ಅರಸು ಪದ್ದತಿಯಲ್ಲಿ ನೂರಕ್ಕೆ ನೂರು ಸ್ವಚ್ಛ ಪ್ರಜಾಪದ್ಧತಿ ಬಳಕೆಯಲ್ಲಿ ಇತ್ತು. ಆದರೆ ನಮ್ಮ ಕಣ್ಣಿಗೆ ಅದು ಕಾಣಲೇ ಇಲ್ಲ. ಅತ್ಯಂತ ಕೆಳಗಿನ ಮಟ್ಟದಲ್ಲಿ ಎಲ್ಲರ ಒಪ್ಪಿಗೆ ಮೇರೆಗೆ ಬಾರಿಕೆಯವರ ಆಯ್ಕೆ. ಒಂದು ಹಂತ ಮೇಲೆ ಗುತಿನವರ ಆಯ್ಕೆ , ಇನ್ನೊಂದು ಹಂತ ( ಅರಸರ ವ್ಯಾಪ್ತಿಗೆ ಅನುಗುಣವಾಗಿ) ಸೀಮೆ ಗುತ್ತು, ಮಗದೊಂದು ಸೀಮೆ ಅರಸ ಕೊನಗೆ ಅರಸ. ಇಲ್ಲಿ ಜನ ಮನದ ಅಭಿಪ್ರಾಯಕ್ಕೆ ಬೆಲೆ ಮತ್ತು ದೈವ ದೇವರುಗಳ ಒಪ್ಪಿಗೆಗೆ ಅನುಗುಣವಾಗಿ ಅರಸನ ಪಟ್ಟಾಭಿಷೇಕ ನಡೆಯುತಿತ್ತು .
ಹತ್ತು ಜನರಿರುವ ಪುಟ್ಟ ದೇಶದಲ್ಲಿ ಒಬ್ಬ ಕಾನೂನು ಮಾಡುವವ, ಒಬ್ಬ ಅನುಷ್ಠಾನ ಮಾಡುವವ , ಒಬ್ಬ ತಪ್ಪು ಮಾಡಿದವರಿಗೆ ಶಿಕ್ಷಿಸುವವ – ಇದು ಪ್ರಜಾಪದ್ದತಿಯ ನಗ್ನ ಚಿತ್ರಣ. ಈ ಮೂರೂ ಜನರು ತಮ್ಮ ಕೆಲಸ ಕಾರ್ಯಗಳನ್ನು
ನೂರಕ್ಕೆ ನೂರು ಸಮರ್ಪಕವಾಗಿ ಮಾಡಿದರೆ ಅದು ಚಾಲನೆಯಲ್ಲಿರುವ ಪ್ರಜಾಪ್ರಭುತ್ವ ವಾಹನ. ಆದರೆ ಶೇಕಡಾ ೧೦ ಕಿಂತ ಕೆಳಗಿನ ಮಟ್ಟದಲ್ಲಿ ಅವರುಗಳ ಕಾರ್ಯವೈಖರಿ ಇದ್ದರೆ ಏನಾದೀತು – ನಮ್ಮ ಬದುಕು ದುರಸ್ತಿ ಮಾಡಲು ಇಟ್ಟಿರುವ ವಾಹನದಲ್ಲಿ ಕುಳಿತ ಜನರ ಬದುಕಾಗಿದೆ .
ನಮ್ಮ ದೇಶದಲ್ಲಿ ಪ್ರಜಾಪದ್ಧತಿ ಅಳವಡಿಸಿದಾಗಲೇ – ಇದರ ಬಗ್ಗೆ ಸ್ಪಷ್ಟವಾದ ಅರಿವು ಜನಸಾಮಾನ್ಯರಲ್ಲಿ ಮತ್ತು ಜನಪ್ರತಿನಿದಿಯಾಗಲು ಬಯಸುವವರಿಗೆ ಪ್ರಾಮುಖ್ಯವಾಗಿ ದೊರೆಯುವಂಥ ವ್ಯವಸ್ಥೆ ಮಾಡಬೇಕಿತ್ತು. ಅದರ ಬಗ್ಗೆ ಇನ್ನು ಕೂಡ ನಾವು ಜಾಗ್ರತರಾಗದೆ ಇರುವುದರಿಂದ ಜನನಾಯಕರ ಮೋಜಿನ ಆಟಕ್ಕೆ ದೇಶ ಮತ್ತು ಜನರ ಬದುಕು ಬಲಿಯಾಗುತಿದೆ.
