ಚಿಂತೆ ಚಿತೆಯಾಗಿ ಸುಡುತಿಹುದು
ಚಿಂತನೆ ಪ್ರಗತಿಯ ಮೆಟ್ಟಲಾಗಿಹುದು
ಚಿಂತೆ ಚಿಂತನೆಯನ್ನಾಗಿಸದವ ಬದುಕಿರಲಾರ…………………………………..ಅವ್ಯಕ್ತ
ಅತಿ ಸಂತಾನ ರಾಕ್ಷಸಿ ಪ್ರವೃತಿ
ಮಿತ ಸಂತಾನ ಮಾನವ ಪ್ರವೃತಿ
ಸಂತಾನ ರಹಿತ ಬಾಳು ದೇವಾ ಮಾನವ ಪ್ರವೃತಿ ………………………………..ಅವ್ಯಕ್ತ
ಬೋರ್ಡು ಇಲ್ಲದ ಬಸ್ಸು
ಗೊತ್ತು ಗುರಿಯಿಲ್ಲದ ಬದುಕು
ಏರಿಪರು ನಂಬಿಪರು ಜಗದೊಳಿಲ್ಲವಯ್ಯಾ …………………………………………ಅವ್ಯಕ್ತ
ಪ್ರರವೂರ ದಾನಿಗಳ ನಂಬಿ ಕೆಡವಿದ ದೇವಾಲಯ
ಅನ್ಯರ ಪೆಟ್ಟಿಗೆಯ ಧನವ ನಂಬಿ ಬಾಳುತಿರುವ ಬದುಕು
ನಿಂತ ನೀರಾಗಿ ನಿತ್ಯ ನಾರುತಿರುವುದು ನೋಡಾ ……………………………………ಅವ್ಯಕ್ತ
ದ್ರವ್ಯ ತೆತ್ತು ಪುಣ್ಯ ಕೊಂಬರು
ದ್ರವ್ಯ ತೆತ್ತು ಪಾಪ ಕೊಂಬರು
ದ್ರವ್ಯವಿಲ್ಲದೆ ಪಾಪ ಪುಣ್ಯ ಕೊಂಬಲು ಅಸಾಧ್ಯವೇ …………………………………….ಅವ್ಯಕ್ತ
ದಾನದ ಮರ್ಮವನ್ನರಿಯದ ದಾನಿ ಇರುತಿರೆ
ಭಿಕ್ಷೆಯ ಮರ್ಮವನರಿಯದ ಭಿಕ್ಸುಕರು ಇರುತಿರೆ
ದಾನ ದರೋಡೆಕೋರನಿಗೆ ತೆರೆದಿಟ್ಟ ಅಂಗಡಿಯೆಂದ ………………………………….ಅವ್ಯಕ್ತ
ಪಟ್ಟಕ್ಕೇರುತಿರುವ ಇಷ್ಟನೇ ಕೇಳು
ಕುಲ್ಲಿರ್ಪವರ ಇಷ್ಟ ನಿನಿಷ್ಠವಾದೊಡೆ ಪಟ್ಟಗಟ್ಟಿ
ನಿನಿಷ್ಟವಾ ಹೇರಿದೊಡೆ ಹೊರುವ ಕತ್ತೆಗಳಿಲ್ಲ ಜಗದೊಳು ………………………………..ಅವ್ಯಕ್ತ
ಅಲ್ಪ ಸಂಖ್ಯಾಕರ ಮನದಾಳದ ನೋವು ನಕ್ಸಲ್ ಆತ್ಮಹತ್ಯಾದಲ ಸೃಷ್ಟಿ
ಬಹು ಸಂಖ್ಯಾಕರ ಮನದಾಳದ ನೋವು ಸಂಘ ಸಂಘಟನೆ ಬಂದ್ ಸೃಷ್ಟಿ
ಮಂಡಲದ ನೋವನ್ನಾಳಿಸ ಕೊರತೆ ಮಾನವ ಜನಾಂಗದ ಅಂತ್ಯದ ಕರೆಗಂಟೆ ………….ಅವ್ಯಕ್ತ
ಕಾಡನ್ನು ನಾಡನ್ನಾಗಿಸುವ ಪತ್ರಿಕಾ ಸ್ವಾತಂತ್ರ್ಯ
ಅಧರ್ಮಿಯರನ್ನು ಧರ್ಮಿಯರನ್ನಾಗಿಸುವ ಪತ್ರಿಕಾ ಸ್ವಾತಂತ್ರ್ಯ
ಕಲ್ಲಿನಿಂದ ಮೂರ್ತಿಯನ್ನಾಗಿಸುವ ಪತ್ರಿಕಾ ಸ್ವಾತಂತ್ರ್ಯ ಜನರ ಬಯಕೆ ……………………ಅವ್ಯಕ್ತ
ಸಹೋದರ ಸಹೋದರಿಯರ ಕಪಾಲ ಮೋಕ್ಷ
ಇಷ್ಟ ಮಿತ್ರರ ಚಾಟಿಯೇಟು
ವ್ಯಕ್ತ ಅವ್ಯಕ್ತನನ್ನಾಗಿಸಲು ಸಾಲದೆಂದ ……………………………………………………..ಅವ್ಯಕ್ತ
ಮಕ್ಕಳಿದ್ದು ಮಕ್ಕಳಿಲ್ಲದ ಬದುಕು
ಬಂದುಗಳಿದ್ದು ಬಂದುಗಳಿಲ್ಲದ ಬದುಕು
ದಾರಿ ತಪ್ಪಿದ ದಾರಿ ಕಾಣಿಪರ ಸೃಷ್ಟಿಯೆಂದ ………………………………………………….ಅವ್ಯಕ್ತ
ಪಾನಕ್ಕೆ ದಾಸನಾಗಿಹ ಎನ್ನ
ಚಟಕ್ಕೆ ದಾಸನಾಗಿಹ ಎನ್ನ
ಬಂಧ ಮುಕ್ತನಾಗಿಸು ಜಗದೊಡೆಯ ……………………………………………………………ಅವ್ಯಕ್ತ