ಅವ್ಯಕ್ತ ವಚನಗಳು

Share this

ಆಂತರಿಕ ಆಡಂಬರದ ದೈವಾರಾಧನೆ ಅಂದು
ಬಾಹ್ಯ ಆಡಂಬರದ ದೈವಾರಾಧನೆ ಇಂದು
ದೈವಕ್ಕೆ ಆಂತರಿಕ ಆಡಂಬರ ಬೇಕೆಂದ …………………………………….ಅವ್ಯಕ್ತ

ತನ್ನ ತಪ್ಪನ್ನು ಒಪ್ಪಿಕೊಳ್ಳದಂತ
ದೈವ ನರ್ತಕ ಯಜಮಾನ
ದೈವ ದೈವಾರಾಧನೆಗೆ ಕಂಟಕರೆಂದ ……………………………………….ಅವ್ಯಕ್ತ

ರಾಶಿಗೆ ಪ್ರಶ್ನೆ ಪೇಳುವ ಜ್ಯೋತಿಷ್ಯ
ತನ್ನ ಅನುಭವ ಮಾತು ಪೇಳುತಿರೆ
ನಿನ್ನ ಜ್ಯೋತಿಷ್ಯಕ್ಕೆ ಇತಿಶ್ರೀ ನಿನ್ನಿಂದ ……………………………………….ಅವ್ಯಕ್ತ

ರೋಗಕ್ಕೆ ಮದ್ದು ದೈವ ದೇವರು ವೈದ್ಯರು ಕೊಡುತಿಹರು
ರೋಗಕ್ಕೆ ಮೂಲ ಅರಿತು ರೋಗಿ ಆಯ್ಕೆ ಮಾಡದಿದ್ದೊಡೆ
ಬಾಳಿನ ಸುಖ ಶಾಂತಿ ನೆಮ್ಮದಿ ಗಗನ ಕುಸುಮವೆಂದ …………………………….. ಅವ್ಯಕ್ತ

See also  Avyaktha Vachanagalu

Leave a Reply

Your email address will not be published. Required fields are marked *

How can I help you?
error: Content is protected !!! Kindly share this post Thank you