ನಿನ್ನ ಸನಿದಿಯಲ್ಲಿ  ದೇಹ ಬಾಯಲ್ಲಿ ಮಂತ್ರ 
ಕಣ್ಣಿನಲ್ಲಿ ಲೋಕ ತಂತ್ರ 
ಇದು ಭಕುತನ ನಾಟಕವೆಂದ …………………………………………….ಅವ್ಯಕ್ತ
ತನ್ನ ಕಂಬಾತ ಏರುತಿಹನು 
ಅನ್ಯ ಕಂಬಾತ ಇಳಿಯುತಿಹನು 
ನಿನ್ನ ಕಂಬಾತ ಹಾರುತಿಹನು ………………………………………………ಅವ್ಯಕ್ತ
ಮಾತಾ ಪಿತೃಗಳ ಆಯ್ಕೆ ನಿನ್ನದಯ್ಯಾ 
ಮಕ್ಕಳು  ಬಂದುಗಳ ಆಯ್ಕೆ ನಿನ್ನದಯ್ಯಾ 
ಸತಿ ಪತಿಗಳ ಆಯ್ಕೆ ಎಮಗೇಕಯ್ಯ ………………………………………..ಅವ್ಯಕ್ತ
ದೇಹ ಯಾತ್ರೆ ಮುಗಿದಿರಲು 
ಮನದ ಯಾತ್ರೆ ಭವದೊಳಿರಲು 
ನಾ ನಿನ್ನ ನಂಟನೆ ………………………………………………………….ಅವ್ಯಕ್ತ
ದೇವಾ ನೀ ಕಾಣದೆ ಬದುಕಿದೆ 
ದೇಹ ಹೊತ್ತ ನಾ ನಿನ್ನ ಅಡಿಯಿಡಲು 
ನನ್ನವರು ಹುಚ್ಚು  ಪಟ್ಟ ಕಟ್ಟರೆ ………………………………………………ಅವ್ಯಕ್ತ
ನಿನ್ನ ತಲೆಯ ಮೇಲೆ ಕೂತು ಹೊಡೆ ರಾವಣ ಬಾಣ
ನಿನ್ನ ಕಾಲ ಬುಡದಿ ಕೂತು ಹೊಡೆ ರಾಮ ಬಾಣ 
ನಾ ಕುಲ್ಲಿರ್ಪ ಪರಿ  ತಿಳಿ ಪೆಳೆಂದ…………………………………………….ಅವ್ಯಕ್ತ
ನನ್ನೀ ಕಾಯಕ ನಿನ್ನ ಸೇವಾಯೋಲಿರಲು 
ಕಾಯಕ ರೋಗಕ್ಕೆ ತುತ್ತಾದೊಡೆ
ನಿನ್ನ ಬಿಟ್ಟು ಅನ್ಯ ವೈದ್ಯರ ನಾ ಕಾಣೆ………………………………………..ಅವ್ಯಕ್ತ
ಭಕುತರು ಬೆವರಿಳಿಸಿ ಮಲ್ಪ ದೇವಾಲಯ 
ಭಿಕ್ಸುಕರಿಂದ ಭಿಕ್ಷೆ ಬೇಡಿ ಮಲ್ಪ ದೇವಾಲಯ 
ಇವೆರಡರಲ್ಲಿ ನಿನ್ನಾಲಯ ತಿಳಿಸಬಲ್ಲೆಯಾ ……………………………………ಅವ್ಯಕ್ತ
ನಿಶ್ಚಯಿಸಿದಂದು  ಮದುವೆ ಅಂತ್ಯಕ್ರಿಯೆ ಅಂತ್ಯ ಸಂಸ್ಕಾರ ಅನುಜ್ಞಾಕಲಸ  ಮಾಲ್ಪರು
ಜೀರ್ಣೋದಾರ ಪುನರ್ಪ್ರತಿಷ್ಠೆ  ಬ್ರಹ್ಮಕಲಶೋತ್ಸವ ಎದುರಾದೊಡೆ 
ನಾಳೆ  ನಾಳೆಯೆಂಬ ಭಕುತರಿಗೆ ನಿನ್ನ ಅನುಗ್ರವಿರುವುದ್ದೇ ……………………..ಅವ್ಯಕ್ತ
ದೇವಾ ನಿನ್ನ ಕಾಣದಿಹೆನು
ನಿನ ಪೂಜಿಪನ ಕಾಲಿಗೆ ಬೀಳುತಿಹೆನು
ನಾ ಕೊಚ್ಚೆಯಲ್ಲಿಹೆನೆ……………………………………………………………..ಅವ್ಯಕ್ತ
ದೇವರು ದೇವರುಗಳ ಮದ್ಯೆ ಅಡ್ಡಗೋಡೆ ಕಟ್ಟಿಹರು
ಪಕ್ಷ ಪಕ್ಷಗಳ ಮದ್ಯೆ ಅಡ್ಡಗೋಡೆ ಕಟ್ಟಿಹರು  
ಮುಗ್ದ ಮಕ್ಕಳೆಂದ ………………………………………………………………..ಅವ್ಯಕ್ತ
ದೇಹ ಮಂದಿರದಿ ದೇವರ ಕುಲ್ಲಿರ್ಪದಾತ
ಕಲ್ಲುಮಣ್ಣು  ಕೋಟೆ ಒಳಗಿಹ ದೇವರ 
ದರ್ಶನ ಲಾಭ ದುರ್ಲಭವೆಂದ ………………………………………………………ಅವ್ಯಕ್ತ