ಕಣ್ಣಿಗೆ ಕಾಣುವ ದೇವರು ಅರಸ ಅಂದರೆ ಆ ದೇಶದ ದೊರೆ – ನಮ್ಮ ದೇಶದ ಮಟ್ಟಿಗೆ ಹೇಳುವುದಾದರೆ – ಪ್ರದಾನ ಮಂತ್ರಿ ನರೇಂದ್ರ ಮೋದಿ. ಅವರು ಹೇಳಿದ ಮಾತನ್ನು, ತೆಗೆದುಕೊಂಡ ನಿರ್ಧಾರವನ್ನು ಪಾಲಿಸುವುದು ಈ ದೇಶದ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ. ರಾಕ್ಷಸರ ಆಡಳಿತ, ಮಾನವರ ಆಡಳಿತ , ದೇವಮಾನವರ ಆಡಳಿತ, ಇವುಗಳ ಪೈಕಿ ದೇವಮಾನವರ ಆಡಳಿತ ನಮ್ಮ ದೇಶಕ್ಕೆ ಸಿಕ್ಕಿರುವುದು ದೇವರ ಅತಿ ದೊಡ್ಡ ವರ. ಮಾನವರಲ್ಲಿ ಬೆಳಕಿನತ್ತ ಹೋಗುವವರು ಮತ್ತು ಕತ್ತಲೆಯತ್ತ ಹೋಗುವವರೆಂಬ ಎರಡೆ ಜಾತಿ. ಕತ್ತಲೆಯತ್ತ ಹೋಗುವವರಿಗೆ ಬೆಳಕಿನ ಅರಿವು ಇರುವುದಿಲ್ಲ, ಅವರು ಕತ್ತಲೆಯೆ ಬೆಳಕೆಂಬ ಭ್ರಮೆ ಆವರಿಸಿ ಮೃತ್ಯು ಕೂಪಕ್ಕೆ ಹೋಗುವುದು ಮಾತ್ರವಲ್ಲದೆ ಅನ್ಯರನ್ನು ಮೃತ್ಯು ಕೂಪಕ್ಕೆ ತಳ್ಳುವುದರಲ್ಲಿ ಮಗ್ನರಾಗಿರುತಾರೆ. ದೇವರು ನಮ್ಮ ದೇಶಕ್ಕೆ ಉತ್ತಮ ಪ್ರಧಾನಿಯ ವರ ಕೊಟ್ಟು – ಜಾಗತಿಕ ಮಟ್ಟದಲ್ಲಿ ಒಕ್ಕೊರಲಿನ ಕೂಗು – ನಮಗೂ ಇಂತಹ ಪ್ರಧಾನಿ ಬೇಕಿತ್ತು – ಎಂಬ ಜಾಗತಿಕ ಮನ್ನಣೆ ಪಡೆದ ವ್ಯಕ್ತಿಯ ಮಾತಿಗೆ – ತನು ಮನ ಧನದ ಪೂರ್ಣಾಹುತಿ – ದೇಶದ ಪ್ರಜೆಗಳು ಮಾಡುವ ಅಳಿಲ ಸೇವೆ – ಎಲ್ಲರು ಒಟ್ಟಾಗಿ , ಒಂದೇ ಮನಸ್ಸಿನಿಂದ – ಬದುಕಿನ ದೀಪಾವಳಿ – ಬದುಕಿನ ಬೆಳಕಿನ ದಾರಿ ದೀಪ ಬೆಳಗಿಸೋಣ.ಅಂದು ದೇಶದ ಜನರನ್ನು ಒಂದು ಮಾಡಲು ಪ್ರಾರಂಭ ಮಾಡಿದ ಗಣೇಶೋತ್ಸವ ಇಂದು ನಾವು ಭಾರತೀಯರೆಲ್ಲ ಒಂದಾಗಿ ಆಚರಿಸುತ ನಾಡ ಹಬ್ಬವಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ. ಪ್ರಸ್ತುತ ನಾವು ಹಚ್ಚುವ ಈ ದೀಪ ಮನದ ಅಜ್ಞಾನದ ಕತ್ತಲೆಯನ್ನು
ದೂರ ಮಾಡಿ – ಸ್ವಚ್ಛ ಮನಸು – ಸ್ವಚ್ಛ ಪ್ರಕೃತಿ – ರೋಗ ಮುಕ್ತ ಸಮಾಜಕ್ಕೆ ಪ್ರರಣೆಯಾಗಲಿ.
