
ದೇವರ ಅಭಿಪ್ರಾಯದ ಅಂಕಿತ – ರಾಷ್ಟ್ರಪತಿಯ ಅಂಕಿತದಂತೆ – ನಮ್ಮಲ್ಲಿ ನಾವು ರೂಢಿಸಿಕೊಳ್ಳುವ ಪರಿಪಾಠ ಬೆಳೆದರೆ – ಅದು ಕಾಲಕ್ರಮೇಣ – ಸಮಾಜದ ಸುಖ ಶಾಂತಿ ನೆಮ್ಮದಿಗೆ ಬಿದ್ದ ಬೆಂಕಿ ಹತೋಟಿಗೆ ಬರಬಹುದು. ಇದು ನಾವು ನಮ್ಮ ಪೂರ್ವಜರು ಅಳವಡಿಸಿಕೊಂಡು ಬಂದಿದ್ದ – ವಿದೇಶಿ ಸಂಪ್ರದಾಯದಿಂದ ಮೂಲೆಗುಂಪಾದ – ನಮ್ಮೆಲ್ಲ ಸಮಸ್ಯಗಳಿಗೆ ಪರಿಹಾರ ಒದಗಿಸಬಲ್ಲ ಅತಿ ಉನ್ನತ ಮಾರ್ಗ. ದೇವರ ಅಭಿಪ್ರಯ ಕೇಳುವ ವಿಚಾರದಲ್ಲಿ ಪ್ರದೇಶವಾರು ಭಿನ್ನತೆಯಿದ್ದರೂ – ಅಂತಿಮವಾಗಿ ಭಿನ್ನತೆ ಏಕತೆಯಾಗಿ ಇಚ್ಚಿಸಿದ ಫಲ ಜನರ ಪಾಲಿಗೆ ಸಿಗುತದೆ.
ವ್ಯಕ್ತಿ ಯಾವುದೇ ಉನ್ನತ ಸ್ಥಾನದಲ್ಲಿದ್ದರು – ಜನಾಭಿಪ್ರಾಯ ನೂರಕ್ಕೆನೂರು ಏಕಾಭಿಪ್ರಾಯವಾಗಿದ್ದರು ಕೂಡ – ದೇವರ ಅಭಿಪ್ರಾಯಕ್ಕೆ ಮಾನ್ಯತೆ ಕೊಡದಿದ್ದಲ್ಲಿ ಸ್ವರ್ಗದ ಬದುಕಿನ ಬದಲು ನರಕದ ಬಾಳು ಜನರ ಪಾಲಿಗೆ ಕಟ್ಟಿಟ್ಟ ಬುತ್ತಿ. ಇಷ್ಟು ಮಾತ್ರವಲ್ಲದೆ ಮುಂದೆ ಆಗಬಹುದಾದ ದುರ್ಘಟನೆಗಳಿಗೆ ನಾವೇ ಕಾರ್ಯಕರ್ತರಾಗುತೇವೆ.