ದಕ್ಸಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟಗಳಿಗೆ ಈ ವೇದಿಕೆಯು ತಮ್ಮ ಒಕ್ಕೂಟಗಳು ನಡೆದು ಬಂದ ದಾರಿಯನ್ನು ಸಂಕ್ಷಿಪ್ತ – ಸಮಗ್ರ ಪ್ರಕಟಣೆಗೆ ಅವಕಾಶ ಕಲ್ಪಿಸಿದ್ದು ತಾವುಗಳು ತ್ವರಿತವಾಗಿ ಸ್ಪಂದಿಸಬೇಕಾಗಿ ವಿನಂತಿ ಮಾಡುತಿದ್ದೇವೆ. ಬುಲೆಟಿನ್ ಮಾಧ್ಯಮದ ನಾಮಾಂಕಿತದಿಂದ ನಡೆಸಲ್ಪಡುವ ಸಮುಸ್ಥೆಯಾದ ಕಾರಣ ಬುಲೆಟಿನ್ ಮಾದರಿಯಲ್ಲಿ ತಮ್ಮ ವರದಿ ಕಳುಹಿಸಿ. ಯಾವುದೆ ನಿರ್ದಿಷ್ಟ ನಿಯಮಗಳಿಲ್ಲದೆ ಜನಸಾಮಾನ್ಯರಿಗೆ ಕಣ್ಣಿಗೆ ಕಟ್ಟುವ ರೀತಿಯಲ್ಲಿ ನಿಮ್ಮ ಲೇಖನವಿದ್ದರೆ ಸೂಕ್ತ. ಕೇವಲ ಏಳು ದಿನಗಳ (ಇಂದಿನಿಂದಲೆ) ಒಳಗೆ ತಮ್ಮ ಲೇಖನ ನಮಗೆ ತಲುಪಿ ಉಚಿತ ಪ್ರಕಟಣೆಯ ಸೌಲಭ್ಯ ಪಡೆಯಿರಿ. ಇದು ಕಷ್ಟ ಸಾಧ್ಯ ಎಂದು ಕಂಡು ಬಂದಲ್ಲಿ ಕರಡು ಪ್ರತಿಯನ್ನು ಸದ್ಯ ಕಳುಹಿಸಿ ಮುಂದಕ್ಕೆ ನಿಜ ಪ್ರತಿ ಕನಿಷ್ಠ ಶುಲ್ಕದೊಂದಿಗೆ ಪ್ರಕಟಣೆಗೆ ಅವಕಾಶವಿದೆ.
ಕೆಲವೊಂದು ನಿಯಮಾವಳಿಗಳು
೧ . ಒಂದು ಪುಟ ಅಂದರೆ ೩೦೦ ಪದಗಳು ಮತ್ತು ಎರಡು ಭಾವಚಿತ್ರಕ್ಕೆ ಮಾತ್ರ ಉಚಿತ ಸೌಲಭ್ಯವಿದೆ
೨. ಹೆಚ್ಚಿನ ಅವಕಾಶ ಬೇಕಾದಲ್ಲಿ ಪದಗಳಿಗೆ ರೂಪಾಯಿ ೧೦ ರಂತೆ ೫೦ ಪದಗಳ ಪ್ಯಾಕೇಜ್ ಬಳಸಿ
೩. ಒಂದು ಪ್ರಕಟಣೆ ಯಾವುದೆ ಕಾರಣಕ್ಕೂ ಮೂರು ಪುಟಕ್ಕೆ ಕಡ್ಡಾಯ ಸೀಮಿತ – ೯೦೦ ಪದಗಳು ಮಾತ್ರ
೪. ಭಾವಚಿತ್ರ ಒಂದಕ್ಕೆ ರೂಪಾಯಿ ೧೦೦/- ರಂತೆ ಮಿತಿಯಿಲ್ಲದ ಅವಕಾಶ
೫. ಕನಿಷ್ಠ ಶುಲ್ಕದೊಂದಿಗೆ ವರದಿ ಬದಲಾವಣೆಗೆ ಅವಕಾಶ
೬. ವರದಿ ವೆಬ್ಗೆ ಅಪ್ಲೋಡ್ ಮಾಡುವ ರೀತಿಯಲ್ಲಿ ಮಾತ್ರ ಕಳುಹಿಸಿ
೭. ಕನಿಷ್ಠ ಒಕ್ಕೂಟದ ಅಧ್ಯಕ್ಷರಾದವರನ್ನು ಗುರುತಿಸಿ
೮. ಕಟ್ಟಡಗಳ ಅಭಿವೃದ್ಧಿಯ ಜೊತೆಗೆ ಆರ್ಥಿಕ ಅಭಿವೃದ್ಧಿಯ ಚಿತ್ರಣವಿದ್ದರೆ ವರದಿಯ ತೂಕ ಹೆಚ್ಚುತ್ತದೆ
೯. ನಿಮ್ಮ ಅನುಕೂಲಕ್ಕೆ ತಕ್ಕಂತೆ ಅನ್ಯರಿಗೆ ಆದರ್ಶವಾಗುವಂತೆ ಸ್ಪಂದಿಸಬೇಕಾಗಿ ಕೋರಿಕೆ
೧೦. ಅನ್ಯ ಜಿಲ್ಲೆಯವರು ಉಚಿತ ಸೌಲಭ್ಯರಹಿತ ರೂಪಾಯಿ ೧೦೦೦/- ಪಾವತಿಸಿ ಪ್ರಕಟಣೆಗೆ ಅವಕಾಶವಿದೆ.