ಅಂತರ್ಜಾಲ ಮಾನವರ ಬಾಳಿನ ಕಾಮದೇನು. ಇದು ಪ್ರತಿಯೋಬ್ಬರಿಗೂ ಸಿಗುವಂತೆ ಮಾಡಬೇಕು. ಅದಕ್ಕಾಗಿ ಅಂತರ್ಜಾಲ ಬಳಕೆದಾರರ ಒಕ್ಕೂಟ – ಚಿಂತನ ಮಂಥನ ಅನುಷ್ಠಾನದ – ಪರಿಕಲ್ಪನೆ ಇಲ್ಲಿ ನಡೆಯುತ್ತಿದೆ.
ವಸ್ತುಗಳ – ಕೊಂಡುಕೊಳ್ಳುವ ಮತ್ತು ಮಾರಾಟ ಮಾಡುವ – ಕಾರ್ಯದಲ್ಲಿ ತೊಡಗಿರುವ ಸಂಸ್ಥೆ ಜಾಗತಿಕ ಮಟ್ಟದಲ್ಲಿ ಆಗ್ರಾ ಸ್ಥಾನವನ್ನು – ಅಮೆಜಾನ್ – ಪಡೆದಿರುವುದು ನಮಗೆಲ್ಲ ಗೊತ್ತಿರುವ ವಿಷಯ. ಇನ್ನು ವಿಭಿನ್ನ ತೆರೆನಾದ ನೂರಾರು ಅವಕಾಶಗಳು ಅಂತರ್ಜಾಲ್ಲದಲ್ಲಿದ್ದು – ಅವುಗಳ ಬಗ್ಗೆ ಪ್ರತಿ ಒಂದನ್ನು ಆಯ್ಕೆ ಮಾಡಿ ಜನ ಸಾಮಾನ್ಯರಿಗೆ ಮನದಟ್ಟು ಮಾಡುವ ಕೆಲಸವನ್ನು ಮಾಡೋಣ.
ಅಂತರ್ಜಾಲ ಬಳಸುವವರಲ್ಲಿ – ಸಮಯ ಉಪಯೋಗ ಮಾಡುವವರು, ಸಮಯ ಹಾಲು ಮಾಡುವವರು ಮತ್ತು ಸಮಯ ದೂಡುವವರು – ಎಂಬ ಮೂರು ವಿಭಾಗಗಳಿದ್ದು , ನಾವು ಪ್ರಥಮವಾಗಿ ಸಮಯ ಉಪಯೋಗ ಮಾಡುವವರ ಬಗ್ಗೆ ಗಮನ ಹರಿಸೋಣ.
ಒಂದು ಊರಿನಲ್ಲಿ ಅಂತರ್ಜಾಲ ಒಕ್ಕೂಟ ಮಾಡಿದರೆ ಆ ಊರಿಗೆ ಆಗುವ ಪ್ರಯೋಜನದ ಬಗ್ಗೆ ಚಿಂತನೆ
ನಮ್ಮನ್ನು ಅಗಲಿದ – ತಂದೆ ತಾಯಿ , ಅಣ್ಣ ತಮ್ಮ , ಅಕ್ಕ ತಂಗಿ , ಅಜ್ಜ ಅಜ್ಜಿ , ಪತಿ ಪತ್ನಿ , ಆಪ್ತರು ಹಿತೈಷಿಗಳು …… ಮುಂತಾದವರಿಗೆ ಮೊಬೈಲ್ ಶ್ರದಾಂಜಲಿ ಸಲ್ಲಿಸಲು ಏಕ ಮಾತ್ರ ಅವಕಾಶ ನಮಗೆ ಇಲ್ಲಿ ಸಿಗುತದೆ. ನಾವು ಅವರ ಸ್ಮರಣಾರ್ಥ- ದಾನ ಕೊಡಬಹುದು, ದೊಡ್ಡ ದೊಡ್ಡ ಕಟ್ಟಡ ಕಟ್ಟಿ ಕೊಡಬಹುದು – ಆದರೆ ಅದು ಪ್ರಪಂಚದಲ್ಲಿ ಎಲ್ಲಿ ಬೇಕಾದರೂ , ಯಾವಾಗ ಬೇಕಾದರೂ ಲಭಿಸುವುದು ಅಂತರ್ಜಾಲದಲ್ಲಿ ಮಾತ್ರ. ಅಗಲಿದವರ ಭಾವಚಿತ್ರ, ವ್ಯಕ್ತಿತ್ವದ ವರ್ಣನೆ, ಜೀವನಚರಿತ್ರೆ, ಆತನ ವಂಶ ವೃಕ್ಷ ………ಇತ್ಯಾದಿಗಳಿಂದ ಆ ವ್ಯಕ್ತಿ – ಸಾಮಾನ್ಯನಾಗಿದ್ದರು ಅಸಾಮಾನ್ಯ ವ್ಯಕ್ತಿತ್ವದ ಪಟ್ಟವನ್ನು ಕೊಡುವ ಅವಕಾಶ ನಮಗಿದೆ.
