ನಿರ್ದಿಷ್ಟ ಸಮಯಕ್ಕೆ ಮಾಡದ ಪೂಜೆ ದೇವರಿಗೆ ಬೇಕೇ? Does God require untimely worship?

ಶೇರ್ ಮಾಡಿ

ಭಾವ ಪೂಜೆಯನ್ನು ಮರೆತು ದ್ರವ್ಯ( ವಿವಿಧ ವಸ್ತುಗಳಿಂದ )ಪೂಜೆಗೆ ತೊಡಗಿರುವ ಪ್ರಸ್ತುತ ಸಮಾಜ ಒಂದು ಹೆಜ್ಜೆ ಮುಂದೆ ಹೋಗಿ – ನಾನು ದಿನದ ಯಾವ ಸಮಯದಲ್ಲಾದರೂ ಬಿಡುವಾದಾಗ ಬಂದು ಪೂಜೆ ಮಾಡುತೇನೆ – ಭಿಕ್ಸುಕನಂತೆ ನೀನು ನನಗಾಗಿ ಕಾದು ಕುಳಿತು ಸ್ವೀಕಾರ ಮಾಡು – ನನಗೆ ನಿರ್ದಿಷ್ಟ ಸಮಯದಲ್ಲಿ ಪೂಜೆ ಮಾಡಲು ಸಾಧ್ಯವಿಲ್ಲ – ಆಡಳಿತದವರು ಬೇಕಾದರೆ ಬೇರೆ ಜನ ಮಾಡಲಿ ಎಂಬ ಮನೋಸ್ಥಿತಿ ಪೂಜೆ ಮಾಡುವವರಲ್ಲಿ – ಸಂದಿಗ್ದತೆಯಲ್ಲಿ ಸಿಕ್ಕಿರುವ ಆಡಳಿತ ಅನ್ಯ ದಾರಿ ಕಾಣದೆ ಹೊಂದಾಣಿಕೆ ಮಾಡಿ ಒಪ್ಪಿಗೆ ಕೊಟ್ಟಿದ್ದು – ದೇವರು ದೇವಾಲಯ ಪೂಜೆ ಇತ್ಯಾದಿಗಳನ್ನು – ಬದುಕಿನ ಉತ್ತುಂಗ ಶಿಖರದಿಂದ ಕೆಳಮುಖವಾಗಿ ತುಳಿಯುತಿದ್ದೇವೆ.
ವ್ಯಕ್ತಿಯೊಬ್ಬ ತನಗೆ ಸಮಯ ಸಿಕ್ಕಾಗ ಬಂದು ವ್ಯಾಪಾರ ಉದ್ದಿಮೆ ಮಾಡುತೇನೆ ಎಂದು ನಿರ್ಧರಿಸಿ – ಮುನ್ನಡೆದರೆ ಗ್ರಾಕರಿಲ್ಲದೆ ಕೆಲವೇ ದಿನಗಳಲ್ಲಿ ಇತಿಶ್ರೀ ಮಾಡುವ ರೀತಿಯಲ್ಲಿ ಭಕ್ತಾದಿಗಳ ಕೊರತೆಯಾಗಿ – ದೇವಾಲಯ ಆದಾಯದ ಕೊರತೆ ಗಗನಕ್ಕೇರಿ – ಶಾಶ್ವತವಾಗಿ ಮುಚಲ್ಪಟ್ಟರೆ – ಇದಕ್ಕೆ ಹೊಣೆಗಾರರ ಪಟ್ಟಿಯಲ್ಲಿ ಯಾರು ಯಾರು ಇರಬಹುದು ಎಂಬುದರತ್ತ ಅವಲೋಕಿಸೋಣ.
ಆಡಳಿತ ಮತ್ತು ಪೂಜೆ ಮಾಡುವವರು ಜವಾಬ್ದಾರರಾಗಿದ್ದು – ತಮ್ಮ ತಪ್ಪನ್ನು ಅರಿತು ಕ್ರಮಬದ್ಧವಾಗಿ ಸಮಯಕ್ಕೆ ಸರಿಯಾಗಿ ದೇವಾಲಯಗಳಲ್ಲಿ ಪೂಜೆ ಮಾಡಿದಲ್ಲಿ ದಿನೇ ದಿನೇ ಕ್ಷೇತ್ರದ ಅಭಿವೃದ್ಧಿಯಾಗಿ – ಪೂಣ್ಯದ ಕೆಲಸ ಮಡಿದ ಫಲ ಸಿಗಬಹುದು – ತಪ್ಪಿ ನಡೆದಲ್ಲಿ ಪಾಪದ ಫಲ ಸಿಗುವ ಸಾಧ್ಯತೆ ಇರುವುದನನ್ನು ನಾವು ಅರಿತು ಬಾಳೋಣ.
ಆಡಳಿತ ಮಾಡುವವರ ಮುಂದೆ ಇರುವ ಪರಿಹಾರ ಮಾರ್ಗಗಳು
