ಗೇರು ಪ್ರಮುಖ ಕೃಷಿಕನ ವಾಣಿಜ್ಯ ಬೆಳೆ. ಇದರ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಕೃಷಿಕರು ಹೊರಲಾರದ ಹೊರೆಯನ್ನು ಹೊತ್ತು ನಿತ್ಯ ಬದುಕನ್ನು ತಳ್ಳುತಿರುವ ನಮ್ಮ ಕೃಷಿಕ ಬಂದುಗಳಿಗೆ ನಮ್ಮ ಗಮನಕ್ಕೆ ಬಂದಿರುವ ಮಾಹಿತಿಯನ್ನು ತಿಳಿಸುತ್ತಾ – ಮುಂದಕ್ಕೆ ಈ ನಿಟ್ಟಿನಲ್ಲಿ ಹೆಚ್ಚಿನ ಮಾಹಿತಿಯ ಲೇಖನಗಳು ಬಂದಲ್ಲಿ ಪ್ರಕಟಿಸಿ ಸಹಕರಿಸುವ ಭರವಸೆಯೊಂದಿಗೆ ಸಂಕ್ಷಿಪ್ತ ಮಾಹಿತಿ ಕೆಳಗಿನಂತಿವೆ.
ಮುಂಗಾರು ಮಳೆ ಬೇಗನೆ ಬೀಳುವ ಪ್ರದೇಶದಲ್ಲಿ – ಬೇಗನೆ ಹೂ ಬಿಟ್ಟು ಕಾಯಿಯಾಗುವ ಗೇರು ಗಿಡಗಳ ಆಯ್ಕೆ ಸೂಕ್ತ
೨ ೨ ೨ ಅಡಿ ಆಳ ಎತ್ತರ ಅಗಲದ ಗುಂಡಿ ತೆಗೆದು ಪೂರ್ಣ ಮುಚ್ಚಿ ಕಷಿ ಗೇರು ಗಿಡಗಳ ನಾಟಿ ಜೂನ್ ಜೂಲೈ ತಿಂಗಳಲ್ಲಿ
ಅತಿ ಸಾಂದ್ರ ಪದ್ದತಿಯಲ್ಲಿ ಹೆಚ್ಚಿನ ಇಳುವರಿ ಸಾಧ್ಯತೆ – ಅದಕ್ಕಾಗಿ ೧೫ ರಿಂದ ೨೦ ಅಡಿ ದೂರಗಳಲ್ಲಿ ಗಿಡಗಳ ನಾಟಿ
ಪ್ರಸ್ತುತ ಬಿಡುಗಡೆ ತಳಿ ೮ ೮ ಅಡಿಗಳ ದೂರಗಳಲ್ಲಿ ನಾಟಿಗೆ ಸೂಕ್ತವೆಂಬ ಮಾಹಿತಿ ಇಲಾಖೆಯಿಂದ
ಕೋಳಿ ಹಿಕ್ಕೆ (ಬಳ್ಳಾರಿ ) ಗೇರು ಕೃಷಿಗೆ ಅತ್ಯಂತ ಸೂಕ್ತವೆಂಬುದು ಗೇರು ಕೃಷಿ ಸಾಧಕರ ಅನುಭವ
ಪ್ರಥಮ ವರುಷ ಒಂದು – ದ್ವಿತೀಯ ವರುಷ ಎರಡು – ೩ನೆ ವರುಷ ೩ ಕಿಲೋ ನಂತರ ಸುಮಾರು ೫ ಕಿಲೋ ಕೋಳಿ ಹಿಕ್ಕೆ ಹಾಕಿದರೆ ಸಾಕಾಗಬಹುದು – ಭೂಮಿಯ ಫಲವತ್ತತೆ ನೋಡಿಕೊಂಡು ಗೊಬ್ಬರ ಬಳಕೆ ಸೂಕ್ತ
ಕಷಿ ಕಟ್ಟಿದ ಕೆಳಗಡೆ ಬರುವ ಚಿಗುರು ತೆಗೆಯುತಿರಬೇಕು
ರಾಸಾಯನಿಕ ಗೊಬ್ಬರ ಬಳಸಿ ಸೋತ ಕೃಷಿಕರು ಕೋಳಿ ಹಿಕ್ಕೆ ಬಳಸಿ ಗೇರು ಕೃಷಿಯಲ್ಲಿ ಗೆದ್ದವರಿದ್ದಾರೆ
ಗೇರು ಗಿಡ ಹೊರತು ಪಡಿಸಿ ಯಾವುದೇ ಗಿಡ ಮರಗಳು ಗೇರು ತೋಟದಲ್ಲಿ ಇರದಂತೆ ನೋಡಿಕೊಳ್ಳಬೇಕು
ಗೇರು ಕೃಷಿಯೊಂದಿಗೆ ಗಿಡ ಬೆಳೆದಾಗ ಕರಿಮೆಣಸು ಬಳ್ಳಿ ನಾಟಿಮಾಡಿ ಮಿಶ್ರ ಬೆಳೆಗೆ ಅವಕಾಶ ಇದೆ.
