ಬರಹಗಾರರು – ನಮ್ಮ ಸಾಮಾಜಿಕ ಧಾರ್ಮಿಕ ಆರ್ಥಿಕ ಬದುಕಿನಲ್ಲಿ ಗುರುತರವಾದ ಸೇವೆ ಸಲ್ಲಿಸಿದ ವಲಯದಲ್ಲಿ ಅಗ್ರಗಣ್ಯರು. ಇವರ ಸೇವೆ ಮುಂದಿನ ಜನಾಂಗಕ್ಕೂ ಸಿಗುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲೆ ಇದೆ. ನಿತ್ಯ ಜೀವನದಲ್ಲಿ ವ್ಯವಹಾರ ಜ್ಞಾನದ ಅರಿವು ಯಾ ಕೊರತೆ ಇದ್ದಲ್ಲಿ ನಮ್ಮಲ್ಲಿರುವ ಸಂಪತ್ತನ್ನು ಸದ್ಬಳಕೆ ಮಾಡಿ – ಅದರ ಪ್ರಯೋಜನ ಬಹುಪಾಲು ಜನರಿಗೆ ಸಿಗುವಂತೆ ಮಾಡಲು ಕಷ್ಟ ಸಾದ್ಯ. ಈ ನಿಟ್ಟಿನಲ್ಲಿ ಬರಹಗಾರರ ಸಮಸ್ಯೆಗಳಿಗೆ ಬರಹಗಾರರ ಒಕ್ಕೂಟ ಆದರ ಕಂಬವಾಗಿ ನಿಂತು ಅವರ ಏಳಿಗೆಯೊಂದಿಗೆ ಸಮಾಜದ ಏಳಿಗೆಗೆ ಸಹಕಾರಿಯಾಗಲಿದೆ.
ಕೆಲವೊಂದು ಸೂತ್ರಗಳು
ಬರಹಗಾರರ ಒಕ್ಕೂಟದ ಸಹಕಾರದೊಂದಿಗೆ ಬರಹಗಾರರ ಬುಲೆಟಿನ್ ಪ್ರಾರಂಭದತ್ತ ದಿಟ್ಟ ನಿಲುವು
ಚುಟುಕು ಸಂಕ್ಷಿಪ್ತ ಲೇಖನಗಳತ್ತ ಒಲವು
ಕಾಲದ ವೇಗದೊಂದಿಗೆ ನಡಿಗೆ
ಬರಹಗಳನ್ನು ಒನ್ಲೈನಿಗೆ ಪರಿವರ್ತನೆ