ಹೇರ ಸಾಂತಪ್ಪ ಜೈನ -ಮೈಸೂರು – ಜೀವನ ಚರಿತ್ರೆ
ಜೈನರ ಸೇವಾ ಒಕ್ಕೂಟದ ಸದಸ್ಯರು
ಹೇರ ಸಾಂತಪ್ಪ ಜೈನ ಅವರು ಜನನ 19 ಸೆಪ್ಟೆಂಬರ್ 1950ರಂದು ತನ್ನ ಕುಟುಂಬದ ಒಲವು, ಸಂಸ್ಕೃತಿ ಮತ್ತು ಧಾರ್ಮಿಕ ಪ್ರಾಮುಖ್ಯತೆಯ ನಡುವೆ ಬೆಳೆದವರು. ತಂದೆ ತಿಮ್ಮಯ್ಯ ಬಾಳಿಕ್ವಾಳ ಮತ್ತು ತಾಯಿ ಲಕ್ಷ್ಮೀಮತಿ ಅಮ್ಮನ ಮಗನಾಗಿ, ಅವರು ದಶಕದ ಪರಂಪರೆ ಮತ್ತು ಧಾರ್ಮಿಕ ಮೌಲ್ಯಗಳ ಮಾದರಿಯಾಗಿದ್ದಾರೆ.
ಕುಟುಂಬ ಮತ್ತು ಶಿಕ್ಷಣ: ಹೇರ ಸಾಂತಪ್ಪ ಜೈನ ಅವರಿಗೆ ಹನ್ನೆರಡು ಸಹೋದರ-ಸಹೋದರಿಯರು ಇದ್ದಾರೆ – ಪ್ರಭಾವತಿ, ಜಿನರಾಜ ಪೂಂಜ, ಅಮರಾಜಿ ಅಮ್ಮಾಜಿ, ಸುಶೀಲ, ನಾಭಿರಾಜ, ಶ್ಯಾಮಲ, ರತ್ನಾಕರ, ಪ್ರಭಾಕರ, ಕಮಲಾ, ಸರೋಜಾ ಮತ್ತು ಜಯರಾಜ. ಅವರ ವಿದ್ಯಾಭ್ಯಾಸ ಎಂ.ಪಿ.ಇ. (ಮಾಸ್ಟರ್ ಆಫ್ ಫಿಸಿಕಲ್ ಎಜುಕೇಷನ್) ವರೆಗೆ ಮುಗಿಸಿ, ಅವರು ಕ್ರೀಡೆಯಲ್ಲಿ ತಮ್ಮ ಮೆರಗು ತೋರಿಸಿದರು ಮತ್ತು ಚತುರ ಮಾತುಗಾರನಾಗಿ ಪ್ರಸಿದ್ಧರಾಗಿದ್ದರು. ಹೇರ ಸಾಂತಪ್ಪ ಜೈನ ಇವರಿಗೆ ಬದುಕಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಮತ್ತು ಮನೋಬಲ ಧಾರೆಯೆರೆದು ಮುನ್ನಡೆಸಿದವರು – ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಮತ್ತು ರತ್ನತ್ರಯ ಕುಳವಳಿಕೆ ದಿ. ಜಿನೇಂದ್ರ ಪ್ರಸಾದ್ ಅವರಿಗೆ ಸಲ್ಲತಕ್ಕದ್ದು
ವೈಯಕ್ತಿಕ ಜೀವನ: 13 ಜೂನ್ 1979ರಂದು ಪ್ರೇಮಕುಮಾರಿಯವರನ್ನು ವಿವಾಹವಾದ ಹೇರ ಸಾಂತಪ್ಪ ಜೈನ ಅವರಿಗೆ ಪೂರ್ಣಿಮಾ ಯಸ್ ಜೈನ್ ಮತ್ತು ಪ್ರತಿಭಾ ಯಸ್ ಜೈನ್ ಎಂಬ ಇಬ್ಬರು ಪುತ್ರಿಯರು ಇದ್ದಾರೆ. ಇವರು ತಮ್ಮ ಕುಟುಂಬದ ಜೊತೆ ಒಡನಾಟದ ಜೀವನವನ್ನಾಸ್ವಾದಿಸುತ್ತಾ, ತಮ್ಮ ಧಾರ್ಮಿಕ ಬದ್ಧತೆ ಮತ್ತು ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ.