ಶಿಕ್ಷಣ ಎಂಬ ಆಮದಾದ ಯಂತ್ರವನ್ನು ನಮ್ಮಲ್ಲಿ ಅಳವಡಿಸಿ – ಅಮೂಲ್ಯ ಸಮಯ , ದೇಶದ ಸಂಪತ್ತು, ಮಾನವ ಸಂಪನ್ಮೂಲ ದುರುಪಯೋಗ ಆಗುವುದರಲ್ಲಿ ಸಫಲತೆಯನ್ನು – ಅಭಿವೃದ್ಧಿಗೆ ಪೂರಕ ವಾತಾವರಣದಲ್ಲಿ ವಿಫಲತೆಯನ್ನು ನಮ್ಮ ಮುಂದೆ ಪ್ರದರ್ಶಿಸುತಿದೆ
ಸಮಸ್ಯೆಗಳ ಸರಮಾಲೆ ಪ್ರದರ್ಶನ ಪಕ್ಕಕ್ಕೆ ತಳ್ಳಿ – ಜನಾಭಿಪ್ರಾಯದ ಸಂಗ್ರಹ ಮದ್ದು – ನಮ್ಮ ಒಳಿತಿಗಾಗಿ
ಪ್ರಜಾಪದ್ಧತಿ ಬಳಕೆದಾರರ ಒಕ್ಕೂಟ /ವೇದಿಕೆ ಮೂಲಕ ಸ್ಪಷ್ಟ ಅರಿವು ಜನಸಾಮಾನ್ಯರಲ್ಲಿ ಮೂಡಿಸುವುದು
ಶಿಕ್ಸಣದಲ್ಲಿ ಮೊದಲ ಆದ್ಯತೆ ಪ್ರಜಾಪದ್ಧತಿ ಅರಿವು ಹುಟ್ಟಿಸುವುದಕ್ಕಾಗಿ
ಪ್ರಜಾಪ್ರತಿನಿದಿಗಳಿಗೆ – ಸೂಕ್ತ ತರಬೇತಿ – ಪಾಸಾದವರಿಗೆ ಮಾತ್ರ ನಿಲ್ಲಲು ಅವಕಾಶ
ಮಾನವೀಯ ಮೌಲ್ಯಗಳನ್ನು ಕಡೆಗಣಿಸುವ ಜನಬೆಂಬಲಕ್ಕೆ ಅವಕಾಶವಿಲ್ಲ
೧೦೦% ತಪ್ಪಿತಸ್ಥರಿಗೆ ಶಿಕ್ಷೆ.ಇದು ಅಪರಾಧಿಯನ್ನು ಸಾಮಜಿಕ ಕಾಯಿಲೆಯಿಂದ ಮುಕ್ತಿಗೊಳಿಸಬೇಕು
ದೇಶದ ೧೦೦% ಜನರು ದೇಶದ ಕಾನೂನು ಪಾಲನೆ
ಮೊದಲು ಶಾಸಕರು ಸಂಸದರು ದೇಶದ ಕಾನೂನು ೧೦೦% ಪಾಲನೆ ಮಾಡಲೇ ಬೇಕು
ಪ್ರಪಂಚ- ದೇಶದ ಬೊಕ್ಕಸದಿಂದ ಸುತ್ತುವ ಜನನಾಯಕರೇ – ನಮ್ಮಲ್ಲಿರುವ ಲೋಪವನ್ನು ಅರಿತು ಸರಿಪಡಿಸಿ
ಒಬ್ಬ ವ್ಯಕ್ತಿ ಎಲ್ಲಿಯಾದರೂ ಕಾನೂನು ಲೋಪ ಮಾಡಿದರೆ ತಪ್ಪಿಸಲು ಅಸಾಧ್ಯ ಅಲ್ಲಿ. ಇಲ್ಲಿ ನೂರು ತಪ್ಪುಗಳು ನಗಣ್ಯ
ಪ್ರಜಾಪ್ರಭುತ್ವ ಯಂತ್ರ ಕೆಟ್ಟು ನಿಂತಿದೆ. ಸರಿ ಮಾಡಲು ಇನ್ನೊಮ್ಮೆ ಅನ್ಯ ದೇಶದವರು ಬರಬೇಕೆ ?
ಪ್ರಜಾಪ್ರಭುತ್ವದ ಮೂಲಉದ್ದೇಶ ಅರಿತು, ಬದ್ಧತೆ ತೋರಿಸಿ, ಆಡಳಿತ ನಡೆಸಿ
ಒಂದು ತಪ್ಪಿಗೆ ಎರಡು ಶಿಕ್ಷೆ ತಪ್ಪಿಸಿ. ಒಂದೇ ಶಿಕ್ಷೆ , ಇದು ನಿಯಮ ಪಾಲಿಸಿ
ಮಾಡಿದ ತಪ್ಪನ್ನು ಒಪ್ಪಿಕೊಳ್ಳುವ ಮಾನವರು ನಾವಾಗೋಣ
ತಪ್ಪಿಗೆ ಶಿಕ್ಷೆ ಸಾಮಾಜಿಕ ಕಾಯಿಲೆಗೆ ಮದ್ದು ಅರಿತು ಬಾಳೋಣ
ಶಿಕ್ಷೆಗೆ ಒಳಗಾದವರು ಯಾವುದಕ್ಕೂ ಅನರ್ಹರಲ್ಲ. ಇದು ಅರ್ಥಗರ್ಭಿತ ಕಾನೂನು ಅನುಷ್ಠಾನಗೊಳ್ಳಲಿ.
ಸಾವಿರಾರು ಕಾನೂನುಗಳಿಂದ ಅಭಿವೃದ್ಧಿ ಅಸಾಧ್ಯ. ತಪ್ಪು ಮಾಡಿದವನಿಗೆ ಶಿಕ್ಷೆ ತಪ್ಪಿಸಲು ಅಸಾಧ್ಯ ಎಂಬ ಒಂದು ಕಾನೂನಿನ ಅನುಷ್ಠಾನ ಕತ್ತಲು ಬದುಕಿನಿಂದ ಬೆಳಕಿನತ್ತ ಮನೋವೇಗದ ಚಾಲನೆ ಸಿಗುತದೆ
ಮಾನವ ಜನಾಂಗದ ಕೆಟ್ಟ ಆಡಳಿತಕ್ಕೆ – ದೇವರು ಮತ್ತು ಪ್ರಕೃತಿ ಕೋರೋಣ ರೂಪ ತಾಳಿದೆ. ಇದರ ಆರ್ಭಟ ಅಟ್ಟಹಾಸ ಸಾಕು. ನಾವು ದೇವರೊಂದಿಗೆ ಪ್ರಕೃತಿಯೊಂದಿಗೆ ಬದುಕುವ ಸಂಕಲ್ಪ ಮಾಡೋಣ