ಸುಮಾರು ಐದು ದಶಕಗಳ ಹಿಂದೆ ಇಂಗ್ಲೆಂಡಿನಿಂದ ಭಾರತಕ್ಕೆ ಪಾದಾರ್ಪಣೆ ಮಾಡಿದ ಟ್ರಾನ್ಸಿಡೆಂಟಲ್ ಮೆಡಿಟೇಶನ್- ಇದರ ಮರ್ಮವನ್ನು ಜಗತ್ತಿಗೆ ಸಾರಿತ್ತು. ಕತ್ತಲೆ ಕೊನೆಯಲ್ಲಿ ಕುಳಿತು ಒಂದು ದೀಪ ಉರಿಸಿ , ಅವರು ತಿಳಿಸಿರುವ ಒಂದು ಪದದ ಮಂತ್ರವನ್ನು, ದೀಪವನ್ನು ನಿರಂತರ ನೋಡುತ್ತಾ ಪಠಣ ಹತ್ತು ನಿಮಿಷದಿಂದ ಮೂವತ್ತು ನಿಮಿಶದವರೆಗೆ ಮಾಡಿದಾಗ ಮನಸು ನಿರಾಳವಾಗಿ, ನಿದ್ದೆ ಮಾಡಿ ಎದ್ದ ಅನುಭವ ,ಏಕಾಗ್ರತೆಗೆ ಪೂರಕ ಎನ್ನುವ ಅವರ ಅಂದಿನ ದೃಷ್ಟಿಕೋನ – ಮಂತ್ರ ಪಠಣ ಮತ್ತು ಭಜನೆ ಮಾಡುವ ಒಳಮರ್ಮದ ಅರಿವು ಅಡಕವಾಗಿತು.
ಪ್ರಜಾಪ್ರಭುತ್ವದ ಮೂಲ ಒಳ್ಳೆಯ ಪ್ರಗತಿಪರ ಚಿಂತನೆಗೆ ಮಾತ್ರ ಅನಿಸಿಕೆಗಳನ್ನು ವ್ಯಕ್ತಪಡಿಸಲು ಪ್ರಜೆಗಳಿಗೆ ಕೊಟ್ಟಿರುವ ಸ್ವತಂತ್ರ ಹೊರತು ಬಾಯಿಗೆ ಬಂದದನ್ನು ಎಲ್ಲ ಉಗುಳುವ ತೊಟ್ಟಿ ಅಲ್ಲ, ಉಗುಳಿದ್ದನ್ನೆಲ್ಲ ಪ್ರಸಾರ ಮಾಡುವ ಮಾಧ್ಯಮದ ಪ್ರವೃತಿ ಕೂಡ ಅಲ್ಲ , ಉಗುಳಿದ್ದನ್ನೆಲ್ಲ ಬರೆಯುವ ಮಾಧ್ಯಮದ ದೃಷ್ಟಿಕೋನ ಅವರ ಅವನತಿಗೆ ಮೂಲವಾಗಿ, ವಿದೇಶಿ ಮಾಧ್ಯಮ ಕೆಟ್ಟ ದೃಷ್ಟಿಯಿಂದ ನೋಡುವುದನ್ನು ಬದಲಿಸುವ ಗುರುತರ ಜವಾಬ್ದಾರಿ ನಮ್ಮ ಮಾಧ್ಯಮದ ಮೇಲಿದೆ. ಅಂದು ನಾರದರಿಂದ ಪ್ರಾರಂಭಗೊಂಡು ಬೆಳೆದು ನಿಂತಿರುವ ಮಾಧ್ಯಮ – ಪ್ರಜಾಪ್ರಭುತ್ವದ ನಾಲ್ಕನೆ ಕಂಬ ಎಂಬ ಮಾನ್ಯತೆ ಪಡೆದು – ಜನ ಮನಕ್ಕೆ ಅತಿ ನಿಕಟವಾಗಿರುವ ಅಭಿವೃದ್ಧಿಯ ಕೊಂಡಿ – ತನ್ನ ತೋಳು ಬಲವನ್ನು ಪ್ರದರ್ಶಿಸುವ ಅನಿವಾರ್ಯತೆ ಇದೆ. ದೇಶದ ಕಾನೂನು ಅದಕ್ಕೂ ಮಿಗಿಲಾಗಿ ಪ್ರಜಾಪ್ರಭುತ್ವ ದೇಶದ ಕಾನೂನು ಅಂದರೆ ನಾವು ನಮಗೋಸ್ಕರ ಮಾಡಿದ ಕಾನೂನು – ಪಾಲಿಸಲು ಅಸಾಧ್ಯವಾದರೆ ಕಾನೂನು ರದ್ದುಗೊಳಿಸಿ , ಇಲ್ಲವಾದರೆ ಕಾನೂನು ಪಾಲಿಸಿ – ಪುಸ್ತಕದ ಬದನೆ ಕಾಯಿ ನಮಗೂ ಬೇಡ ನಿಮಗೂ ಬೇಡ – ಯಾರು ಪಾಲನೆ ಮಡುವುದಿಲ್ಲವೊ, ಅವನನ್ನು ಜೈಲಿನಲ್ಲಿಡಿ ಅಥವಾ ಪರಲೋಕಕ್ಕೆ ಕಳುಹಿಸಿ.ದನದ ಕೊಟ್ಟಿಗೆಯಲ್ಲಿ ಹುಲಿಯನ್ನು ಕುಡಿ ಹಾಕಿದ ಬದುಕು ಯಾರಿಗೂ ಬೇಡ. ಮಾಧ್ಯಮ ಜಾಗತಿಕ ಮಟ್ಟಕ್ಕೆ ಬೆಳೆದಾಗ ನಮ್ಮ ಬದುಕು ಸ್ವರ್ಗ
ತನ್ನ ಖಂಬಾತ ಏರುತಿಹನು
ಅನ್ಯ ಖಂಬಾತ ಇಳಿಯುತಿಹನು
ನಿನ್ನ(ದೇವರ) ಖಂಬಾತ ಹಾರುತಿಹನು …………ಅವ್ಯಕ್ತ ವಚನ