ಮಾನವರ ಆಟ ಅಂದು
ದೇವರ ಆಟ ಇಂದು
ಮಾನವರ ದೇವರ ಆಟ ಮುಂದು …………………………ಅವ್ಯಕ್ತ
ತ್ಯಾಗ ಮಂತ್ರ ಪಠಣ -ಅನುಷ್ಠಾನಕ್ಕೆ ದೇವರ ಪ್ರಕೃತಿಯ ಒತ್ತು ಅಂದು -ಸ್ವಾರ್ಥ ಮಂತ್ರ ಪಠಣ – ಅನುಷ್ಠಾನ ಪ್ರಸ್ತುತ ಮಾನವರ ಬದುಕು ಇಂದು – ಪರಿಣಾಮ ಕೊರೊನಾ ಅಪಾಯದ ಗಂಟೆ ಜೋರಾಗಿ ಮೊಳಗುತಿದೆ – ದೇವರ ದಾರಿಯಲ್ಲಿ ಚಲಿಸಿ – ಇಲ್ಲದಿದ್ದರೆ ಬದುಕಿಗೆ ಅಂತ್ಯ ಹಾಡಿ – ಇದು ನಮ್ಮೆಲ್ಲರಿಗೂ ಅಂದರೆ ಮಾನವಕುಲಕೋಟಿಗೆ ಅಂತಿಮ ಕರೆಗಂಟೆ – ಎಚ್ಚೆತ್ತುಕೊಳ್ಳೋಣ.
ಜಾತಿ ಮತ ಬೇದ , ಮೇಲು ಜಾತಿ ಕೀಳು ಜಾತಿ , ಧನಿಕ ಬಡವ , ಅಧಿಕಾರದಲ್ಲಿ ಮೇಲು ಕೀಳು , ಶಾಸಕ ಸಂಸದ, ಮಂತ್ರಿ ಪ್ರಧಾನಿ , ಸುಭದ್ರ ದೇಶ ಅಭದ್ರ ದೇಶ ,ನಮ್ಮ ಸಂಹಾರಕ್ಕೆ ನಾವೇ ತಯಾರುಮಾಡಿಕೊಂಡು ಇಟ್ಟಿರುವ ಶಾಸ್ತ್ರತ್ರ ಬಾಂಬುಗಳು ಅಣುಬಾಂಬುಗಳು – ಮುಂತಾದುವುಗಳೆಲ್ಲ ನಮ್ಮ ನಡೆ – ಕಂಡಿತಾ ಅಭಿವೃದ್ಧಿ ಪಥ ಅಲ್ಲ. ಪ್ರಕೃತಿ ನಮಗೆ ತಿಳಿಸಿದ ಪಾಠ ಮಾನವರ ಚಿಂತನ ಮಂಥನ ಅನುಷ್ಠಾನ – ಕೊನಯ ಪಕ್ಷ – ಮಾನವರೆಲ್ಲರ ಏಳಿಗೆಗಾಗಿ – ಮೂಲ ನಮ್ಮ ಬದುಕಿನ ಉದ್ದೇಶ ಗುರಿ ಸಕಲ ಜೀವರಾಶಿಗಳ ಏಳಿಗೆಗಾಗಿ ಮೀಸಲಾಗಿರಬೇಕಿತ್ತು.
ದೇವರೆಂಬ ಸುಂದರ ಮೂರ್ತಿಯ ಕೈ ಕಾಲು ಕಣ್ಣು ಮೂಗು ಕಿವಿ ದೇಹ ……ಮುಂತಾದ ಎಲ್ಲ ಭಾಗವನ್ನು ತುಂಡು ತುಂಡು ಮಾಡಿ ಕತ್ತರಿಸಿ , ಅದರಲ್ಲಿ ಒಂದು ಭಾಗವನ್ನು ತನ್ನ ಜಾತಿ ದೇವರು ಎಂದು ಪೂಜಿಸಲ್ಪಡುವ ದೇವಾಲಯಗಳು ನಿರಂತರ ಹುಟ್ಟಿಕೊಳ್ಳುತಿವೆ. ಇದು ದೇವರಿಗೆ ಮಾನವರ ಸಹಿಸಲಾರದ ಮಹಾಪರಾಧ. ದೇವರ ಹೆಸರಲ್ಲಿ ಜಾತಿ ಮತಗಳು ಹುಟ್ಟಿಕೊಂಡು ತನ್ನ ಜಾತಿಯ ಜನರ ಸಂಖ್ಯೆಯನ್ನು ವೃದಿಸುವ ಮನೋಪ್ರವೃತಿ ರಾಜಕೀಯ ಪಕ್ಷಗಳಂತೆ ಜವಾಬ್ದಾರಿ ಮರೆತು ಆಡಳಿತ ನಡೆಸುವ ಏಕಮಾತ್ರ ಕನಸಿನ ತರ ಗೋಚರಿಸುತದೆ. ಆದರ್ಶ ಬಾಳು ನಡೆಸಿದವರನ್ನು ಗುಡಿಯಲ್ಲಿಟ್ಟು – ಆ ರೀತಿಯ ಬಾಳನ್ನು ನಡೆಸಬೇಕಾದವರು, ಗೌರವದ ಪರಮಾವದಿ ಪೂಜೆಯನ್ನು ಮಾಡಿದರೆ ಅದು ನೀರಿನ ಮೇಲಿಟ್ಟ ಹೋಮದ ಅರಿವು, ನಮಗೆ ಇಂದು ಇಲ್ಲವಾಗಿದೆ.
ನಾವು ಆಚಾರ ಅನಾಚಾರ ಕಾಟಾಚಾರ ಮೂರನ್ನು ಮುಂದುವರಿರುವುದರ ಫಲ – ಕೆಟ್ಟ ನಡೆ ನುಡಿ ನಡವಳಿಕೆ ಎಲ್ಲವು ಪ್ರಕೃತಿಯಲ್ಲಿ ವಿಷದ ವಾತಾವರಣ ಸೃಷ್ಟಿಯಾಗಿ ಅದು ಕೊರೊನಾ ರೂಪ ತಳೆದು ನಮ್ಮನ್ನು ಎಚ್ಚರಿಸುತಿದೆ .
ನಾವು ಎಲ್ಲರು ಒಂದಾಗಿ ಆಚಾರದತ್ತ ಮಾತ್ರ ಗಮನ ಹರಿಸಿ – ಅನಾಚಾರ ಕಾಟಾಚಾರಕ್ಕೆ ಅಂತ್ಯ ಹಾಡಿ – ನಡೆ ನುಡಿ ನಡವಳಿಕೆ ಮತ್ತು ಬದುಕಿನುದ್ದಕ್ಕೂ – ದೇವ ಚಿತ್ತ ಮಾನವ ಚಿತ್ತ ಒಂದಾಗಿ ಬಾಳುವ ದ್ರಡ ಸಂಕಲ್ಪ – ದುಷ್ಟ ಶಕ್ತಿಯನ್ನು ಓಡಿಸುವ ಶಿಷ್ಟ ಶಕ್ತಿಯಾಗಿ – ನಮ್ಮೆಲ್ಲರ ಬಾಳು ಸುಖ ಶಾಂತಿ ನೆಮ್ಮದಿ ಬಾಳಗುವ ನಮ್ಮ ಹಂಬಲಕ್ಕೆ – ದೇವರ ಪ್ರಕೃತಿಯ ಬೆಂಬಲ ಸಹಕಾರ ಸಿಗಲಿ ಎಂದು ಆಶಿಸೋಣ