಮಾರ್ಗದರ್ಶಿ🙏
ಅಂದುಕೊಂಡದ್ದನ್ನು ಸಾಧಿಸುವಲ್ಲಿ
ವಿಫಲವಾಗಬಹುದು; ಆದರೆ ಕಲಿಕೆಯೇ
ಒಂದು ಸಾಧನೆಯಾಗಬಹುದು..
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
10-07-2025
🙏ಮಾರ್ಗದರ್ಶಿ🙏
ಕೆಲವೊಮ್ಮೆ ನಮ್ಮ ಹಾದಿಯಲ್ಲಿ
ಅಡಚಣೆಯಂತೆ ಕಾಣುವುದು
ವಾಸ್ತವವಾಗಿ ಬೇರೆ ದಿಕ್ಕಿನಲ್ಲಿ
ಚಲಿಸುವ ಅವಕಾಶವಾಗಿದೆ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
11-07-2025
🙏ಮಾರ್ಗದರ್ಶಿ🙏
ಬದುಕು ಬಹಳ ಸರಳವಾಗಿದೆ.
ಆದರೆ ಭಾವನೆಗಳು ಮತ್ತು ಆಲೋಚನೆಗಳು
ಬದುಕನ್ನು ಸಂಕೀರ್ಣಗೊಳಿಸುತ್ತದೆ !
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
12-07-2025
🙏ಮಾರ್ಗದರ್ಶಿ🙏
ಅಸಾಧ್ಯತೆಯ ವಿರುದ್ಧದ
ಗೆಲುವುಗಳೇ ಅತ್ಯುತ್ತಮ ಸಾಧನೆ.
ನಂಬಿಕೆ, ಛಲ, ಬದ್ಧತೆ
ಎಲ್ಲವನ್ನೂ ಗೆಲ್ಲಿಸುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
13-07-2025
🙏ಮಾರ್ಗದರ್ಶಿ🙏
ನಿಷ್ಠೆ ಎಂಬುದು
ಸನ್ನಿವೇಶದ ಆವಶ್ಯಕತೆ ಅಲ್ಲ
ಜೀವನದ ಜೀವಾಳ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
14-07-2025
🙏ಮಾರ್ಗದರ್ಶಿ🙏
ಬಂಡೆಯನ್ನೇ ಕೆತ್ತಿ ಸುಂದರ ವಿಗ್ರಹ
ಮಾಡಬಲ್ಲ ಮಾನವ
ಜೀವನವನ್ನೂ ಕೆತ್ತಿ ಸುಂದರ ಮಾಡಬಲ್ಲ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
15-07-2025
🙏ಮಾರ್ಗದರ್ಶಿ🙏
ಮಾಗಿ ಬಾಗುವ ಮನಸ್ಥಿತಿ ಇದ್ದಾಗ
ಯಶಸ್ಸು ಕಟ್ಟಿಟ್ಟ ಬುತ್ತಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
16-07-2025
🙏ಮಾರ್ಗದರ್ಶಿ🙏
ಸಾಧನೆಗೆ ಬಲ ಬೇಡ;
ಜೀವನದಲ್ಲಿ ಶ್ರದ್ಧೆ, ಶಿಸ್ತು, ವಿನಯ
ಸಾಧನೆಯ ಬುನಾದಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
17-07-2025
🙏ಮಾರ್ಗದರ್ಶಿ🙏
ಇತರರ ನಡವಳಿಕೆ
ನಮ್ಮನ್ನೇನೂ ಮಾಡಲಾರದಷ್ಟು
ಮನಸ್ಸು ಸರಳವಾದರೆ
ಅದುವೇ ಸಹಜತೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
18-07-2025
🙏ಮಾರ್ಗದರ್ಶಿ🙏
‘ಅರಿವು’ ಎಂಬುದು ಶ್ರೇಷ್ಠ ಪ್ರಜ್ಞೆ.
