ಜಿನಾಲಯಲಗಳ ಪ್ರಕಟಣೆಗೆ – ಉಚಿತ ಅವಕಾಶ

ಶೇರ್ ಮಾಡಿ

ಜಿನನನ್ನು ಆರಾಧಿಸುವ ಸ್ಥಳ ಜಿನಾಲಯ, ಇದು ಜೈನರು ದೇವಾಲಯವನ್ನು ಹೆಸರಿಸುವ ಪದ್ಧತಿ ರೂಡಿಯಲ್ಲಿದೆ. ಜೈನ ಧರ್ಮದ ಮೂಲಕ್ಕೆ ಹೋದಾಗ ಜಿನನನ್ನು ಪೂಜಿಸುವ ಪದ್ಧತಿ ಇರದೆ ಅವನ ರೀತಿ ನೀತಿಯಂತೆ ಬದುಕು ಸಾಗಿಸಲು ಸಾಂಕೇತಿಕವಾಗಿ ಜಿನ ಪದವಿಗೆ ಹೋದವರ ಮೂರ್ತಿಯನ್ನಿಟ್ಟು ತನ್ನ ಆತ್ಮ ಕಲ್ಯಾಣಕ್ಕೆ ವ್ಯವಸ್ಥೆಯೆ ಜಿನಾಲಯ. ಜೈನರು ತಮ್ಮ ಧರ್ಮದ ಮೂಲವನ್ನು ಮರೆತುದರ ಫಲವಾಗಿ ಅನ್ಯ ಧರ್ಮದವರ ಅನುಕರಣೆ ಪದ್ಧತಿಯಾಗಿ ಬೆಳೆದುದರ ಪರಿಣಾಮ ಪ್ರಸ್ತುತ ಬದುಕು ನಮಗೆ ಒದಗಿದೆ . ನಾನು ಇಂದು ಎಲ್ಲಿದ್ದೇನೆ ಯಾಕೆ ಬಂದೆ ಹೇಗೆ ಬಂದೆ ಎಂಬ ವಿಚಾರಗಳ ಬಗ್ಗೆ ಚಿಂತಿಸಿ ಕಾಲ ಹರಣ ಮಾಡುವ ಬದಲು – ನಮ್ಮ ಗುರಿ ಸ್ವ ಕಲ್ಯಾಣ – ಜಿನ ಅಂದರೆ ದೇವರ ಬದುಕು ತನ್ನ ಬದುಕಾಗಬೇಕೆಂಬ ಏಕಮಾತ್ರ ಉದ್ದೇಶದತ್ತ ದೃಷ್ಟಿಯನ್ನಿಟ್ಟು – ಮನೋವೇಗದೊಂದಿಗೆ ಮುಂದೆ ಮುಂದೆ ಸಾಗೋಣ.ಹುಟ್ಟಿದ ಮಗು ಬೆಳೆಯುತ್ತಾ ಗೋಡೆ ಹಿಡಿದು ನಡೆದು ಮುಂದಕ್ಕೆ ಗೋಡೆ ಬಿಟ್ಟು ನಡೆಯಲು ಪ್ರಾರಂಭಿಸಿ ಸಹಜವಾಗಿ ನಡೆದಾಗ ಮಾತ್ರ ಮಗುವಿನ ಬೆಳವಣಿಗೆ ಪರಿಪೂರ್ಣ. ಅದರಂತೆ ಗೋಡೆ ಹಿಡಿದು ನಡೆಯುವಷ್ಟರ ಮಟ್ಟಿಗೆ ಬೆಳವಣಿಗಯದ ಮಗುವಿನಂತಿದೆ ನಮ್ಮ ಬದುಕು. ಮುಂದಕ್ಕೆ ಯಾಕೆ ಹೋಗುತಿಲ್ಲ ಎಂಬ ಪ್ರಶ್ನೆ ನಮ್ಮನ್ನು ಎಚ್ಚರಿಸಿ ಉತ್ತರ ಕಂಡುಹಿಡಿದು ಬಾಳುವ ಬಾಳೆ ಜಿನ ಧರ್ಮಿಯರ ಬಾಳೆಂದು ತಿಳಿಯುವ ಸುವರ್ಣ ಅವಕಾಶ ಶೀಘ್ರ ಬರಲಿ
ನಿಮ್ಮ ನಮ್ಮ ಅನುಕೂಲಕ್ಕಾಗಿ ಕೆಲವು ನಿಯಮಗಳು
೧ . ಒಂದು ಪುಟ ಅಂದರೆ ೩೦೦ ಪದಗಳು ಮತ್ತು ಎರಡು ಭಾವಚಿತ್ರಕ್ಕೆ ಮಾತ್ರ ಉಚಿತ ಸೌಲಭ್ಯವಿದೆ
೨. ಹೆಚ್ಚಿನ ಅವಕಾಶ ಬೇಕಾದಲ್ಲಿ ಪದಗಳಿಗೆ ರೂಪಾಯಿ ೧೦ ರಂತೆ ೫೦ ಪದಗಳ ಪ್ಯಾಕೇಜ್ ಬಳಸಿ
೩. ಒಂದು ಪ್ರಕಟಣೆ ಯಾವುದೆ ಕಾರಣಕ್ಕೂ ಮೂರು ಪುಟಕ್ಕೆ ಕಡ್ಡಾಯ ಸೀಮಿತ – ೯೦೦ ಪದಗಳು ಮಾತ್ರ
೪. ಭಾವಚಿತ್ರ ಒಂದಕ್ಕೆ ರೂಪಾಯಿ ೧೦೦/- ರಂತೆ ಮಿತಿಯಿಲ್ಲದ ಅವಕಾಶ
೫. ಕನಿಷ್ಠ ಶುಲ್ಕದೊಂದಿಗೆ ವರದಿ ಬದಲಾವಣೆಗೆ ಅವಕಾಶ
೬. ವರದಿ ವೆಬ್ಗೆ ಅಪ್ಲೋಡ್ ಮಾಡುವ ರೀತಿಯಲ್ಲಿ ಮಾತ್ರ ಕಳುಹಿಸಿ
೭. ಮೂಲ ದೇವರಾದನೆಗೆ ಮಹತ್ವ ಕೊಟ್ಟ ಉಲ್ಲೇಖವಿರಲಿ
೮ . ನಿಮ್ಮ ಅನುಕೂಲಕ್ಕೆ ತಕ್ಕಂತೆ ಅನ್ಯರಿಗೆ ಆದರ್ಶವಾಗುವಂತೆ ಸ್ಪಂದಿಸಬೇಕಾಗಿ ಕೋರಿಕೆ
೯ . ಉಚಿತ ಸೌಲಭ್ಯದ ಅವಧಿ ಮೀರಿದ ಮೇಲೆ ರೂಪಾಯಿ ೧೦೦೦/- ಶುಲ್ಕವಿರುತ್ತದೆ
೧೦. ಉಚಿತ ಸೌಲಭ್ಯಕ್ಕೆ ಏಳು ದಿನಗಳ ಮಿತಿ ಈ ದಿನ ಸೇರಿ.
೧೧. ಬಸದಿಯಲ್ಲಿರುವ ವ್ಯವಸ್ಥೆಯ ಮಾಹಿತಿ ಇರಲಿ

See also  ರೆಂಜಿಲಾಡಿ :ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ಅಶ್ವತ್ಥೋಪನಯನ, ವಿವಾಹ ಸಂಸ್ಕಾರ ಹಾಗೂ ವಾರ್ಷಿಕ ಜಾತ್ರೋತ್ಸವ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?