ಜ್ಯೋತಿಷ್ಯ – ಶಿಕ್ಷಣದೊಂದಿಗೆ ಬದುಕಿನ ಮರ್ಮವನ್ನು ಅರಿತ ದೇವಮಾನವ ಅಥವಾ ಮಾನವನವರಿಂದ ಅದು ಬೆಳಕಿನ ಶಾಸ್ತ್ರವಾಗಿ ಜನರಿಗೆ ಸಮಾಜಕ್ಕೆ ಜಗತ್ತಿಗೆ ಸನ್ಮಾರ್ಗ ತೋರಿಸುವ ದೈವಜ್ಞರಾಗಿ , ವಿಜ್ಞಾನಿಗಳಿಗೂ ಮಿಗಿಲಾಗಿ – ಅಮಾವಾಸ್ಯ , ಹುಣಿಮೆ , ಚಂದ್ರ ಗ್ರಹಣ , ಸೂರ್ಯ ಗ್ರಹಣ ಇತ್ಯಾದಿ ಕರಾರುವಕ್ಕಾಗಿ ತಿಳಿಸುತಿರುವ ಮಹತ್ಕಾರ್ಯ ಜ್ಯೋತಿಷ್ಯರ ಅತ್ಯಂತ ಶ್ರೇಷ್ಠ ಸಾಧನೆ.
ಜ್ಯೋತಿಷ್ಯ ಎಂಬ ನಾಮಫಲಕ ಹಾಕಿಕೊಂಡು – ಸಮಾಜಘಾತಕ ಕೆಲಸಗಳನ್ನು ಮಾಡುವವರು, ಗ್ರಾಹಕರ ಹಣ ದೋಚುವ ದರೋಡೆಕೋರರು, ತಪ್ಪು ಮಾಹಿತಿಗಳನ್ನು ಕೊಡುವವರು, ಮಂಕು ಬೂದಿ ಎರಚಿ ಅನ್ಯರಲ್ಲಿ ವಿಮರ್ಶೆ ಮಾಡದೇ ನಾನು ಹೇಳಿದ್ದನ್ನೇ ಮಾಡಿ ಎನ್ನುವವರು …………….. ಜ್ಯೋತಿಷ್ಯಗಳಿರುವುದು ಅನ್ಯ ವೃತಿಗಳಂತೆ ಇಲ್ಲಿಯೂ ಕೂಡ ಇರುವುದು ಸ್ವಂತಂತ್ರ ಭಾರತದ ಅತ್ಯಂತ ದೊಡ್ಡ ಕೊಡುಗೆ ಸತ್ಯ ಧರ್ಮ ನ್ಯಾಯಕ್ಕೆ ಬೆಲೆ ಕೊಟ್ಟು ಬದುಕುವವರಿಗೆ ಮಾತ್ರ ಕಂಟಕ.
ಸ್ವತಃ ಅನುಭವದೊಂದಿಗೆ – ಗಮನಕ್ಕೆ ಬಂದಿರುವ ಮಾಹಿತಿ ಹಂಚಿಕೊಳ್ಳುತಿರುವುದು – ನಮಗಾಗಿ
ಬಹುಪಾಲು ಇತ್ತ ಗಮನ ಕೊಡುತಿರುವುದರಿಂದ ಶಿಕ್ಷಣದಲ್ಲಿ ಅಳವಡಿಕೆ ಮಾಡದಿರುವುದು ದೊಡ್ಡ ತಪ್ಪು
ಹಿತೈಷಿಗಳ ಮತ್ತು ದೈವಜ್ಞರ ಮನದಾಳ – ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಜ್ಯೋತಿಷ್ಯ ಬಳಕೆ
ಜ್ಯೋತಿಷ್ಯ ಬಳಕೆಗೆ ಒದಗುವ ಅನಿವಾರ್ಯ ಸಂದರ್ಭಗಳು ಅವರವರ ಅನಿಸಿಕೆಗಳಿಗೆ ಒಳಪಟ್ಟಿದ್ದರು ಬಟ್ಟಿ ಇಳಿಸಿ ಜ್ಯೋತಿಷ್ಯರನ್ನು ಭೇಟಿಯಾದರೆ ಮಾತ್ರ ಸೋಮಾರಿ ಬದುಕಿಗೆ ಮುಕ್ತಿ ಸಾಧಕ ಬದುಕಿಗೆ ನಾಂದಿ.
