ಸೇವಾ ಜಾತಿ – ವ್ಯಾಪಾರ ಜಾತಿ – ದರೋಡೆ ಜಾತಿ, Service Caste – Trading Caste – Robbery Caste

ಶೇರ್ ಮಾಡಿ

ನಮ್ಮ ಬದುಕಿನ ಇತಿಹಾಸದ ಪುಟಗಳನ್ನೂ ಮೆಲುಕು ಹಾಕಿದಾಗ ಸೇವಾ ಜಾತಿ ಮಾನವರು ಮಾತ್ರ ಬಹುಪಾಲು ಗೋಚರಿಸುತ್ತಿದ್ದು – ವ್ಯಾಪಾರ ಮಾಡುವವರು ಅವಶ್ಯಕತೆಗೆ ಅನುಸಾರವಾಗಿ ಮಾತ್ರ ಇದ್ದು – ದರೋಡೆ ಮಾಡುವವರು ನೀರಿನ ಗುಳ್ಳೆಗಳಂತೆ ಹುಟ್ಟಿದ ಕೂಡಲೇ ಸಾಯುವ ಸ್ಥಿತಿ ಇದ್ದದ್ದು ಗೋಚರಕ್ಕೆ ಬರುತದೆ. ವ್ಯಾಪಾರಕ್ಕೆ ಬಂದವರು ದೇಶವನ್ನು ಆಳಿದ ಪ್ರತಿಫಲವಾಗಿ ನಮ್ಮ ಸಂಸ್ಕೃತಿ ನಮ್ಮ ಅಂದಿನ ಬಾಳು ಮಾಯವಾಗಿ ಸೇವಾ ಬದುಕನ್ನು ಬಾಳಿನುದ್ದಕ್ಕೂ ಅನುಸರಿಸಿಕೊಂಡು ಹೋಗುವವರು ಸೂನ್ಯದತ್ತ ಪಲಾಯನವಾಗುತಿರುವುದು ನಮ್ಮೆಲ್ಲರ ಅನುಭವದ ಸತ್ಯ ಸಂಗತಿ.
ಪ್ರಕೃತಿಯ ಸಂಪೂರ್ಣ ಸವಲತ್ತುಗಳನ್ನು ತನಗಾಗಿ ಮೀಸಲು ಎನ್ನುವ ಮನೋಭಾವನೆಯಿಂದ ಮುನ್ನುಗ್ಗುತಿರುವ ನಾವು ಸಕಲ ರೀತಿಯ ಮೃಗ ಪಕ್ಷಿ ಜಲಚರ ಪ್ರಾಣಿಗಳ ಆಹಾರವನ್ನೆಲ್ಲ ತನ್ನದಾಗಿಸಿ ತಿನ್ನುವುದಲ್ಲದೆ – ಅವುಗಳನ್ನೆಲ್ಲ ತಿಂದು ಬದುಕಿತ್ತಿರುವುದರ ಫಲವಾಗಿ – ಜೀವಿರಾಶಿಗಳು ತನ್ನ ನೆಲೆಯನ್ನು ಬಿಟ್ಟು ನಾಡಿಗೆ ನುಗ್ಗುತಿದ್ದು ಮುಂದಕ್ಕೆ ಮನೆಗೆ ನುಗ್ಗಿ ನಮ್ಮ ಜೊತೆಗೆ ಬದುಕುವ ಸಂಕಲ್ಪ ಮಾಡಿದಂತೆ ತೋರುತದೆ. ಇನ್ನೊಂದು ದಿಕ್ಕಿನಲ್ಲಿ ನೋಡಿದಾಗ – ಭೂಮಿಯ ಮೂಲ ಗುಣ ಫಲವತ್ತತೆ ಬರಿದಾಗಿಸಿದ್ದು, ನೀರನ ಅಸಮರ್ಪಕ ಬಳಕೆ ಮತ್ತು ಮಲಿನತೆ , ವಾಯ ಮಾಲಿನ್ಯತೆಯ ಪರಮಾವದಿ – ಮಾನವ ಜನಾಂಗದ ಸರ್ವ ನಾಶಕ್ಕೆ ನಮ್ಮ ವ್ಯಾಪಾರ ಮತ್ತು ದರೋಡೆ ಜಾತಿಯವರ ಸಂಖ್ಯೆ ಮಿತಿ ಮೀರಿ ಏರುತಿರುವುದು ಮೂಲ ಕಾರಣ.
ಇದು ಸಾಲದು ಎಂಬ ರೀತಿಯಲ್ಲಿ ಜಾತಿ ಕಲಹ, ಪಕ್ಷ ಕಲಹ, ರಾಜ್ಜಗಳೊಳಗೆ ಕಲಹ, ದೇಶಗಳೊಳಗೆ ಕಲಹ, ಅಧಿಕಾರಕ್ಕಾಗಿ ಕಲಹ ……….. ಇತ್ಯಾದಿಯತ್ತ ದೃಷ್ಟಿ ಹಾಯಿಸಿದಾಗ ಪ್ರಪಂಚಕ್ಕೆ ಬೆಂಕಿ ಬಿದ್ದು ಅಗ್ನಿ ಜ್ವಾಲೆಯಾಗಿ ಉರಿಯುತಿರುವುದು ಬಾಸವಾಗುತಿದೆ.
ಜಾಗತಿಕ ವಸ್ತು ಸ್ಥಿತಿ – ನರಕ ಸ್ವರ್ಗಕ್ಕಾಗಿ ಕಾಯುತಿದೆ – ನಾವು ಬರಹ ಮೂಲಕ – ಅನುಷ್ಠಾನ ಮೂಲಕ – ಇಂದಿನ ರಾಜಕೀಯ ಅರಸರು – ಅಂದಿನ ಅರಸರು – ದೇವರ ಹತ್ತಿರ ಇರುವವರು – ದೈವದ ಹತ್ತಿರ ಇರುವವರು – ತಮ್ಮ ದೈಹಿಕ ಬಲ ಮತ್ತು ಜ್ಞಾನ ಬಲವನ್ನು – ಕಿತ್ತು ತಿನ್ನುವ ಪ್ರವೃತಿ ಬಿಟ್ಟು – ಹಂಚಿ ತಿನ್ನುವತ್ತ ಸಾಗಿ ಕೊಟ್ಟು ತಿನ್ನುವ ಬಾಳು ನಮ್ಮದಾಗುವ ಬಯಕೆ ನನ್ನದಾಗಲಿ ನಮ್ಮದಾಗಲಿ.
ಸೇವಾ ಒಕ್ಕೂಟಗಳು ಪ್ರತಿ ವಿಭಾಗ ಕ್ಷೇತ್ರಗಳಲ್ಲಿ ತಲೆ ಎತ್ತಿ – ಸೇವಾ ಜಾತಿ ಮಾತ್ರ ಉಳಿದು ಬೆಳೆದು ಮುಂದಕ್ಕೆ ಹೆಮ್ಮರವಾಗುವ ದೈವ ದೇವರ ಬಯಕೆ – ಮಾನವರಾದ ನಾವು ಅರಿತು ಆದಷ್ಟು ಬೇಗ ಕಾರ್ಯಪ್ರವೃತ್ತರಾಗೋಣ.

See also  ದಾರಿ ತಪ್ಪಿದ ಪ್ರಜಾಪ್ರಭುತ್ವಕ್ಕೆ ಮದ್ದು

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?