ದೇವಾಲಯಗಳ ಪ್ರಕಟಣೆಗೆ – ಉಚಿತ ಸೌಲಭ್ಯ

ಶೇರ್ ಮಾಡಿ

ಒಂದು ಊರಿಗೆ ಅಥವಾ ಕೆಲವೆ ಸೀಮಿತ ವ್ಯಾಪ್ತಿಯನ್ನು ಹೊಂದಿರುವ ದೇವಾಲಯಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಕನಸ್ಸು ಕಂಡ ಹುಲ್ಲು ಕಡ್ಡಿ ಮಾನವನಿಗೆ ಇಂದು ಪ್ರತಿಯೊಂದು ದೇವಾಲಯಗಳನ್ನು ಕೂಡ ಸೂರ್ಯ ಕಾಣುವ ಸ್ಥಳಗಳಿಗೆ ಹೊತ್ತೊಯ್ಯುವ ಅವಕಾಶ ಕಲ್ಪಿಸಿದ ಕಾಣದ ಅವ್ಯಕ್ತ ಶಕ್ತಿಗೆ ಅವ್ಯಕ್ತ ಪ್ರಣಾಮಗಳನ್ನು ಅರ್ಪಿಸುತ್ತ ನಾನು ನನ್ನಿಂದ ದೂರವಾದಾಗ ಮಾತ್ರ ದೇವರು ನಮಗೆ ಕಾಣಲು ಸಿಗುತಾರೆನ್ನುವ ಜ್ಞಾನದ ಮಜ್ಜನ ಮಾಡೋಣ.ದೇವರು ದೇವಾಲಯಗಳು ಮೂರನೆ ತಲೆಮಾರಿಗೆ( ೬೦ ವರುಷ ದಾಟಿದವರಿಗೆ ) ಮೀಸಲೆಂಬ ಹಣೆಪಟ್ಟಿ ಬದಲಾಗಿ – ಇದು ಪ್ರತಿಯೊಬ್ಬರಿಗೂ ಬೇಕಾದ ಬದುಕಿನ ಶಿಕ್ಸಣ ಕೊಡುವ ನಿಜವಾದ ಶಿಕ್ಸಣಾಲಯ ಎನ್ನುವ ಅರಿವು ಮಾನವರಲ್ಲಿ ಹುಟ್ಟಿಸುವ ಕೆಲಸ ಅಗತ್ಯವಾಗಿ ಆಗಬೇಕಿದೆ. ಧಾರ್ಮಿಕ ಶಿಕ್ಸಣಕ್ಕೆ ಒತ್ತು ಕೊಟ್ಟು , ದೇವಾಲಯದ ಅಂದಿನ ಮೂಲ ಉದ್ದೇಶದ ಬಗ್ಗೆ ಚಿಂತನ ಮಂಥನ ಅನುಷ್ಠಾನವಾದಾಗ ಮಾನವ ಜನಾಂಗ ಸ್ವಯಂ ಪ್ರೇರಿತವಾಗಿ ಮಾನವಾಗುತಾರೆ. ಆದರ್ಶ ದೇವಾಲಯದ ಯಜಮಾನ, ಆದರ್ಶ ದೇವಾಲಯ, ಆದರ್ಶ ಅರ್ಚಕರು, ಆದರ್ಶ ಪೂಜಾ ಪದ್ಧತಿ ಬಗ್ಗೆ ವಿಬ್ಭಿನ್ನತೆಗೆ ತಿಲಾಂಜಲಿ ಇತ್ತು ಏಕತೆಯತ್ತ ಒಲವು ಮೂಡಬೇಕಾಗಿದೆ. ದೇವರಿಗೆ ದೇವಾಲಯಕ್ಕೆ ಹಣದ ದಾಹ ಮಾನವರಿಗಿಂತ ಮಿಗಿಲಾಗಿರುವುದು ಇಂದಿನ ಸ್ಥಿತಿ ಮಾನವ ನಿರ್ಮಿತ. ಸಾಮೂಹಿಕ ಪೂಜಾ ಪದ್ಧತಿ – ವ್ಯಕ್ತಿಕ ಪೂಜೆಯಾಗಿ ಪರಿವರ್ತನೆ , ತ್ಯಾಗ ಮಂತ್ರ ಪಠಣ ದಿಕ್ಕರಿಸಿ ಸ್ವಾರ್ಥ ಮಂತ್ರ ಪಠಣ, ದೇವರ ನಿಧಿಯನ್ನು ದೋಚುವ ರೀತಿಯಲ್ಲಿರುವ ಮನೋಕಾಮನೆಗಳು – ಬೇಸರಗೊಂಡು ದೇವರೆ ದೇವಾಲಯ ಬಿಟ್ಟು ಎಲ್ಲೋ ಕಾಡಿಗೆ ಹೋಗಿದ್ದಾರೆಂದು ನಾವು ಮಾತನಾಡುವುದು ಅರ್ಥವತ್ತಾಗಿದೆ. ಈ ಜಗತ್ತು ಮಾನವರೊಂದಿಗೆ, ಪ್ರಾಣಿಗಳಿಗೆ, ಜಲಚರಗಳಿಗೆ ,ಗಿಡಮರಗಳಿಗೆ, ಸಕಲ ಜೀವರಾಶಿಗಳಿಗೆ ಮತ್ತು ಪಂಚ ಭೂತಗಳ ಪೂರಕ ಪ್ರಕ್ರಿಯೆಗೆ ಮೀಸಲು ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರಕೃತಿಯೊಂದಿಗೆ ಎಲ್ಲವನ್ನು ತನ್ನ ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಲು ಬಹುದೂರ ಸಾಗಿದ ಮಾನವ ಪ್ರಕೃತಿಯೇ ಮುನಿದು ತಕ್ಕ ಪಾಠ ಹೇಳಲು ಸಿದ್ಧತೆ ಮಾಡುತಿರುವಂತೆ ಕಾಣುತಿದೆ, ನಮ್ಮಲ್ಲಿರುವ ವೈರತ್ವ ರೋಗಕ್ಕೆ ಮದ್ದು ದೇವರು ಮತ್ತು ದೇವಾಲಯದ ಮೂಲವನ್ನರಿತು ಮುನ್ನಡೆದಾಗ ಖಂಡಿತಾ ಸಾಧ್ಯ. ನನ್ನ ವೈರಿ ನನ್ನೊಳಗಿದ್ದಾನೆ – ಅವನನ್ನು ಹೊರಹಾಕುವ ದ್ರಡ ಸಂಕಲ್ಪ ಮಾಡುವುದೆ ನಿಜವಾದ ನಾವು ಮಾಡುವ ದೇವರ ಪೂಜೆ. ದೇವಾಲಯದ ಸಮಗ್ರ ಸಂಕ್ಷಿಪ್ತ , ಬುಲೆಟಿನ್ ಮಾದರಿಯ ಪ್ರಕಟಣೆಗೆ ಈ ವೇದಿಕೆ ಅವಕಾಶ ಬಳಸಿಕೊಳ್ಳಬೇಕಾಗಿ ವಿನಂತಿ. ಈ ಉಚಿತ ಸೌಲಭ್ಯ ಕಡಬ ಮತ್ತು ಪುತ್ತೂರು ತಾಲೂಕಿಗೆ ಸೀಮಿತವಾಗಿದೆ.
ನಿಮ್ಮ ನಮ್ಮ ಅನುಕೂಲಕ್ಕಾಗಿ ಕೆಲವು ನಿಯಮಗಳು
೧ . ಒಂದು ಪುಟ ಅಂದರೆ ೩೦೦ ಪದಗಳು ಮತ್ತು ಎರಡು ಭಾವಚಿತ್ರಕ್ಕೆ ಮಾತ್ರ ಉಚಿತ ಸೌಲಭ್ಯವಿದೆ
೨. ಹೆಚ್ಚಿನ ಅವಕಾಶ ಬೇಕಾದಲ್ಲಿ ಪದಗಳಿಗೆ ರೂಪಾಯಿ ೧೦ ರಂತೆ ೫೦ ಪದಗಳ ಪ್ಯಾಕೇಜ್ ಬಳಸಿ
೩. ಒಂದು ಪ್ರಕಟಣೆ ಯಾವುದೆ ಕಾರಣಕ್ಕೂ ಮೂರು ಪುಟಕ್ಕೆ ಕಡ್ಡಾಯ ಸೀಮಿತ – ೯೦೦ ಪದಗಳು ಮಾತ್ರ
೪. ಭಾವಚಿತ್ರ ಒಂದಕ್ಕೆ ರೂಪಾಯಿ ೧೦೦/- ರಂತೆ ಮಿತಿಯಿಲ್ಲದ ಅವಕಾಶ
೫. ಕನಿಷ್ಠ ಶುಲ್ಕದೊಂದಿಗೆ ವರದಿ ಬದಲಾವಣೆಗೆ ಅವಕಾಶ
೬. ವರದಿ ವೆಬ್ಗೆ ಅಪ್ಲೋಡ್ ಮಾಡುವ ರೀತಿಯಲ್ಲಿ ಮಾತ್ರ ಕಳುಹಿಸಿ
೭. ಮೂಲ ದೇವರಾದನೆಗೆ ಮಹತ್ವ ಕೊಟ್ಟ ಉಲ್ಲೇಖವಿರಲಿ
೮ . ನಿಮ್ಮ ಅನುಕೂಲಕ್ಕೆ ತಕ್ಕಂತೆ ಅನ್ಯರಿಗೆ ಆದರ್ಶವಾಗುವಂತೆ ಸ್ಪಂದಿಸಬೇಕಾಗಿ ಕೋರಿಕೆ
೯ . ಉಚಿತ ಸೌಲಭ್ಯದ ಅವಧಿ ಮೀರಿದ ಮೇಲೆ ರೂಪಾಯಿ ೧೦೦೦/- ಶುಲ್ಕವಿರುತ್ತದೆ
೧೦. ಉಚಿತ ಸೌಲಭ್ಯಕ್ಕೆ ಏಳು ದಿನಗಳ ಮಿತಿ ಈ ದಿನ ಸೇರಿ.
೧೧. ದೇವಾಲಯದಲ್ಲಿರುವ ವ್ಯವಸ್ಥೆ ಬಗ್ಗೆ ತಿಲಿಸಿ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?