ನಾವು ಒಬ್ಬ ದೇವಸ್ಥಾನ, ಬಸದಿ ಇತ್ಯಾದಿ ಪೂಜಾ ಕೇಂದ್ರದ ಅಧ್ಯಕ್ಷ ಆಗಿದ್ದವರಿಗೆ ಯಾವ ರೀತಿ ಪ್ರಯೋಜನ ಈ ಒಕ್ಕೂಟ ಮತ್ತು ಬುಲೆಟಿನ್ ಇದರಿಂದ ಆಗಬಹುದು ತಿಳಿಸಿ?
ವ್ಯಕ್ತಿಗಳಿಗೆ ಹಾಗು ದೇವಾಲಯಗಳಿಗೆ ವ್ಯಾಪಕ ಪ್ರಚಾರ ಈಗಿನ ಮೊಬೈಲ್ ಯುಗದಲ್ಲಿ ಸಿಗಲು ಇದು ಅತ್ಯಂತ ಸಹಕಾರಿ. ದೇವಾಲಯದ ವಾರ್ಷಿಕ ವಿದಿ ವಿಧಾನಗಳನ್ನು, ಆಗಾಗ ನಡೆಯತಕ್ಕ ಬೇರೆ ಬೇರೆ ಕಾರ್ಯಕ್ರಮಗನ್ನು ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಮಂದಿಗೆ ತಿಳಿಸುವ ಬಲಿಷ್ಠ ಮಾಧ್ಯಮ ಪೇಪರ್ ಇತ್ಯಾದಿಗಳಿಂದ ಪ್ರಭಾವಶಾಲಿ ಮಾತ್ರವಲ್ಲದೆ ವೇಗವಾಗಿ ತಲುಪಬಲ್ಲದು.
ದೇವಾಲಯಕ್ಕೆ ಬರುವವರ ಮತ್ತು ಪಾಲ್ಗೊಳ್ಳುವವರ ಸಂಖ್ಯೆ ದಿನೇ ದಿನೇ ಇಳಿಮುಖವಾಗುವುದಕ್ಕೆ ಪರಿಹಾರ ತಮ್ಮಿಂದ ಆಗಬಹುದೇ?
ಒಂದು ಕಾಲದಲ್ಲಿದ್ದ ಗರಿಷ್ಠ ಸೇವಾ ಮನೋಭಾವನೆ ಈಗ ಬದಲಾಗಿ ವ್ಯಾಪಾರ ಮತ್ತು ದರೋಡೆ ಮನೋಭಾವನೆ ಹೆಮ್ಮರವಾಗಿ ಬೆಳೆದು ನಿಂತಿದೆ. ಪ್ರಥಮವಾಗಿ ಸೇವಾ ಮನೋಭಾವನೆಯ ಬೀಜ ಬಿತ್ತುವ ಕೆಲಸ ಸೇವಾ ಒಕ್ಕೂಟದಿಂದ ಮುಂದುವರಿಯುತಿದೆ. ನಾವು ಒಕ್ಕೂಟದ ಜೊತೆಗೆ ಕೈಜೋಡಿಸುವುದರಿಂದ ಸುಮಾರು ೨೦% ಪಾಲುದಾರಿಕೆ ಪ್ರತಿಯೊಬ್ಬರಿಗೂ ತನ್ನ ಕೊಡುಗೆಯಿಂದ ಸಿಗುವುದರ ಅರಿವು ಮೂಡಿಸಬೇಕು, ಹಣದ ಸಂಪಾದನೆ ಜೊತೆಗೆ ಪುಣ್ಯ ಸಂಪಾದನೆ ಭಾಗ್ಯವನ್ನು ತಮ್ಮದಾಗಿಸುವ ದಾರಿ ತೋರಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಣದಲ್ಲಿರುವ ಕೊರತೆ ಕೊಡಲಿಯೇಟಾಗಿರುವುದನ್ನು ಅರಿತು ಸೇವಾ ಒಕ್ಕೂಟದ ವ್ಯಾಪಕ ಬೆಳವಣಿಗೆಗೆ ಶ್ರಮಿಸಬೇಕು.
ಇದರಿಂದ ಸ್ವಾವಲಂಬಿ ಮತ್ತು ಸಂತುಷ್ಟ ದೇವಾಲಯವನ್ನಾಗಿಸುವ ಕನಸು ನನಸಾಗಬಹುದೇ?
ಸಮಯ ಶ್ರಮ ಸದುಪಯೋಗ ಮಾತ್ರ ಸಾಕೆಂಬ ಕ್ಷೇತ್ರಕ್ಕೆ ತಡಮಾಡದೆ ದುಮಿಕಿ ಸತ್ಯಸತ್ಯವನ್ನು ಸ್ವತಃ ನಾವೇ ಮನಗಂಡು ಅರ್ಥಪೂರ್ಣ ಬದುಕು ಸಾಗಿಸೋಣ.
ಇದು ಬೋಧನೆಗೆ ಮಾತ್ರ ಸೀಮಿತವೇ ಯಾ ಬದುಕಿಗೂ ವೇದಿಕೆಯಿಂದ ತೋರಿಸಬಹುದೇ?
ಪ್ರಯತ್ನಗಳು ನಿರಂತರ ವರುಷಗಳಿಂದ ಸಾಗುತಿದೆ. ಸ್ಪಂದನೆ ವಿರಳ, ಕಾದು ನೋಡುವ ತಂತ್ರಕ್ಕೆ ಒತ್ತು – ಮನೋಬಲ ಮನೋವೇಗ ನಮ್ಮ ನಡೆ – ದೈವ ದೇವರ ಆಶೀರ್ವಾದದಿಂದ ಶುಭ ಫಲದ ನಿರೀಕ್ಷೆ.
ಮುಂದುವರಿಯುವುದು