ಪ್ರತಿ ಊರಿನಲ್ಲಿ ಕೃಷಿಕರ ಆವಿಸ್ಕಾರ ಒಕ್ಕೂಟಗಳು ರಚನೆಯಾಗಿ – ಪ್ರತಿ ವಿಭಾಗದಲ್ಲಿ ಎದುರಿಸುವ ಸಮಸ್ಯೆಗಳತ್ತ ಚಿಂತನೆ ಹರಿಸಿ – ಹೊಂದಾಣಿಕೆ ಮಾಡಿಕೊಂಡು ಕೃಷಿಕರ ಸಕಲ ಸಂಕಷ್ಟಗಳನ್ನು ಪರಿಹರಿಸಿ – ಈ ವಲಯದಲ್ಲಿ ತೊಡಗಿರುವವರಿಗೆಲ್ಲ ನೆಮ್ಮದಿ ಜೀವನದತ್ತ ಪಕ್ಷಿನೋಟ.
ಯಾಂತ್ರಿಕರಣದ್ದತ್ತ
ಮದ್ದು ಬಿಡುವ ಯಂತ್ರ , ಹುಲ್ಲು ಕತ್ತರಿಸುವ ಯಂತ್ರ , ಫೈಬರ್ ಡೋಂಟಿ , ಮಣ್ಣು ಸಾಗಿಸುವ ಯಂತ್ರ , ಇತ್ಯಾದಿ ದೊಡ್ಡ ಪಟ್ಟಿ ನಮ್ಮ ಮುಂದಿದೆ.
ಬಹುತೇಕ ರೈತರು ಸಣ್ಣ ಹಿಡುವಳಿದಾರರು. ಪ್ರತಿಯೊಬ್ಬರು ಯಾಂತ್ರಿಕರಣದತ್ತ ಒಲವು ಹೊಂದಿದ್ದರು ನಿಜ ಜೀವನದಲ್ಲಿ ಅಧಿಕ ಬಂಡವಾಳ ಕನಿಷ್ಠ ಉಪಯೋಗ ಅವನನ್ನು ಇಕ್ಕಟಿಗೆ ಸಿಲುಕಿಸುವುದರ ಜೊತೆಗೆ ಕನಿಷ್ಠ ಉಪಯೋಗ ಮಾಡ ಬೇಕಾದ ಯಂತ್ರಗಳು ಗರಿಷ್ಠ ದುರಸ್ತಿ ಮಾಡುವ ಅನಿವಾರ್ಯತೆ ಎದುರಾಗುತದೆ. ಈ ನಿಟ್ಟಿನಲ್ಲಿ ಕನಿಷ್ಠ ಹತ್ತು ಮಂದಿ ಒಟ್ಟಾಗಿ ಒಕ್ಕೂಟ ರಚಿಸಿ ಯಾಂತ್ರಿಕರಣವನ್ನು ಪೂರಕವಾಗಿ ಪರಿವರ್ತಿಸುವ ಸಾಧ್ಯತೆ ಇದೆ. ಉದ್ಯೋಗ ಯಾ ಉದ್ಯಮ ಬಯಸುವವರು ಇತ್ತ ಗಮನ ಹರಿಸಿದರೆ – ಪೇಟೆ ಪಟ್ಟಣಗಳಲ್ಲಿ ಕೆಲಸಗಾರರನ್ನು ಒದಗಿಸುವ ವ್ಯವಸ್ಥೆಯನ್ನೇ ಹುಟ್ಟು ಹಾಕಿ ಮಧ್ಯವರ್ತಿಗಳೆಂಬ ಗರಿಷ್ಠ ಉದ್ಯೋಗ ಸೃಷ್ಟಿ ಸಾಧ್ಯತೆ ಇದೆ .
ಕೂಲಿಯಾಳುಗಳ ಸಮಸ್ಯೆ
ಇದು ನಾವು ಹುಟ್ಟು ಹಾಕಿದ ಸಮಸ್ಯೆ, ಪರಿಹಾರ ನಮ್ಮಲ್ಲಿದೆ, ಚಿಂತನ ಮಂಥನ ಅನುಷ್ಠಾನದತ್ತ ಮುನ್ನಡೆದರೆ ಸಾಕು ಎಲ್ಲ ಸಮಸ್ಯೆಗಳು ಪರಿಹಾರ ಆಗಬಹುದು. ಈಗಾಗಲೇ ಕೆಲವೊಂದು ಪ್ರದೇಶಗಳಲ್ಲಿ ಪ್ರತಿ ವೃತ್ತಿ ಮಾಡುವವರು ಗುಂಪಗಳನ್ನು ಮಾಡಿಕೊಂಡು ಯಾ ಏಜೆಂಟ್ ಬೇಕಾದವರಿಗೆ ಅಗತ್ಯಕ್ಕೆ ತಕ್ಕಂತೆ ಆಳುಗಳನ್ನು ಕಳುಹಿಸುವ ವ್ಯವಸ್ಥೆ ಇದ್ದು , ಈ ವ್ಯವಸ್ಥೆ ಪ್ರತಿ ಊರಿಗೂ ವಿಸ್ತರಿಸಬೇಕಾಗಿದೆ.
ಯಾವ ಯಾವ ರೀತಿಯ ಒಕ್ಕೂಟ ಯಾ ಗುಂಪು ಯಾ ಏಜೆನ್ಸಿಗಳು ಬೇಕಾಗಬಹುದು
ಅಡಿಕೆ ಹೆಕ್ಕುವವರ ” ”
ಅಡಿಕೆ ಸುಳಿಯುವವರ
ಅಡಿಕೆಗೆ ಕೊಯ್ಲು ಮತ್ತು ಮದ್ದು ಬಿಡುವವರ
ಫೈಬರ್ ಡೋಂಟಿ ಬಾಡಿಗೆ ಕೊಟ್ಟರೆ ದಿನ ಮಜೂರಿಯಲ್ಲಿ ಅಡಿಕೆ ತೆಂಗು ತೆಗೆಯುವವರ
ತೋಟಕ್ಕೆ ಮಣ್ಣು ಹಾಕುವವರ – ಬುಟ್ಟಿಯಲ್ಲಿ ಹೊತ್ತು ಹಾಕುವವರು ಮತ್ತು ಯಂತ್ರ ಬಳಸಿ ಹಾಕುವವರ
ಅಡಿಕೆ ಬುಡ ಬಿಡಿಸಿ ಮುಚ್ಚುವವರ
ಹಟ್ಟಿ ಗೊಬ್ಬರ, ಕುರಿ ಗೊಬ್ಬರ , ಕೋಳಿ ಹಿಕ್ಕೆ ಹಾಕುವವರ
ವಿದ್ಯಾರ್ಥಿಗಳು ಮತ್ತು ವಿದ್ಯಾ ಸಂಸ್ಥೆಗಳು ಇತ್ತ ಗಮನ ಹರಿಸುವ ಅವಶ್ಯಕತೆ ಎದ್ದು ಕಾಣುತಿದೆ