ದುಡಿದು ಕಟ್ಟುವರು ದೇವಾಲಯ
ಬೇಡಿ ಕಟ್ಟುವರು ದೇವ ಲಯ
ಆಯ್ಕೆ ದೇವಾಲಯವೋ ದೇವ ಲಯವೋ ………………………………………..ಅವ್ಯಕ್ತ
ದೇವಾಲಯಕ್ಕೆ ಪೋಪಲು ಅಡೆತಡೆಗಳಿರುವುದಯ್ಯ
ದೇವರಲ್ಲಿಗೆ ಪೋಪಲು ಅಡೆತಡೆಗಳಿಲ್ಲವಯ್ಯ
ನೀನೆಲ್ಲಿಗೆ ಪೋಪೆ ಪೇಳು …………………………………………………………….ಅವ್ಯಕ್ತ
ದೈವ ದೇವಸ್ಥಾನಗಳಲ್ಲಿ ಮೊಕ್ತೇಶ್ವರರಿಹರು
ಭಕುತ ಬಂದವರಿಗೆ ಅಡ್ಡ ಗೋಡೆಯಾಗಿ ನಿಂತಿಹರು
ಮೊಕ್ತೇಶ್ವರರು – ಮೋಕ್ತ ಈಶ್ವರರಾಗುವರೇ …………………………………………..ಅವ್ಯಕ್ತ
ಮುಗ್ದ ಮಕ್ಕಳಲ್ಲಿ ಮಾನವರಲ್ಲಿ ದೇವರ ಕಾಂಬಾತ
ಪ್ರಾಣಿಗಳಲ್ಲಿ ಸಕಲಜೀವರಾಶಿಗಳಲ್ಲಿ ದೇವರ ಕಾಂಬಾತ
ಕೊಚ್ಚೆಯಲ್ಲಿದ್ದರು ದೇವಸ್ಥಾದಲ್ಲಿಹನು ……………………………………………………ಅವ್ಯಕ್ತ
ಆದಿಯಲ್ಲಿ ಕುಳಿತಿಹನು ಅಂತ್ಯದಲ್ಲಿ ಕುಳಿತಿಹನು
ಮದ್ಯದಲ್ಲಿ ಕುಳಿತವರು ಕುರ್ಚಿಯಾಟ ಆಡುತಿಹರು
ಆದಿ ಅಂತ್ಯದಿ ಕುಳಿತವನ ಬಲ್ಲವರಾರು ………………………………………………..ಅವ್ಯಕ್ತ
ಹಣದ ದಾಹ ನಿನಗಿಹ ನಂಬಿಪರು
ನನಗಿಹ ದಾಹ ನಿನ್ನ ತಲೆಗೆ ಏರಿಪರು
ನಿನ್ನ ದಂಡಿಪ ನಾ ಹಿನ್ನಡಿಯಿಡುತಿಹೆನು ………………………………………………….ಅವ್ಯಕ್ತ
ನಿನ್ನ ನಂಬಿ ಬಂದಿಹೆನು
ನಿನ್ನ ಹೊತ್ತು ನಡೆಯುತಿಹೆನು
ನನ್ನ ದಾರಿ ಸ್ವರ್ಗಕ್ಕಲ್ಲವೇ …………………………………………………………………ಅವ್ಯಕ್ತ
ನಿನ್ನ ಆಹಾರ ನನ್ನ ಆಹಾರ
ನಿನ್ನ ಮಡಿಲು ನನ್ನ ನಿದ್ದೆ
ಕಂದನ ಅರಣ್ಯ ರೋದನ ಸಂತೈಸಮ್ಮ …………………………………………………….ಅವ್ಯಕ್ತ
ಸತಿಯ ಪತಿ ನಾನು
ಪತಿಯ ಪತಿ ನೀನು
ಸತಿ ಪತಿಯ ಬಲ್ಲವರಾರು …………………………………………………………………….ಅವ್ಯಕ್ತ
ಪಾಪದ ಹಣ ನಿನಗೆ ಸಲ್ಲದಯ್ಯ
ಶಾಪದ ಹಣ ನಿನಗೆ ಸಲ್ಲದಯ್ಯ
ಪುಣ್ಯದ ಹಣ ನಿನ್ನ ಅಂಬೋಣವಯ್ಯ …………………………………………………………..ಅವ್ಯಕ್ತ
ಮನದಿ ಪೂಜಿಪರು ದೇಹದಿ ಪೂಜಿಪರು
ಪುಷ್ಪದಿ ಪೂಜಿಪರು ದ್ರವ್ಯದೀ ಪೂಜಿಪರು
ಪೂಜಿಪ ನಿಜ ವಿದಿ ಫೇಳೆಂದ……………………………………………………………………ಅವ್ಯಕ್ತ
ಧನ ಕನಕ ರಾಶಿಯ ಮೇಲೆ ಕುಲ್ಲಿರ್ಪ ಕುಬೇರ
ತಿಂದುಂಡು ಬಿಸಾಕುವ ಕೊಡುಗೆಯಿಂದ ಮಲ್ಪಾದೇವಾಲಯ
ಭಗವಂತನ ಸನ್ನಿದಿಯಾಗುವುದೇ ………………………………………………………………ಅವ್ಯಕ್ತ