ಬಂದ ರಾಶಿಗೆ ದಿನ ಸಮಯ ನೋಡಿ ಫಲ ಹೇಳುವವನು ಮಾತ್ರ ಜ್ಯೋತಿಷಿ – ಅನುಭವ ಮಾತು ಸಲ್ಲ
ಅನ್ಯರಲ್ಲಿ ಈ ವಿಷಯದ ಬಗ್ಗೆ ಕೇಳಬೇಡಿ ಅನ್ನುವವನು ಜ್ಯೋತಿಷ್ಯ ಶಾಸ್ತ್ರಕ್ಕೆ ಮಾರಕ
ಭಯ ಹುಟ್ಟಿಸುವವನು ಮಾರಕ – ಅಭಯ ನೀಡುವವನು ಪೂರಕ
ದಿನ ಸಮಯ ರಾಶಿ ನೋಡಿ ಫಲ ಹೇಳಿದವನು ಕ್ಸ ಕಿರಣ ನೋಡಿ ವರದಿ ಹೇಳಿದವನು. ಗ್ರಾಹಕನಿಗೆ ತಪ್ಪಾಗಿದ್ದರು ಜ್ಯೋತಿಸ್ಯದಲ್ಲಿ ಯಾವುದೇ ತಪ್ಪಿಲ್ಲ
ದುರಹಂಕಾರಿ, ಅಹಂಕಾರಿ ಜ್ಯೋತಿಷ್ಯರು ವೃತಿಯ ಪವಿತ್ರತೆಗೆ ಸದಾ ಕಳಂಕ ತರುವವರು – ದೂರವಿರಿ
ನಮ್ಮ ತಪ್ಪನ್ನು ಜ್ಯೋತಿಷ್ಯರ ಮೇಲೆ ಕಟ್ಟುವ ಪ್ರವೃತಿ ಗ್ರಾಕರ ವಿಕೃತಿ ಮನೋಭಾವನೆ- ದೂರವಿರೋಣ
ಗ್ರಾಹಕರನ್ನು ಹಿಡಿದಿಟ್ಟುಕೊಳ್ಳುವ ವಾಸ್ತವ ಸ್ಥಿತಿ ಮಾನವೀಯತೆಗೆ ಕೊರತೆ
ಜಾಗತಿಕ ಮಟ್ಟದ ಸಾಧಕರು ಯಾರು ಕೂಡ ಜ್ಯೋತಿಷ್ಯರ ಹಿಂದೆ ಬಿದ್ದಿಲ್ಲ – ಇದು ನಮಗೆ ತಿಳಿದಿರಲಿ
ಜ್ಯೋತಿಷ್ಯ – ತಾನು ಅನ್ಯರಿಗೆ ಹೇಳುತಾನೆ – ತಾನು ಅನುಷ್ಠಾನ ಮಾಡಿ ಗುರಿ ಮುಟ್ಟಿಲ್ಲ
ನಿಜವಾದ ಜ್ಯೋತಿಷ್ಯ – ದೇವರು – ಅವರ ಅನುಗ್ರಹ, ನಮಗೆ ದಾರಿದೀಪ
ವ್ಯಾಪಾರೀ ಯುಗದಲ್ಲಿ – ವ್ಯಾಪಾರ ವೃತಿಗಳಲ್ಲಿ ಇದು ಒಂದು ವೃತ್ತಿ – ತಿಳಿದಿರೋಣ
ನಿಜವಾದ ಮೂಲ – ದೈವ , ದೇವರು , ನಾಗಸನ್ನಿದಿ ………….ಇತ್ಯಾದಿ ಅರಿತಾಗ ಜ್ಯೋತಿಷ್ಯರಿಂದ ದೂರ ದೂರ …
ಬದುಕಿನ ಮರ್ಮವ ಅರಿತಾಗ ಜ್ಯೋತಿಷ್ಯ ಬೆಳಕಿಗೆ ಬದಲಾಗಿ – ಅವ್ಯಕ್ತ ದಿವ್ಯ ಬೆಳಕು ಗೋಚರಿಸುತದೆ
ಕಟ್ಟಿದ ನಾಗನ ಕಟ್ಟೆ , ಕಟ್ಟಿದ ದೈವಸ್ಥಾನ ಕೆಡವಿ, ಪುನರ್ನಿರ್ಮಾಣದ ಜ್ಯೋತಿಷ್ಯದಿಂದ ದೂರವಿರೋಣ
ಮನೋಬಲ ಕುಗ್ಗಿದವನಿಗೆ ಮಾತ್ರ ಜ್ಯೋತಿಷ್ಯದ ಬಲ ಉಪಯೋಗಕ್ಕೆ ಬರುತದೆ
ನಮ್ಮೊಳೊಗಿನ ಭಿನ್ನತೆಗೆ ಜ್ಯೋತಿಷ್ಯದ ಅಂಟನ್ನು ಬಳಸಿದರೆ – ಅಂಟಿನ ಭಾರ ಹೊರಲು ಅಸಾಧ್ಯ – ಎಚ್ಚರವಿರಲಿ
ದೈವ ದೇವರ ಏಕತೆಯ ಅಂಬೋಣ – ಇಂದಿನ ಬದುಕಾದರೆ – ಏಕತೆಯ ಮದ್ದಿಗಾಗಿ ಅಲೆದಾಡಬೇಕಾಗಿಲ್ಲ.
ನಮ್ಮ ತಪ್ಪನ್ನು, ಅನ್ಯರಿಂದ ಯಾ ನಮ್ಮಿಂದ ನಾವೇ ಅರಿತು ಬಾಳಿದಾಗ – ನಮ್ಮ ನಡೆ ದೇವಾಲಯದತ್ತ – ದೇವರತ್ತ
ಪ್ರತಿ ಊರಿನಲ್ಲಿ ಜ್ಯೋತಿಷ್ಯ ಬಳಕೆದಾರರ ಒಕ್ಕೂಟ / ವೇದಿಕೆ ರಚನೆಯಾಗಿ – ಚಿಂತನ ಮಂಥನ ಅನುಷ್ಠಾನದತ್ತ ಗಮನ ಹರಿಸಿದರೆ ನಮ್ಮೆಲ್ಲರ ಸಂಕಷ್ಟಗಳು ದಿನ ಕಳೆದಂತೆ ಮಾಯವಾಗಿ ಅಂತ್ಯದಲ್ಲಿ ಕೊನೆಯಾಗಬಹುದು.