ವಿದ್ಯಾರ್ಥಿಗಳಲ್ಲಿ ಆಂತರಿಕವಾಗಿ ಹುದಿಗಿರುವ ಪ್ರತಿಭೆಗಳಿಗೆ ಸೂಕ್ತ ಅವಕಾಶ ಕಲ್ಪಿಸಿ – ಆವಿಸ್ಕಾರಗಳಿಂದ ನಮ್ಮೊಂದಿಗೆ ಜೀವಕ್ಕೂ ಮಿಗಿಲಾಗಿ ಅವಲಂಬಿಸಿರುವ ಮೊಬೈಲ್ ಕಂಪ್ಯೂಟರ್ ಇತ್ಯಾದಿಗಳಲ್ಲಿ ಬೆಟ್ಟದಷ್ಟಿರುವ ಪ್ರಯೋಜನಗಳನ್ನು ಮಾನವ ಕುಲಕೋಟಿಗೆ ಉಣಬಡಿಸಲು ಈ ವೇದಿಕೆ ದೇವರು ನಮಗೆ ಕೊಟ್ಟ ವರ.ಒಂದು ಕಾಲದಲ್ಲಿ ಬಹುಪಾಲು ಆವಿಸ್ಕಾರಗಳು ವಿದ್ಯಾರ್ಥಿಗಳಿಂದಲೇ ಆಗಿದ್ದು ನಾವು ಇಂದು ಅವರ ಕೊಡುಗೆಯನ್ನು ಅವರಿಗೆ ಕೊಡುವಲ್ಲಿ ಹಿಂದೇಟು ಹಾಕುತಿದ್ದೇವೆ. ಸಮಯ ಕಾಲ ಸಂದರ್ಭಗಳೊಂದಿಗೆ ಬದುಕಬೇಕಾಗಿದ್ದ ವಿದ್ಯಾರ್ಥಿಗಳಿಂದು ನಾಲ್ಕು ಗೋಡೆಗಳ ಮದ್ಯೆ ಕೂಡು ಹಾಕಿ ಸ್ಟಾರ್ ಹೋಟೆಲ್ಗಳ ಸೌಲಭ್ಯ ಒದಗಿಸಿ ಮುಂದಕ್ಕೆ ಹೊರಗಿನ ಪ್ರಪಂಚದ ಜೀವನಕ್ಕೆ ದೂಡಿದರೆ ಯಾರಾದರೂ ನೆಮ್ಮದಿ ಬದುಕು ಸಾಗಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ನಾವು ಉತ್ತರ ಹುಡುಕುವ ಅನಿವಾರ್ಯತೆ ಇದೆ.
ನಾವು ಬದುಕಿನ ಹಾದಿಯಲ್ಲಿ ಮುನ್ನಡೆಯುವವರು ದಾರಿಯತ್ತ ಗಮನ ಹರಿಸಿದಾಗ – ಟಿ ವಿ ಪೇಪರ್ ಮಾಧ್ಯಮ , ಮೊಬೈಲ್ ——————- ಇತ್ಯಾದಿಗಳು ಬದುಕಿಗೆ ಪೂರಕವಾದುದನ್ನು ಮಾತ್ರ ಬಳಸುತಿದ್ದೇವೆಯೋ ? ಖಂಡಿತಾ ಇಲ್ಲ , ನಮಗೆ ಸಕಲ ವಿಷಯ ವಿಚಾರಗಳು ಮಾರಕವಾಗಿದ್ದು – ನಿತ್ಯ ನಿರಂತರ ಅವಲಂಬನೆ – ವಿಷ ಪೂರಿತ ಸಮಾಜಕ್ಕೆ ಕೊಡುಗೆ ನೀಡುತಿದ್ದೇವೆ . ಹಾಗಾದರೆ ನಮ್ಮ ದಾರಿ ವಿದ್ಯಾರ್ಥಿಗಳು ಅನುಕರಣೆ ಮಾಡುವುದು ತಪ್ಪೇ
ವಿದ್ಯಾರ್ಥಿಗಳನ್ನು ದೇವಾಲಯದತ್ತ ವಾರಕ್ಕೆ ಒಮ್ಮೆಯಾದರೂ ಭೇಟಿ ನೀಡುವ ಹವ್ಯಾಸ ಬೆಳೆಸಿ – ಬದುಕಿನಲ್ಲಿ ಅಳವಡಿಸಬೇಕಾದ ಮುತ್ತು ರತ್ನಗಳು
ತಾನು ಮಾಡಿದ ಮತ್ತು ತನ್ನಿಂದಾದ ತಪ್ಪುಗಳನ್ನು ಒಪ್ಪಿಕೊಳ್ಳುವುದು
ಪ್ರಕೃತಿ ಜೊತೆಗೆ ಬದುಕು – ಇದು ಸಕಲ ಜೀವರಾಶಿಗಳಿಗೆ ಮೀಸಲು – ನನಗೆ ಮೀಸಲೆಂಬ ತಪ್ಪನ್ನು ಅರಿತು ಬಾಳುವುದು
ಜಾತಿ ದೇವರಲ್ಲಿಗೆ ಹೋಗುವ ವಿಭಿನ್ನ ದಾರಿಗಳೆಂಬ ಸ್ಪಷ್ಟ ಜ್ಞಾನ
ಸೇವಾ ಬದುಕಿನತ್ತ ದಿಟ್ಟ ಹೆಜ್ಜೆ …………………….
ಮುಂದುವರಿಯುವುದು