ನಮ್ಮ ಊರಿನ ನಿಜ ಸ್ಥಿತಿ ಗತಿಯನ್ನು – ದೇಶದೊಂದಿಗೆ ಪ್ರಪಂಚಕ್ಕೆ ತಿಳಿಶೆಬಹುದು
ನಮ್ನ ಊರಿನ ಶಾಲೆಯ ನೈಜ ಚಿತ್ರಣದ ಪ್ರಚಾರ
ನಮ್ಮ ಊರಿನಲ್ಲಿ ನಡೆಯುವ ಶ್ರೀ ಕೃಷ್ಣಾಷ್ಟಮಿ , ಗಣೇಹೋತ್ಸವ, ಭಜನಾ ಮಂಡಳಿಗಳ ವ್ಯಾಪಕ ಪ್ರಚಾರ
ನಮ್ಮ ಊರಿನ ದೇವಸ್ಥಾನ ದೈವಸ್ಥಾನದ – ವಸ್ತು ನಿಷ್ಠೆ ಪ್ರಚಾರ
ನಮ್ಮ ಊರನ್ನು ಪ್ರತಿನಿಧಿಸುವ ವ್ಯಕ್ತಿಗಳ ಉಲ್ಲೇಖ
ನಮ್ಮ ಊರಿನ ಘಣ್ಯ ವ್ಯಕ್ತಿಗಳ ಪರಿಚಯ
ಊರಿನ ವ್ಯಕ್ತಿಗಳ ವ್ಯಕ್ತಿತ್ವದ ಪರಿಚಯ ಮತ್ತು ಪ್ರಚಾರ
ವಿಭಿನ್ನ ಸ್ವ ಉದ್ದಿಮೆದಾರರಾದ – ಕೂಲಿಕಾರ್ಮಿಕರು , ಮರದ ಕೆಲಸದವರು , ಮರ ಹತ್ತುವವರು , ಅಡಿಕೆ ಸುಳಿಯುವವರು , ಅಡಿಕೆ ತೆಗೆಯುವವರು , …………………….ಮುಂತಾದವರ ಸಮಗ್ರ ಮಾಹಿತಿ
ಕ್ಷಣ ಮಾತ್ರದಲ್ಲಿ – ಊರಿನ ಸಮಸ್ತ ಜನರಿಗೆ – ಸಲಹೆ, ಸೂಚನೆ , ಆಮಂತ್ರಣ ………
ಜಾಗತಿಕ ಮಾರುಕಟ್ಟೆಯಲ್ಲಿ – ಮಾರಾಟಕ್ಕೆ ಮತ್ತು ಕೊಂಡುಕೊಳ್ಳುವುದಕ್ಕೆ ಅವಕಾಶ ….ಅಡಿಕೆ, ಗೇರು, …..
ನಮ್ಮ – ಪ್ರತಿಯೊಬ್ಬರ ಬಗ್ಗೆ -ಪ್ರತಿಯೊಂದು ವಿಷಯದ ಬಗ್ಗೆ – ಪ್ರಪಂಚದಲ್ಲಿ ಡಂಗುರ ಸಾರುವ ಜಾಗತಿಕ ವ್ಯಕ್ತಿಯೇ – ಅಂತರ್ಜಾಲ
ಜಾಗತಿಕ ಮಟ್ಟದಲ್ಲಿ ಆಗುವ ಆವಿಸ್ಕಾರಗಳನ್ನು ಅಭಿವೃದ್ದಿಗಾಗಿ ಬಳಸೋಣ
ಇದು ನಮ್ಮ ಅನಿಸಿಕೆಯ ಚಿಕ್ಕ ಗಿಡ – ನಿಮ್ಮ ಅನಿಸಿಕೆಗಳು ಸಮಿಲನವಾದಾಗ ಹೆಮ್ಮರವಾಗಿ ಬೆಳೆಯಿತದೆ .