ಅರಿವು ನಮ್ಮನ್ನು ಕಾಪಾಡಿ
ಅಗತ್ಯ ನೆಮ್ಮದಿಯನ್ನೂ ತರುತ್ತದೆ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
19-07-2025
🙏ಮಾರ್ಗದರ್ಶಿ🙏
ಕ್ಷಮೆ ಕೇಳುವ
ಮತ್ತು ಕ್ಷಮಿಸುವ ಗುಣ
ದೈವತ್ವದ ಸಂಕೇತ ಹಾಗೂ
ನೆಮ್ಮದಿಗೆ ಬುನಾದಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
20-07-2025
🙏ಮಾರ್ಗದರ್ಶಿ🙏
ಕ್ಷಮೆ ಕೇಳುವ
ಮತ್ತು ಕ್ಷಮಿಸುವ ಗುಣ
ಸಕಾರಾತ್ಮಕ ಚಿಂತನೆಗೆ ರಹದಾರಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
21-07-2025
🙏ಮಾರ್ಗದರ್ಶಿ🙏
ಕೊಟ್ಟದ್ದನ್ನು ನೆನೆಯದೆ
ಪಡೆದದ್ದನ್ನು ಮರೆಯದೇ
ಇರುವವರೇ ಧನ್ಯರು
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
22-07-2025
🙏ಮಾರ್ಗದರ್ಶಿ🙏
ದೈವ ಅನುಗ್ರಹವಿಲ್ಲದೆ
ಕಾರ್ಯಸಿದ್ಧಿಯಾಗದು;
ಪ್ರಯತ್ನವಿಲ್ಲದೆ ದೈವ ಸಹಾಯ ದೊರಕದು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
23-07-2025
🙏ಮಾರ್ಗದರ್ಶಿ🙏
ಎಲ್ಲಾ ಅರಿತವನು ಜ್ಞಾನಿ ಅಲ್ಲ.
ಎಲ್ಲರೊಂದಿಗೆ ಮೃದುತ್ವ
ಭಾವದೊಂದಿಗೆ ಇದ್ದು
ನಿರಹಂಕಾರಿಯಾಗಿದ್ದವನೇ ಜ್ಞಾನಿ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
24-07-2025
🙏ಮಾರ್ಗದರ್ಶಿ🙏
ಸೋಲೆಂಬುದು ಗೆಲುವಿನ ಹಾದಿಯಲ್ಲಿ
ಸಿಗುವ ಮತ್ತೊಂದು ಅವಕಾಶ.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
25-07-2025
🙏ಮಾರ್ಗದರ್ಶಿ🙏
ಎಲ್ಲರೂ ಯಾವಾಗಲೂ
ಗೆಲ್ಲಲು ಸಾಧ್ಯವಿಲ್ಲ.
ಸೋಲು ಗೆಲುವಿನ ಮೆಟ್ಟಿಲು.
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
26-07-2025
🙏ಮಾರ್ಗದರ್ಶಿ🙏
ನಿರಂತರ ಪರಿಶ್ರಮದಿಂದ
ನಮಗೆ ನಾವೇ ನಿರ್ಮಿಸಿಕೊಳ್ಳಬಹುದಾದ
ಸುಸಂದರ್ಭವೇ ಅವಕಾಶ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
27-07-2025
🙏ಮಾರ್ಗದರ್ಶಿ🙏
ಎಲ್ಲಾ ಕೆಟ್ಟ ಪರಿಸ್ಥಿತಿಗಳೂ
ಒಂದೊಂದು ಪಾಠವನ್ನು ಕಲಿಸುತ್ತವೆ.
ಅದು ಕಲಿಸುವ ಕೊನೆಯ ಪಾಠವೇ
“ಆಗೋದೆಲ್ಲ ಒಳ್ಳೆದಕ್ಕೆ”
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
28-07-2025
🙏ಮಾರ್ಗದರ್ಶಿ🙏
ಕಷ್ಟ ನಷ್ಟಗಳನ್ನು
ಮೆಟ್ಟಿ ನಿಂತಾಗ ಮಾತ್ರ
ನಮ್ಮಿಷ್ಟದ ಬದುಕನ್ನು
ಪಡೆಯುವುದು ಸಾಧ್ಯ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
29-07-2025
🙏ಮಾರ್ಗದರ್ಶಿ🙏
ಕಷ್ಟವೂ ದೊಡ್ಡದಲ್ಲ
ಖುಷಿಯೂ ದೊಡ್ಡದಲ್ಲ
ಎಲ್ಲವನ್ನೂ ನಿಭಾಯಿಸುವ
ಮನಸ್ಸು ದೊಡ್ಡದು…
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
30-07-2025
🙏ಮಾರ್ಗದರ್ಶಿ🙏
ದೋಷ ಹುಡುಕುವುದು ದೊಡ್ಡ ಕೆಲಸವಲ್ಲ
ಅದನ್ನು ಎಲ್ಲರೂ ಮಾಡುತ್ತಾರೆ
ಪರಿಹಾರ ಹುಡುಕುವುದು ದೊಡ್ಡ ಕೆಲಸ
🙏ಶುಭೋದಯ🙏
ಡಾ.ಎ.ಜಯಕುಮಾರ ಶೆಟ್ಟಿ
31-07-2025