ಬೇರೆ ಬೇರೆ ರೀತಿಯ ಒಕ್ಕೂಟಗಳು ಸಂಘ ಸಮುಸ್ತೆಗಳು – ಹುಟ್ಟು ಮತ್ತು ಸಾವುಗಳನ್ನು ದಿನ ನಿತ್ಯ ಮಾಧ್ಯಮಗಳ ಮೂಲಕ ನಮ್ಮೆಲ್ಲರ ಅರಿವಿಗೆ ಸದಾ ಬರುತಿದೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ನೋಡಿದಾಗ ಆವಿಸ್ಕಾರ ಒಕ್ಕೂಟಗಳ ಅನಿವಾರ್ಯತೆ ಎದ್ದು ಕಾಣುತಿದೆ . ಪ್ರತಿ ವಲಯಗಳಲ್ಲಿ ಕೂಡ ಅಜ್ಜ ನಟ್ಟ ಆಲದ ಮರದ ಕೆಳಗೆ ಬದುಕುವ ವಿಷ ವರ್ತುಲದಿಂದ ಹೊರ ಬರಲಾಗದೆ ನಮ್ಮ ಏಳಿಗೆಗೆ ಮಾತ್ರ ಕೊಡಲಿಯೇಟು ಆಗುವುದಲ್ಲದೆ ನಮ್ಮ ಮುಂದಿನ ಪೀಳಿಗೆಯನ್ನು ಕಟ್ಟಿಹಾಕುವಲ್ಲಿ ಯಶಸ್ವಿ ಆಗಿರುವುದು ಅತ್ಯಂತ ದೊಡ್ಡ ದುರಂತ.
ಆವಿಸ್ಕಾರಗಳಿಂದ ಹೆಚ್ಚಿನ ಉದ್ಯೋಗ ಅವಕಾಶಗಳು, ಉತ್ಪಾದನಾ ವೆಚ್ಚದಲ್ಲಿ ಗಣನೀಯ ಇಳಿಕೆ, ಮಿತವಾದ ಪರಿಶ್ರಮ ಇತ್ಯಾದಿಗಳ ದೊಡ್ಡ ಪಟ್ಟಿ ನಮ್ಮ ಮುಂದೆ ಇದ್ದರು ಅಪಾಯ ಎದುರಿಸಲು ಹಿಂದೇಟು ಹಾಕುತಿದ್ದೇವೆ. ಒಕ್ಕೂಟ ಯಾ ಸಂಘಟನೆಯ ಬಲದಿಂದ ಈ ಸಾಧನೆ ಮಾಡುವತ್ತ ಗಮನ ಹರಿಸೋಣ