ಹಣ್ಣು ಇಲ್ಲದ ಮರ
ಹಣ ಇಲ್ಲದ ಮನುಜ
ಬದುಕಿ ಫಲವೇನು ………………………………………………ಅವ್ಯಕ್ತ
ವಸ್ತು ಕೊಂಬ ಹಣ ಕೊಂಬುತಿಹುದು ಮನುಜನ
ಮ್ಸನುಜ ವಸ್ತುವಿಗೆ ಆಹಾರವಾಗಿ ಬದುಕುತಿಹನು
ವಸ್ತುವಾಗಿ ಬಾಳಲಾರದವ ಬದುಕಿರಲಾರ…………………………ಅವ್ಯಕ್ತ
ಹಣವ ತಲೆಯಲ್ಲಿಟ್ಟವ ಮೆರೆಯುತಿಹನು
ಹಣವ ಕಿಸೆಯಲ್ಲಿಟ್ಟವ ಬದುಕುತಿಹನು
ಹಣವ ನಗಣ್ಯನೆಂದವ ಸಾಯುತಿಹನು ……………………………..ಅವ್ಯಕ್ತ
ದೈವ ದೇವಸ್ಥಾನಗಳಲ್ಲಿ ಪಾಪದ ಹಣವಿರುವುದಯ್ಯ
ಸರಕಾರ ಉದ್ದಿಮೆಗಳಲ್ಲಿ ಶಾಪದ ಹಣವಿರುವುದಯ್ಯ
ದುಡಿದು ತಿಂಬವರಲ್ಲಿ ಪುಣ್ಯದ ಹಣವಿರುವುದಯ್ಯ …………………… ಅವ್ಯಕ್ತ