ಪ್ರಜಾಪ್ರಭುತ್ವ ದೇಶಗಳಲ್ಲಿ ರಾಜಕಾರಿಣಿಗಳ ಸ್ವಾರ್ಥ – ವ್ಯವಸ್ಥೆಯನ್ನು ಬುಡಮೇಲು ಮಾಡಿ ಮುಂದೆ ಮುಂದೆ ಸಾಗಿದ ಫಲವಾಗಿ ದೇಶದ ಸಂಪತ್ತನ್ನು ವಿಭಿನ್ನ ನೆಲೆಯಲ್ಲಿ ದರೋಡೆ ಮಾಡುವ ಘನ ಕಾರ್ಯದಲ್ಲಿ ತೊಡಗಿರುವುದು – ಜನಸಾಮಾನ್ಯರಿಗೆ ಸಿಗಬೇಕಾದ ಸವಲತ್ತುಗಳು ಗಗನ ಕುಸುಮವಾಗಿ – ಬದುಕು ಸುಖ ಶಾಂತಿ ನೆಮ್ಮದಿಯ ಸ್ವರ್ಗವಾಗುವ ಬದಲಾಗಿ ನಿತ್ಯ ನರಕವಾಗುತಿದೆ. ಇದನ್ನು ಹತೋಟಿಗೆ ತರಲು ಸ್ವಯಂ ರಾಜಕಾರಿಣಿಗಳೇ ನಿಯಂತ್ರಣ ಮಾಡಿಕೊಳ್ಳುವ ಕಟ್ಟು ನಿಟ್ಟಿನ ಕೋಟೆಯ ಅವಶ್ಯಕತೆಯಿದ್ದು – ಪ್ರತಿ ಊರಿನಲ್ಲಿ ಗ್ರಾಮಪಂಚ್ಯತ್ ವ್ಯಾಪ್ತಿಯಿಂದ ಮೊದಲುಗೊಂಡು ಹಂತ ಹಂತವಾಗಿ ದೇಶ ಮಟ್ಟಕ್ಕೆ ಹೆಮ್ಮರವಾಗಿ ಬೆಳೆದು ನಿಂತಾಗ ಜನಸಾಮಾನ್ಯರ ಬಾಳಿನ ಕತ್ತಲು ಮಾಯವಾಗುವ ಹೆಬ್ಬಯಕೆ ನಮ್ಮದಾಗಿದೆ. ಜನಮನದ ಮನದಾಳದ ಮಿಡಿತ ಕೆಳಗಿನಂತಿದೆ
೧. ದೇಶಕ್ಕೆ ಬಂದ ಸ್ವಾತಂತ್ರ್ಯ ಪ್ರತಿ ಮಾನವ ಬದುಕಿಗೂ ಬರಬೇಕು
೨. ಪಕ್ಷದ ನಾಮ ಸ್ಮರಣೆ ಮಾಡುವುದು ಓಟಿನ ಸಮಯಕ್ಕೆ ಮಾತ್ರ ಸೀಮಿತವಾಗಿದ್ದರೆ ಒಳಿತು
೩. ಉದ್ಘಾಟನೆ ……. ಇತ್ಯಾದಿಗಳು ಸ್ಥಳೀಯ ಸಾಮಾನ್ಯ ವ್ಯಕ್ತಿಗಳಿಂದ ಆದರೆ ಅತ್ಯಂತ ಶ್ರೇಷ್ಠ
೪. ಆಡಳಿತದಲ್ಲಿ ರಾಜಕಾರಿಣಿಗಳ ಹಸ್ತಕ್ಷೇಪಕ್ಕೆ ಇತಿಶ್ರೀ ಹಾಡಬೇಕು
೫. ನ್ಯಾಯಯುತ ಬಾಳುವೆಗೆ ನೆಮ್ಮದಿ ಬದುಕು ನ್ಯಾಯ ತಪ್ಪಿ ಬಾಳುವವನಿಗೆ ಮಾರಕ ಬದುಕು ಸಿಗುವಂತಾಗಬೇಕು – ಈಗ ತದ್ವಿರುದ್ದವಾಗಿರುತದೆ
೬. ದೇಶದ ಕಾನೂನು ಪಾಲಕರು ಪ್ರತಿ ಪ್ರಜೆಗಳು – ಇದು ಪ್ರಜಾಪ್ರತಿನಿದಿಗಳಿಂದಲೇ ಪಾಲನೆ ಮಾಡದಿರುವುದು ದುರದೃಷ್ಟಕರ
೭. ಪ್ರಪಂಚದ ಶ್ರೀಮಂತ ಪ್ರಜಾಪ್ರಭುತ್ವ ದೇಶದ ಪ್ರಧಾನಿ ತನ್ನ ತಪ್ಪನ್ನು ಒಪ್ಪಿಕೊಂಡಿರುವುದು – ನಮಗೆ ಮುಂದಕ್ಕೆ ನಾಂದಿಯಾಗಬೇಕು
೮. ಪ್ರಜಾಪ್ರಭುತ್ವ ದೇಶದಲ್ಲಿ ತಪ್ಪು ಮಾಡಿದವನ ಪರವಾಗಿ ಯಾರು ವ್ಯವಹರಿಸದಿರುವ ಸಂಪ್ರದಾಯ ನಮಗೆ ದಾರಿದೀಪವಾಗಬೇಕು
೯. ನ್ಯಾಯ ನ್ಯಾಯಾಲಯದಿಂದ ಗರಿಷ್ಠ ಒಂದು ವರುಷದಲ್ಲಿ ಸಿಗುವಂತೆ ಮಾಡುವ ಮೂಲಸೌಕರ್ಯ ಒದಗಿಸಬೇಕು
೧೦. ನ್ಯಾಯಾಂಗವನ್ನು ಸ್ವಾರ್ಥಕ್ಕೆ ಬಳಸುವ ಬದಲಾಗಿ ತ್ಯಾಗಕ್ಕೆ ಬಳಸುವ ಸಂಕಲ್ಪ ಮಾಡಬೇಕು.
ಒಕ್ಕೂಟ ಪದ್ದತಿಯನ್ನು ಬಳಸಿಕೊಂಡು ಹಲವಾರು ಕ್ಷೇತ್ರಗಳು ಗಣನೀಯ ಪ್ರಗತಿಹೊಂದಿರುವುದನ್ನು ಮನಗಂಡು – ರಾಜಕಾರಿಣಿಗಳ ಒಕ್ಕೂಟ ಸ್ಥಾಪನೆಯಾಗಿ ನಮ್ಮ ದೇಶದ ಅಭಿವೃದಿ ವೇಗ ಇಮ್ಮಡಿಯಾಗಲಿ.