ಶ್ರೀ ಉಮಾಮಹೇಶ್ವರ ದೇವಸ್ಥಾನ ಒರುಂಬಾಲಿನಲ್ಲಿ ಮಹಾಶಿವರಾತ್ರಿ ಮಹೋತ್ಸವ

ಶೇರ್ ಮಾಡಿ

🔱ಓಂ ಶ್ರೀ ಉಮಾಮಹೇಶ್ವರಾಯ ನಮಃ 🔱

🔱🔹  ದಿನಾಂಕ 18-02-2023 ಶನಿವಾರ ಮಹಾಶಿವರಾತ್ರಿಯ ಪ್ರಯುಕ್ತ ದೇವಸ್ಥಾನದಲ್ಲಿ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನೆ,  ಮಹಾ ಪೂಜೆ  ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ. 🔹

 

🔸ಕುಣಿತ ಭಜನೆ : ಸಂಜೆ 6 ರಿಂದ

🔸ಅನ್ನ ಸಂತರ್ಪಣೆ : ರಾತ್ರಿ 9 ಗಂಟೆಗೆ.

🔸ಮಹಾ ಶಿವರಾತ್ರಿ ವಿಶೇಷ ಪೂಜೆ : ರಾತ್ರಿ ಗಂಟೆ 12ಕ್ಕೆ.

 
🕉️ ಅಧ್ಯಕ್ಷರು /ಕಾರ್ಯದರ್ಶಿ/ ಅರ್ಚಕರು/ ಆಡಳಿತ ಮೊಕ್ತೇಸರರು ಮತ್ತು ಸರ್ವ ಸದಸ್ಯರು ಹಾಗೂ ಊರ ಹತ್ತು ಸಮಸ್ತರು 🕉️

ಕ್ಷೇತ್ರ ಪರಿಚಯ

ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನ ಪಶ್ಚಿಮ ಘಟ್ಟದ ತಪ್ಪಲಿನ ಸುಂದರ ಪ್ರಕೃತಿಯ ಮಡಿಲಿನಲ್ಲಿದೆ. ಸುಮಾರು ೩೬೦ ವರ್ಷಗಳ ಇತಿಹಾಸವಿರುವ ದೇವಾಲಯವನ್ನು 70 ವರ್ಷಗಳ ಹಿಂದೆ ಶ್ರಿಮಾನ್ ಕೃಷ್ಣಪ್ಪ ಗೌಡ ಮಿತ್ತಂಡೇಲು ಇವರು ಕಾಡಿನ ಮಧ್ಯದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಈ ದೇವಾಲಯವನ್ನು ಕಂಡು ಸ್ವತಃ ಅವರೇ ವೃತ ನಿಯಮಗಳನ್ನು ಪಾಲಿಸಿ ಅವರಿಗೆ ತಿಳಿದ ರೀತಿಯಲ್ಲಿ ಪೂಜೆ ಪುನಸ್ಕಾರಗಳನ್ನು ನಡೆಸಿಕೊಂಡು ಬಂದರು.ತದನಂತರದಲ್ಲಿ ದೇವರ ಪೂಜಾ ಕಾರ್ಯಗಳು ಬ್ರಾಹ್ಮಣ ಪುರೋಹಿತರಿಂದ ನಡೆಯುತ್ತಾ ಬಂದವು. 2006-07 ರ ಇಸವಿಯಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮ ಗಳು ನಡೆದು 2009 ನೇ ಇಸವಿಯಲ್ಲಿ ಬ್ರಹ್ಮ ಕಲಶಾದಿ ಜಾತ್ರೋತ್ಸವ ಕಾರ್ಯಕ್ರಮ ಗಳು ನಡೆದು ನಿತ್ಯ ಪೂಜೆ, ಸಂಕ್ರಮಣ ಪೂಜೆ ಮತ್ತು ಭಜನಾ ಸೇವೆ , ಶಿವರಾತ್ರಿ ಪೂಜೆ ವಿವಿಧ ತಂಡಗಳಿಂದ ವಿಶೇಷ ಭಜನಾ ಕಾರ್ಯಕ್ರಮ, ಯುಗಾದಿ ಪೂಜೆ, ವಾರ್ಷಿಕ ಜಾತ್ರೋತ್ಸವ , ಕ್ರೀಡಾ ಕೂಟ ಗಳು ನಡೆದುಕೊಂಡು ಬಂದಿದೆ. ಕ್ಷೇತ್ರದಲ್ಲಿ ಮಹಾಗಣಪತಿ, ನಾಗಬ್ರಹ್ಮ , ಮಾತ್ರವಲ್ಲದೆ ಪರಿವಾರ ದೈವಗಳಾಗಿ ಚಾಮುಂಡೇಶ್ವರಿ, ಗುಳಿಗ , ಪಂಜುರ್ಲಿ, ಹಾಗೂ ಕಲ್ಲುರ್ಟಿ ದೈವಗಳು ಆರಾಧಿಸಲ್ಪಡುತ್ತಿದೆ.
ಈಗ ದಿನನಿತ್ಯ ಪೂಜಾ ವಿಧಾನಗಳು ಸುಸೂತ್ರವಾಗಿ ನಡೆದುಕೊಂಡು ಬರುತ್ತಿದ್ದು, ಜನರ ಇಷ್ಟಾರ್ಥಗಳನ್ನು ಸದಾ ನೆರವೇರಿಸುತ್ತಾ ಒರುಂಬಾಲಿನಲ್ಲಿ ನೆಲೆಸಿದ್ದಾರೆ. ಕ್ಷೇತ್ರದಲ್ಲಿ ದಿನನಿತ್ಯ ಬೇರೆ ಬೇರೆ ಸೇವಾ ಕಾರ್ಯಗಳು ನಡೆಯುತ್ತಿದೆ.
ಪ್ರತಿಷ್ಠಾ ದಿನದಲ್ಲಿ ಪ್ರತಿ ವರ್ಷವೂ ವಾರ್ಷಿಕ ಮಹೋತ್ಸವ, ಮಹಾ ಶಿವರಾತ್ರಿಯಂದು ವಿಶೇಷ ಕಾರ್ಯಕ್ರಮ, ನಾಗರಪಂಚಮಿ, ದೀಪಾವಳಿ, ಪತ್ತನಾಜೆ ಮುಂತಾದ ದಿನಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದೆ.
See also  ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಇಚ್ಲಂಪಾಡಿ ಬೀಡಿಗೆ ಸಂಬಂಧ ಪಟ್ಟದ ದೈಯೊಂಕ್ಲು ಗುಡ್ಡೆಯ ನೇಮೋತ್ಸವ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?