ಪುರುಷರು ತಮ್ಮ ಸ್ಥಾನ ಮಾನ ಘನತೆ ಗೌರವಗಳನ್ನು ಅತೀ ಉನ್ನತ ಪದವಿಗೆ ಏರಿಸಬಲ್ಲ ಏಕಮಾತ್ರ ವೇದಿಕೆಯ ಕಿರು ಪರಿಚಯ ಸಂವಾದ ರೂಪದಲ್ಲಿ ಮುಂದುವರಿಯುತಿದೆ.ನಮ್ಮಲ್ಲಿ ಎಷ್ಟೇ ಸಂಪತ್ತು ಅಧಿಕಾರ ಜನಬಲ ಇದ್ದರೂಕೂಡ ಜಗತ್ತಿನ ಪ್ರತಿಯೊಬ್ಬರಿಗೂ ಪ್ರತಿ ಕ್ಷಣದಲ್ಲೂ ಶಾಶ್ವತವಾಗಿ ಪರಿಚಯಿಸಲು ಸಾಧ್ಯವಿಲ್ಲದೆ ಇರುವ ಕೊರಗನ್ನು ಈ ವೇದಿಕೆ ಕೊನೆಗೊಳಿಸಿ ಮಾನವ ಕುಲಕೋಟಿಯ ಇಷ್ಟಾರ್ಥ ಪೂರೈಸುವ ದೃಢ ಸಂಕಲ್ಪದೊಂದಿಗೆ ಮುನ್ನುಗ್ಗುತಿದೆ.
ನಮ್ಮನ್ನು ನಾವು ಸಮಾಜಕ್ಕೆ ಲೋಕಕ್ಕೆ ಪರಿಚಯಿಸುವ ಅಗತ್ಯ ಇದೆಯಾ ?
ನಮ್ಮನ್ನು ನಾವು ಹಲವಾರು ಸಂದರ್ಭಗಳಲ್ಲಿ ಪರಿಚಯಿಸುವ ಸಂದಿಗ್ದತೆ ಎದುರಾಗುತದೆ. ಈ ಒಂದು ಸಮಸ್ಯೆಗಳನ್ನು ಮನಗಂಡು ಅನೇಕ ಸಾಮಾಜಿಕ ಜಾಲತಾಣಗಳು ತಮ್ಮ ಕೆಲಸ ಮಾಡುತಿದ್ದು ಒಂದು ಹೆಜ್ಜೆ ಮುಂದೆ ಹೋಗಿ ಜಾಲತಾಣಗಳ ಹೊರತಾಗಿ ಹಾಗು ನಿಧನವಾದವರಿಗೆ ಸ್ಮಾರಕ ರೂಪದಲ್ಲಿ ವೇದಿಕೆಯ ಕೆಲಸ ಸಾಗುತಿದೆ.
ಪುರುಷರ ಸೇವಾ ಒಕ್ಕೂಟಕ್ಕೂ ಮತ್ತು ಪುರುಷರ ಬುಲೆಟಿನ್ ಇದರ ಸಂಬಂಧ ಬಗ್ಗೆ ತಿಳಿಸಿ
ಒಕ್ಕೂಟ ಜನ ಸಾಮಾನ್ಯರ ಭಾವನೆಯ ಸಂಕೇತ ಬುಲೆಟಿನ್ ಪ್ರಕಟಣೆಯ (ಪ್ರಚಾರದ ) ಜವಾಬ್ದಾರಿಯನ್ನು ಪೂರೈಸುತದೆ.
ಇದರಲ್ಲಿ ಯಾರೆಲ್ಲ ತೊಡಗಿಸಿಕೊಳ್ಳಬಹುದು ?
ಸೇವಾ ದೃಷ್ಟಿ ಇರುವವರು ಸೇವೆಗಾಗಿ – ಅನ್ಯರು ಪ್ರಚಾರಕ್ಕಾಗಿ ವಿಪುಲ ಅವಕಾಶವನ್ನು ತಮ್ಮದಾಗಿಸಿ ಉನ್ನತ ಮಟ್ಟಕ್ಕೆ ಹೋಗಬಹುದು .
ಪ್ರಯೋಜನ ಯಾರು ಯಾರಿಗೆ ಆಗಬಹುದು?
ಎಲ್ಲಾ ಉದ್ಯೋಗಿಗಳಿಗೆ, ಉದ್ಯಮ ನಡೆಸುವವರಿಗೆ, ವೃತಿಯಲ್ಲಿ ತೊಡಗಿದವರಿಗೆ, ಮುಂತಾದ ದೊಡ್ಡ ಪಟ್ಟಿ ನಮ್ಮ ಮುಂದೆ ಇದೆ
ಆರ್ಥಿಕವಾಗಿ ಲಾಭದಾಯಕವಿದೆಯಾ ?
ಖಂಡಿತಾ ಇದೆ. ಕನಿಷ್ಠ ಸೇವಾ ಶುಲ್ಕದಲ್ಲಿ ನೂರಕ್ಕೆ ನೂರು ಲಾಭದಾಯಕ
ವ್ಯವಸ್ಥೆಯ ಶುಭಾರಂಭ ಯಾವಾಗ?
ನಾವು ನೀವು ಸದುಪಯೋಗ ಅರಿವು ನಮ್ಮಲ್ಲಿ ಉಂಟಾದಾಗ ಆಮೆ ನಡಿಗೆಯಿಂದ ಮನೋವೇಗಕ್ಕೆ ಚಾಲನೆ ದೊರೆಯುತದೆ
ಮುಂದುವರಿಯುವುದು