ರಸ್ತೆ ಬಳಕೆದಾರರ ಒಕ್ಕೂಟ – Road users federation

ಶೇರ್ ಮಾಡಿ
ರಸ್ತೆಯನ್ನು ಪ್ರತಿ ಮಾನವರು ಒಂದಲ್ಲ ಒಂದು ರೀತಿಯಲ್ಲಿ ಬಳಸುತಿರುತಾರೆ – ವಾಹನ ಇದ್ದವರು ಇಲ್ಲದವರು, ಪ್ರಯಾಣಕ್ಕಾಗಿ ಯಾ ಸಾಮಾನುಗಳ ಸಾಗಾಣಿಕೆಗೆ, ಸಭೆ ಸಮಾರಂಗಳಲ್ಲಿ ಭಾಗವಹಿಸಲು , ರೋಗಿಗಳನ್ನು ಆಸ್ಪತ್ರೆಗೆ ಸೇರಿಸಲು …….ಇತ್ಯಾದಿ ಬಹು ದೊಡ್ಡ ಪಟ್ಟಿ ಬೆಳೆಯುತ್ತಿದೆ. ಆದರೆ ಊಹೆಗೂ ನಿಲುಕದಷ್ಟು ಅವಶ್ಯಕತೆ ಇರುವ ರಸ್ತೆಗಳನ್ನು ಗುಂಡಿ ಕೆಸರು ಮುಕ್ತ, ಚರಂಡಿ ಸಹಿತ , ಸ್ವಚ್ಛ ರಸ್ತೆಯನ್ನಾಗಿಸುವ ಹೊಣೆ ಯಾರದ್ದು? ಸರಕಾರದತ್ತ ಬೆರಳು ತೋರಿಸಿ ಕೈಕಟ್ಟಿ ಕುಳಿತರೆ ಸಾಕೆ? ಸರಕಾರದಿಂದ ಮಾತ್ರ ಹಣದ ಹೊಳೆಯನ್ನು ಹರಿಸಿದರೆ ಗುರಿ ತಲುಪಬಹುದೇ? . ಈ ಪ್ರಶ್ನೆಗಳಿಗೆ ಉತ್ತರ – ರಸ್ತೆ ಬಳಕೆದಾರರಾದ ನಾವೆಲ್ಲರೂ ಸರಕಾರದ ಜೊತೆಗೆ ರಸ್ತೆ ಬಳಕೆದಾರರ ಒಕ್ಕೂಟದ ಮೂಲಕ ಕೈಜೋಡಿಸುವುದು.ಇತ್ತ ಸಂಕ್ಷಿಪ್ತ ಪಕ್ಷಿನೋಟ ಕೆಳಗಿನಂತಿದೆ
೧ .ಪ್ರತಿ ಊರು ಗ್ರಾಮಪಂಚಾಯತ್ ಮಟ್ಟದಲ್ಲಿ ರಸ್ತೆ ಬಳಕೆದಾರರ ಒಕ್ಕೂಟ ಸ್ಥಾಪನೆ
೨ ಊರಿನ ಗುತ್ತು ಮನೆಯವರ ಮತ್ತು ಗ್ರಾಮಪಂಚಾಯತ್ ಸದಸ್ಯರ ಮುಂದಾಳತ್ವ
೩ ಕನಿಷ್ಠ ಬಳಕೆದಾರ ಒಂದು ದಿನದ ದುಡಿಮೆ ಯಾ ಮಜೂರಿ ವೆಚ್ಚ ಬರಿಸಲು ಮನವರಿಕೆ ಮಾಡುವುದು
೪ ಗುಂಡಿ ಮುಕ್ತ ಕೆಸರು ಮುಕ್ತ ರಸ್ತೆಯಿಂದ ವಾಹನಕ್ಕೆ ಪ್ರಯಾಣಕ್ಕೆ ನಮ್ಮ ದೇಹಕ್ಕೆ ಸಮಯ ಪರಿಪಾಲನೆಗೆ -ಪ್ರಯೋಜನದ ಬಗ್ಗೆ ಅರಿವು ಮೂಡಿಸುವುದು
೫ ನಿತ್ಯ ಪ್ರಯಾಣದ ನಂತರ ವಯಾನ ತೊಳೆಯುವ ಅನಿವಾರ್ಯತೆ ದೂರದಿಂದ ದೂರ
೬. ಸಣ್ಣ ಗುಂಡಿ ಅದಾಗಲೇ ಮುಚ್ಚಿದರೆ ದೊಡ್ಡ ಗುಂಡಿಗಳಾಗುವ ಸಾಧ್ಯತೆ ಇಲ್ಲವೇ ಇಲ್ಲ
೭. ಚರಂಡಿಯನ್ನು ಕ್ಲಪ್ತ ಸಮಯದಲ್ಲಿ ಸರಿ ಮಾಡದಿದ್ದರೆ ರಸ್ತೆ ಪೂರ್ತಿ ಹಾಳಾಗುವ ಬಗ್ಗೆ ತಿಳಿಯಪಡಿಸಿ – ಸನ್ನದ್ಧರಾಗುವುದು
೮. ಊರಿನ ಜಾತ್ರೆಯಲ್ಲಿ ಸಂಗ್ರವಾಗುವ ಹಣದಲ್ಲಿ ಕನಿಷ್ಠ ೨೦% ಇದಕ್ಕೆ ಮೀಸಲಿಡುವುದು
೯. ಸರಕಾರ ಮತ್ತು ಸಾರ್ವಜನಿಕರು ಒಟ್ಟಾಗಿ ಸಕಲ ಮಾಧ್ಯಮ ಮೂಲಕ ಈ ಕ್ಷಣದಿಂದಲೇ ಜಾಗ್ರತಿ ಮೂಡಿಸುವುದು
೧೦ ತನ್ನ ಸಂಪತ್ತನ್ನು ನಾಡಿನ ಜನತೆಯ ಉದ್ದಾರಕ್ಕಾಗಿ ವಿನಿಯೋಗಿಸುವ – ಟಾಟಾ ಸಮುಸ್ಟೆ, ಪೂಜ್ಯ ಧರ್ಮಸ್ಥಳ ಖಾವಂದರು , ಇನ್ಫೋಸಿಸ್ ಸುಧಾಮೂರ್ತಿ – ಮುಂತಾದವರ ತ್ಯಾಗದ ಮುಂದೆ ನಮಗಾಗಿ ನಾವು ಕಿಂಚಿತ್ತೂ ತ್ಯಾಗದತ್ತ ಗಮನ ಹರಿಸೋಣ
೧೧ ಈ ತೆರನಾದ ಒಕ್ಕೂಟಗಳಿಗೆ ಆನ್ಲೈನ್ ಪಾವತಿಗೆ ಅವಕಾಶ ಕೊಡೋಣ
೧೨. ಇದು ನನ್ನ ಅಭಿಪ್ರಾಯ ಮಾತುಗಳು ಕಂಡಿತಾ ಅಲ್ಲವೇ ಅಲ್ಲ – ಜನ ಮನದ ಮನದಾಳದ ಮಾತು – ಈ ವೇದಿಕೆಯ ಮೂಲಕ ನಮಗಾಗಿ
See also  Bride bridegroom Bulletin -ವದು ವರರ - ಬುಲೆಟಿನ್

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?