ಗೇರು ಬೆಳೆಗೆ ನೀರಾವರಿ ಸೌಲಭ್ಯ ಕೊಟ್ಟಲ್ಲಿ ೪೦ ಪ್ರತಿಶತ ಹೆಚ್ಚಿನ ಇಳುವರಿ ಸಾಧ್ಯತೆ
ಸುಮಾರು ಪ್ರತಿ ಎಕ್ರೆಗೆ ೧೦೦೦ ಕಿಲೊಗಿಂತ ಹೆಚ್ಚಿನ ಇಳುವರಿ ಸಾಧಕರಿದ್ದಾರೆ
ಗೇರು ಕೃಷಿಯಲ್ಲಿ ಕ್ರಿಮಿನಾಶಕ ಸಿಂಪರಣೆ ಫಲ ಶೂನ್ಯವೆಂಬುದು ಕೃಷಿಕರ ಬದುಕಿನ ಅನುಭವ
ಗೇರು ಹಣ್ಣಿನ ಪೇಯ – ಗೇರು ಹಣ್ಣಿನಿಂದ ತಯಾರಿಸುವ ಶರಾಬು – ಆರೋಗ್ಯವರ್ಧಕ ಮತ್ತು ನಾಟಿ ಔಷದಿ – ಆಡಳಿತ ಈ ನಿಟ್ಟಿನಲ್ಲಿ ಸೂಕ್ತ ನಿರ್ಧಾರ ತೆಗದುಕೊಂಡಲ್ಲಿ – ಗೇರು ಕೃಷಿ ಇನ್ನಷ್ಟು ಲಾಭದಾಯಕ
ಗೇರು ಬೀಜದಿಂದ ಗೇರು ತೆಗೆಯುವ ಮನೆ ಮನೆ ಕಾರ್ಕಾನೆಯತ್ತ ದಿಟ್ಟ ಹೆಜ್ಜೆ – ಕೃಷಿಕನಿಗೆ ಪೂರಕ
ಕೃಷಿಕ ತನ್ನ ವಸ್ತುವಿಗೆ ದರ ನಿಗದಿಪಡಿಸುವ ಸುದಿನ ಬಂದಾಗ ಮಾತ್ರ – ಕೃಷಿಕ ಜೀವಿಸಬಲ್ಲ
ಅಡಿಕೆ ತೋಟದ ಬದಿಗಳಲ್ಲಿ, ಇನ್ನಿತರ ಖಾಲಿ ಸ್ಥಳಗಳಲ್ಲಿ ಗೇರು ಸೂಕ್ತ
ಗೇರು ಮರಕ್ಕೆ ಬಾಳಿಕೆ ಕಡಿಮೆ ಎನ್ನುವ ಅಜ್ಜ ನಟ್ಟ ಆಲದ ಮರದ ಕೆಳಗೆ ಜೀವಿಸುವುದನ್ನು ಬಿಟ್ಟು ಬಿಡೋಣ
ಕೃಷಿ ಪ್ರಯೋಗಾಲಯಕ್ಕೆ ಕೊಲ್ಲಿ ಇಟ್ಟು
ಬಯಲು ಪ್ರಯೋಗಾಲಯಕ್ಕೆ ಹೆಜ್ಜೆ ಇಡುತಿರೆ
ಕೃಷಿ ವಿಜ್ಞಾನಿ ಬದುಕು ಸಾರ್ಥಕವೆಂದ ……………..ಅವ್ಯಕ್ತ