ನಿರ್ದಿಷ್ಟ ಜಾತಿ ಪಂಗಡದವರು ಮಾತ್ರ ಪೂಜೆ ಮಡುವ ಕಠಿಣ ನಿಯಮಗಳು ಈಗಾಗಲೇ ಬದಲಾಗಿದ್ದು – ಮುಂದಕ್ಕೆ ಎಲ್ಲಾ ಜಾತಿಯವರಿಗೂ ಪೂಜಾ ತರಬೇತಿ ಕೊಟ್ಟು ವಿಪುಲ ಪೂಜೆ ಮಾಡುವವರನ್ನು ತಯಾರುಮಾಡುವುದು
ಭಾವ ಪೂಜೆ ಹಿಂದೆ ಇರುವ ಅಪರಿಮಿತ ಶಕ್ತಿಯನ್ನು ಮನಗಂಡು – ಸ್ವ ಪರಿವರ್ತನೆ ಮಾಡುವತ್ತ ದಾಪುಗಾಲು ಹಾಕುವುದು
ದೇವಸ್ಥಾನ ವ್ಯಾಪ್ತಿಯಲ್ಲಿ ಕನಿಷ್ಠ ಏಳು ಭಜನಾ ಮಂಡಳಿಗಳನ್ನು ರಚಿಸಿ ದಿನಕ್ಕೆ ಒಂದರಿಂದ ಕನಿಷ್ಠ ಎರಡು ಗಂಟೆ ಭಜನಾ ಕಾರ್ಯಕ್ರಮ ನಡೆಸಿ – ಪೂಜಾ ಪದ್ದತಿಗೆ ಬದಲಿ ವ್ಯವಸ್ಥೆಯತ್ತ ಗಮನ ಹರಿಸುವುದು.
ದಿನಕ್ಕೊಮ್ಮೆ ದೇವಾಲಯ ಸ್ವಚ್ಛತೆ ಮಾತ್ರ ಮಾಡುವ – ಆಡು ಮಾತಿನಲ್ಲಿ ಕೇಳಿಬರುವ ಮೂಲ ಸಿದ್ದಂತದತ್ತ ಚಿಂತನ ಮಂಥನ ಅನುಷ್ಠಾನದತ್ತ ಗಮನ ಹರಿಸುವುದು
ಸೀಮಿತ ಜಾತಿಗಳಲ್ಲಿ ಕಟ್ಟು ನಿಟ್ಟಾಗಿ ಏಕ ಕಾಲಕ್ಕೆ ಜಾಗತಿನಾದ್ಯಂತ ಪೂಜೆ ಮಾಡುವ ಸಂಪ್ರದಾಯ – ಸಮಾಜದಲ್ಲಿರುವ ಸಕಲ ಜಾತಿಗಳಿಗೂ ಪಾಠ -ಪಾಲಿಸೋಣ
ಧಾರ್ಮಿಕ ಕ್ಷೇತ್ರಗಳು – ಒಂದು ಕಾಲದಲ್ಲಿ ಸೇವಾ ಕ್ಷೇತ್ರ – ಪ್ರಸ್ತುತ ವ್ಯಾಪಾರ ಕ್ಷೇತ್ರವಾಗಿ ಬದಲಾಗಿ – ದರೋಡೆ ಕ್ಷೇತ್ರದತ್ತ ದಾಪುಗಾಲು ಹಾಕುತ್ತಿದೆ ಎಂಬ ಜನಾಭಿಪ್ರಾಯ – ಮೂಲದಲ್ಲಿಯೇ ಕಿತ್ತು ಹಾಕುವ ಪ್ರತಿಜ್ಞೆ ನಾವು ಮಾಡೋಣ
ನಡೆದಾಡುವ ದೇವರು – ಪೂಜೆ ಮಾಡುವವರು – ಆಡಳಿತ ನಡೆಸುವವರು – ಆದಾಗ ಮಾತ್ರ ದೇವಾಲಯಗಳಿಗೆ ಅಂಟಿದ ಕಳಂಕ ಕಾಲಕ್ರಮೇಣ ದೂರವಾಗುವ ಹೆಬ್ಬಯಕೆ ಭಕ್ತರದ್ದು – ಸಾಕಾರಗೊಳಿಸೋಣ.
ಬಹು ಬೇಡಿಕೆ ವಸ್ತು – ಬೇಡಿಕೆ ಇಲ್ಲದ ವಸ್ತು ಆಗುವ ಸಾಧ್ಯತೆ ಇದೆ – ನಮಗೆಲ್ಲ ಅದರ ಅರಿವಿರಲಿ

See also  Suman

ಮನ ಮೈದಾನದಿ ದೇವಾಲಯ ಕಟ್ಟಿ
ಬುದ್ದಿಯ ಸುತ್ತು ಗೋಪುರ ಕಟ್ಟಿದಾತ
ನಡೆದಾಡುವ ದೇವಾಲಯದಿ ಇಹನು ……….ಅವ್ಯಕ್ತ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?