ಜೀವರಾಶಿಗಳಲ್ಲಿ ಪ್ರಾಣಿ ವಲಯಗಳ ಪೈಕಿ ಗುರುತಿಸಲ್ಪಟ್ಟ ಮಾನವ ಪುರುಷ ಮತ್ತು ಮಹಿಳೆ ಎಂಬ ಎರಡು ಪ್ರಭೇದಗಳನ್ನು ಮಾಡಿ ವಂಶಾಭಿವೃದ್ದಿಗೆ ಅಂದು ದಾರಿ ಮಾಡಿಕೊಟ್ಟಿದ್ದು ಇಂದು ಬುದ್ದಿವಂತರು ನಾವು ಎನ್ನುವ ಹಣೆಪಟ್ಟಿ ಕಟ್ಟಿಕೊಂಡು ಜಾತಿ ಊರು ಪಕ್ಷ ವರ್ಣಭೇದ ….. ಇತ್ಯಾದಿ ಕುರುಕ್ಷೇತ್ರದ ಬಾಳಿಗೆ ಇತಿಶ್ರೀ ಹಾಡಿ – ಹುಟ್ಟು ಸಾವುಗಳ ಮದ್ಯೆ ಇರುವ ಅಲ್ಪ ಸಮಯವನ್ನು ಸುಖ ಶಾಂತಿ ನೆಮ್ಮದಿ ಬಾಳಿಗಾಗಿ ಪುಟ್ಟ ಪ್ರಯತ್ನ ಈ ವೇದಿಕೆಯಿಂದ.
ಪುರುಷ ಪ್ರದಾನ ಜಗದಲ್ಲಿರುವ ಪುರುಷರಿಗೆ ಕಿವಿ ಮಾತು –
ಸ್ವಾರ್ಥದ ರಾಜ್ಜದ ಬದಲು ತ್ಯಾಗದ ಸಾಮ್ರಾಜ್ಜಕ್ಕಾಗಿ ಪುರುಷರ ಸೇವಾ ಒಕ್ಕೂಟದತ್ತ ಗಮನ ಹರಿಸೋಣ
ಕಣ್ಣಿಗೆ ಕಾಣುವ ಚಿನ್ನದ ಅರಮನೆ ಕಾಣದ ಅವ್ಯಕ್ತ ಅರಮನೆಯ ಮುಂದೆ ತೃಣಕ್ಕೆ ಸಮಾನ – ಅರಿತು ಮುಂದೆ ಸಾಗೋಣ
ಜನನ ದೇವರಾಗಿ ದೇವರ ಕೊಡುಗೆ – ಬದುಕು ಮಾನವರಾಗಿ ದಾನವರಾಗಿ ನಮ್ಮ ಕೊಡುಗೆ – ಬದಲಾವಣೆ ಸಂಕಲ್ಪ ನಮಗಿರಲಿ
ಆಹಾರಕ್ಕಾಗಿ ನಾಯಿಗಳ ಜಗಳ – ಆಹಾರ ಸಿಕ್ಕಾಗ ಹಂಚಿ ತಿನ್ನುವ ಕಾಗೆ ಬದುಕು ನಮಗೆ ಆದರ್ಶ ಆದರೆ ಒಳಿತು
ಕೆಟ್ಟವರಿಗೆ ಒಂದೇ ದಾರಿ – ಕೆಟ್ಟವರಿಗೆ ಮತ್ತು ಒಳ್ಳೆಯವರಿಗೆ ಎರಡು ದಾರಿ – ಒಳ್ಳೆಯವರಿಗೆ ಮೂರೂ ದಾರಿ ಪಾಲಿಸೋಣ
ಅಧಿಕಾರಕ್ಕಾಗಿ ಕಿತ್ತಾಟದ ಬದಲು ಹಂಚಿಕೆ ಸೂತ್ರ ಯಾ ತ್ಯಾಗದ ಪಟ್ಟವನ್ನೇರಿ ಸಂತೃಪ್ತ ನೆಮ್ಮದಿ ಜೀವನಕ್ಕೆ ಅಡಿಪಾಯ ಹಾಕುವ
ಜೀವರಾಶಿಗಳಿಗೆ ಮೀಸಲಿಟ್ಟ ಜಗತ್ತಿನ ಮೇಲೆ ನಮ್ಮ ಅತಿಕ್ರಮಣಕ್ಕೆ ಅಂಕುಶವಿರಲಿ
ಮೂಲ ಗಂಡು ಹೆಣ್ಣು ಎರಡೇ ಜಾತಿ ಅಂತ್ಯ ಗಂಡು ಹೆಣ್ಣು ಎರಡೇ ಜಾತಿ – ಪ್ರಕೃತಿ ನಿಯಮದ ಕೋಟೆಯಲ್ಲಿ ನಾವು ಬಂದಿಸಲ್ಪಟ್ಟಿದ್ದೇವೆ
ಶಿಕ್ಷಣದಿಂದ ಶಿಕ್ಷೆಯಿಂದ ಅಸಾಧ್ಯವಾದದ್ದು ಕೆಲವೊಂದು ಸೂತ್ರಗಳ ಅಳವಡಿಕೆಯಿಂದ ಸಾಧ್ಯ ತಿಳಿದಿರಲಿ
ಅಂದಿನ ಪಾಪ ಭಯ ಇಂದಿನ ಕಾನೂನು ಭಯ – ಅರಿತು ಪಾಲಿಸುವುದು – ನೆಮ್ಮದಿ ಬದುಕಿಗೆ ನಾಂದಿ
ಮಾಧ್ಯಮದ ಮೂಲಕ ವಿಷ ಪೂರಿತ ಆಹಾರಕ್ಕೆ ಕಡಿವಾಣವಿರಲಿ
ಆವಿಸ್ಕಾರಗಳ ಸದುಪಯೋಗದತ್ತ ಮಾತ್ರ ಗಮನವಿರಲಿ