ಮಾದರಿ ಶಾಲೆ ಮಾದರಿ ವ್ಯಕ್ತಿಗಳಿಂದ ಮಾತ್ರ ಸಾಧ್ಯ
ಮಾದರಿ ವ್ಯಕ್ತಿ – ಮಾನವರಲ್ಲಿ , ಪ್ರಾಣಿಗಳಲ್ಲಿ , ಜೀವ ಜಂತುಗಳಲ್ಲಿ , ಗಿಡಮರಗಳಲ್ಲಿ ದೇವರನ್ನು ಕಾಣುವ ಸುಸಂಕೃತ ವ್ಯಕ್ತಿ – ದೇವಮಾನವ ಬದುಕು ಸಾಗಿಸುತಿರುತಾನೆ. ತಾನು ಮಾಡಿದ ತಪ್ಪುಗಳನ್ನು ತಾನೇ ಒಪ್ಪಿಕೊಂಡು ಸೂಕ್ತ ಶಿಕ್ಷೆಗೆ ಶರಣಾಗುತಾನೆ. ಅನ್ಯರಿಂದ ಯಾ ತನ್ನಿಂದ – ಬಾಯಿಮಾತಿನಲ್ಲಿ ಯಾ ಇನ್ನಿತರ ಮಾದ್ಯಮದಲ್ಲಿ ಬರುವ ತ್ಯಾಜ್ಯಗಳನ್ನು ಮೆಲುಕು ಹಾಕುವುದರಿಂದ ಬಲು ದೂರವಿರುತಾನೆ .
ಇಂತಹ ಉನ್ನತ ವ್ಯಕ್ತಿಗಳ ಸಮೂಹ – ಅಧ್ಯಾಪಕರು , ಆಡಳಿತ ಮಂಡಳಿ ಇತ್ಯಾದಿಗಳು ಕೈಜೋಡಿಸಿದಾಗ ಮಾದರಿ ಶಾಲೆ ಕನಸು ನನಸಾಗಬಹುದು
ಲಾರ್ಡ್ ಮೆಕಾಲೆ ವರದಿಯ ಫಲವಾಗಿ ಜನನ ತಾಳಿದ ಪ್ರಸ್ತುತ ವ್ಯವಸ್ಥೆಯ ಅರಿತು ಮುಂದೆ ಸಾಗೋಣ
ಬದುಕುವ ಕಲೆಯನ್ನು ಕಲಿಸುವ ವ್ಯವಸ್ಥೆಯೇ ಶಾಲೆಗಳ ಉದ್ದೇಶ ಗುರಿಯಾಗಲಿ
ಶಾಲೆಯ ಬಾಹ್ಯ ಆಡಂಬರದ ಜೊತೆಗೆ ಮಕ್ಕಳ ಆಂತರಿಕ ಆಡಂಬರದ ಉತ್ತುಂಗ ಶಿಖರಕ್ಕೆ ಏರುವಂತಾಗಲಿ
ಕಲಿಕೆ ಮತ್ತು ಬದುಕು ಜೊತೆ ಜೊತೆ ಸಾಗಲಿ
ವಿಪುಲ ಅವಕಾಶವಿರುವ ಕೃಷಿಯತ್ತ ಹೆಚ್ಚಿನ ಮಹತ್ವ ಕೊಡೋಣ
ಒಬ್ಬ ವ್ಯಕ್ತಿಯ ವರದಿಯಿಂದ ಆಗಿರುವ ತಪ್ಪಿಗೆ ನಾವೆಲ್ಲ ಸೇರಿ ಸರಿಪಡಿಸೋಣ
ತಪ್ಪಿಗೆ 100% ಶಿಕ್ಷೆ ಕ್ಲಪ್ತ ಸಮಯದಲ್ಲಿ ಆದಾಗ ಮಾತ್ರ ಬಾಳು ಇಲ್ಲದಿದ್ದರೆ ಈ ಗೋಳು ಸದಾ ಮುಂದುವರಿಯುವುದು
ಕಾಯಿಲೆಗೆ ಮದ್ದು , ವಾಹನಕ್ಕೆ ಸಂಚಾರ ನಿಯಮ , ಸಾಮಾಜಿಕ ಬದುಕಿಗೆ ಕಾನೂನು ಪಾಲನೆ ಅನಿವಾರ್ಯ