ಕರ್ನಾಟಕ ಸರ್ಕಾರ ಜಿಲ್ಲಾಡಳಿತ- ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಸೂರು,ಕರ್ನಾಟಕ ಯೋಗಾಸನ ಕ್ರೀಡಾ ಸಂಸ್ಥೆ, ಅಂತಾರಾಷ್ಟ್ರೀಯ ಯೋಗ ಪ್ರತಿಷ್ಠಾನ ಹಾಗೂ ಮೈಸೂರು ಯೋಗ ಒಕ್ಕೂಟದವರ ಸಹಯೋಗದೊಂದಿಗೆ ರಾಷ್ಟ್ರೀಯ ಹಬ್ಬಗಳ ಆಚರಣೆಯ ಅಂಗವಾಗಿ ದಕ್ಷಿಣ ಭಾರತ ಯೋಗಾಸನ ಕ್ರೀಡಾ ಸ್ಪರ್ಧೆ ಮೈಸೂರು ನಲ್ಲಿ ನಡೆಯಿತು.
9 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ನಿರಂತರ ಯೋಗ ಕೇಂದ್ರ ಸುಳ್ಯದ ವಿದ್ಯಾರ್ಥಿ ಆರಾಧ್ಯ.ಎ.ರೈ ದ್ವಿತೀಯ ಸ್ಥಾನ ಪಡೆದಿರುತ್ತಾರೆ .ಇವರು ನೆಲ್ಯಾಡಿ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜಿನಲ್ಲಿ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರು ಪುತ್ತೂರು ತಾಲೂಕಿನ ತೊಟ್ಲ ಅವಿನಾಶ್ ರೈ ಮತ್ತು ಸಂಧ್ಯಾ ರೈ ದಂಪತಿಯ ಪುತ್ರಿ. ಶರತ್ ಮರ್ಗಿಲಡ್ಕ ಮಾರ್ಗದರ್ಶನ ನೀಡಿರುತ್ತಾರೆ.