ಧಾರ್ಮಿಕ ಮತ್ತು ಸಾಮಾಜಿಕ ಕೊಡುಗೆಗಳು: ಹೇರ ಸಾಂತಪ್ಪ ಅವರ ಜೈನ ಧರ್ಮನಿಷ್ಠೆ ಮತ್ತು ಜೈನ ಧರ್ಮದ ತತ್ವಗಳಿಗೆ ಅವರು ಬದ್ಧರಾಗಿದ್ದು, ಅದನ್ನು ಜೀವನದಲ್ಲಿ ಪ್ರತಿಪಾದಿಸುತ್ತಾ ಬಂದಿದ್ದಾರೆ. 1995ರಲ್ಲಿ ಇಜಿಲಂಪಾಡಿ ಬಸದಿಯ ಜೀರ್ಣೋದ್ದಾರ ಸಂದರ್ಭದಲ್ಲಿ ಶ್ರೀ ಪದ್ಮಾವತಿ ದೇವಿಯ ಗುಡಿಯನ್ನು ನಿರ್ಮಿಸಲು ಅವರು ದಾನ ಮಾಡಿದ್ದು, ಸಮುದಾಯಕ್ಕೆ ಮಾದರಿಯಾದದ್ದು.
2024ರ ಜೀರ್ಣೋದ್ದಾರ ಕಾರ್ಯಗಳು: ಇತ್ತೀಚಿನ 2024ರ ಇಜಿಲಂಪಾಡಿ ಬಸದಿಯ ಜೀರ್ಣೋದ್ದಾರ ಮತ್ತು ಶುದ್ಧ ಸಂಪ್ರೋಕ್ಸಣೆಯಲ್ಲಿಯೂ ಅವರ ಉದಾರ ಕೊಡುಗೆ ಪುನಃ ಮೆರೆಯಿತು. ಈ ಧಾರ್ಮಿಕ ಕಾರ್ಯದಲ್ಲಿ ತಮ್ಮ ಭಾಗವಹಿಸುವಿಕೆಯಿಂದ ಅವರು ಸಮುದಾಯಕ್ಕೆ ತಲೆಮಾರುಗಳಿಗೆ ಪ್ರೇರಣೆಯಾಗಿದ್ದಾರೆ.
ಅಂತರಂಗ ಮತ್ತು ಮೌಲ್ಯಗಳು: ಹೇರ ಸಾಂತಪ್ಪ ಜೈನ ಅವರು ಕೇವಲ ಧಾರ್ಮಿಕ ವ್ಯಕ್ತಿಯಾಗಿರದೆ, ಶ್ರೇಷ್ಠ ಮಾತುಗಾರ, ಸ್ನೇಹಮಯ ವ್ಯಕ್ತಿ, ಮತ್ತು ಅಂತರಂಗದಿಂದ ಸವಿದ ಬದುಕನ್ನು ಸಾಗಿಸುವ ವ್ಯಕ್ತಿಯಾಗಿದ್ದಾರೆ . ಜೈನ ಧರ್ಮದ ಖಜಾನೆ, ಕೊಡುಗೈ ದಾನಿ, ಸಮಾನ ಮನಸ್ಕತೆಯ ವ್ಯಕ್ತಿಯಾಗಿರುವ ಅವರು, ಜೀವನದಲ್ಲಿ ನಾಡಿನ ಅಭಿವೃದ್ದಿಗೆ, ಧಾರ್ಮಿಕ ಹಾಗೂ ಸಾಮಾಜಿಕ ಬದುಕಿಗೆ ಅಪಾರ ಕೊಡುಗೆ ನೀಡಿ ಮುನ್ನಡೆಸುತಿದ್ದಾರೆ
ಸಮುದಾಯದ ಹೆಮ್ಮೆ: ಹೇರ ಸಾಂತಪ್ಪ ಜೈನ ಅವರ ಜೀವನವು ಸಮುದಾಯಕ್ಕೆ ಮತ್ತು ತಲೆಮಾರುಗಳಿಗೆ ಮಾದರಿಯಾಗಿ, ಅವರ ಸೇವಾ ,ಬದುಕು ದೀಪದಂತೆ ಹೊಳೆಯುತ್ತಿದೆ.