ವ್ಯಾಪಾರ ಸೇವಾ ಒಕ್ಕೂಟ ಮತ್ತು ವ್ಯಾಪಾರ ಬುಲೆಟಿನ್ – ಸಂವಾದ Business Service Federation and Business Bulletin – Conversation

ಶೇರ್ ಮಾಡಿ

ವ್ಯಾಪಾರ ಸೇವಾ ಒಕ್ಕೂಟ ಮತ್ತು ವ್ಯಾಪಾರ ಬುಲೆಟಿನ್ – ವ್ಯಾಪಾರಿಗಳಿಗೆ ಕನಿಷ್ಠ ವೆಚ್ಚದಲ್ಲಿ ಗರಿಷ್ಠ ಶಾಶ್ವತ ಪ್ರಚಾರ, ಸೇವಾ ಮನೋಭಾವನೆ ವ್ಯಾಪಾರಿಗಳಲ್ಲಿ ಹುಟ್ಟಿಸಲು , ವ್ಯಾಪಾರ ಮಾಡಲು ಇಚ್ಚಿಸುವವರು ಎಲ್ಲಿ ಯಾವ ವ್ಯಾಪಾರ ಮಾಡಬಹುದು ಎನ್ನುವುದನ್ನು ಬೆರಳ ತುದಿಯಿಂದ ತಿಳಿಯಲು, ಈ ವೇದಿಕೆ ಮುಖಾಂತರ ಗರಿಷ್ಠ ಉದ್ಯೋಗ ಸೃಷ್ಟಿ, ನಮಗೆ ಬೇಕಾದ ಅಂಗಡಿಗಳ ಬಗ್ಗೆ ತಿಳಿಯಲು, ಕನಿಷ್ಠ ಸಮಯದ ಸದ್ಬಳಕೆ …… ಇತ್ಯಾದಿ ದಿನ ನಿತ್ಯ ನಾವು ಎದುರಿಸುವ ಸಮಸ್ಯೆಗಳನ್ನು ಅರಿಯಲು ಪುಟ್ಟ ಪ್ರಯತ್ನ ನಿಮ್ಮ ನಮ್ಮೆಲ್ಲರ ಒಳಿತಿಗಾಗಿ ಚುಟುಕು ಸಂವಾದ ಮುಂದುವರಿಯುವುದು.
ವ್ಯಾಪಾರ ಬುಲೆಟಿನ್ ಬಗ್ಗೆ ತಿಳಿಸಿ
ವ್ಯಾಪಾರ ಮಾಡುವ ಅಂಗಡಿಗಳ ಭಾವಚಿತ್ರ ಸಹಿತ ಅಥವಾ ಭಾವಚಿತ್ರ ರಹಿತವಾಗಿ ಸರಿಯಾದ ಮಾಹಿತಿಯನ್ನು ಕೊಡುವ ವ್ಯವಸ್ಥೆ. ಉದಾರಣೆಗೆ – ಕಡಬ ನೆಲ್ಯಾಡಿ ಉದನೇ ಕಲ್ಲುಗುಡ್ಡೆ ನೇರ್ಲ ಬಿಸಿನೆಸ್ ಬುಲೆಟಿನ್ ಮಾಡಿದಲ್ಲಿ ಜನಸಾಮಾನ್ಯರಿಗೆ ನಿಮಗೆ ಬೇಕಾದ ವಸ್ತು ಖರೀದಿಸಲು ಎಲ್ಲಿ ಹೋಗಬೇಕಂಬ ಸ್ಪಷ್ಟ ಮಾಹಿತಿ ಬೆರಳ ತುದಿಯಲ್ಲಿ ಮೊಬೈಲ್ ಸಹಾಯದಿಂದ ಪಡೆಯಬಹುದು
ಇದನ್ನು ಯಾರು ಮಾಡಬಹುದು
ಬೇರೆ ಬೇರೆ ಉದ್ಯೋಗ ಹುಡುಕುವವರು ಉದ್ಯಮ ನಡೆಸಲು ಇಚ್ಚಿಸುವವರು, ಕನಿಷ್ಠ ಪರಿಶ್ರದಲ್ಲಿ ಗರಿಷ್ಠ ಸಂಪಾದನೆ ಮಾಡುವ ಬಯಕೆ ಹೊಂದಿರುವವರು , ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಮಾಡುವವರು, ಸ್ವತಃ ವ್ಯಾಪಾರಿಗಳು ಮಾಡಬಹುದು. ಒಂದು ಕಾಲದಲ್ಲಿ ಫೋನ್ ಡೈರೆಕ್ಟರಿ ಕೊಡುತಿದ್ದ ಮಾಹಿತಿಯ ರೂಪಾಂತರ ಆದುನಿಕ ಪ್ರಪಂಚಕ್ಕೆ ಹೊಂದುವಂತೆ.
ಇದರ ಬಗ್ಗೆ ಹೆಚ್ಚಿನ ಮಾಹಿತಿ ಎಲ್ಲಿ ಸಿಗಬಹುದು
ಇತ್ತ ಗಮನ ಹರಿಸುವವರು ಅವ್ಯಕ್ತ ಬುಲೆಟಿನ್ ಸಂಪರ್ಕಿಸಿ.
ನಾವು ನಮ್ಮ ಮನೆಯ ಹತ್ತಿರ ವ್ಯಾಪಾರ ಮಾಡುವವರಿಗೆ, ಮನೆ ಮನೆ ವ್ಯಾಪಾರಿಗಳಿಗೆ, ಮೊಬೈಲ್ ವ್ಯಾಪಾರಿಗಳಿಗೆ ಪ್ರಯೋಜನ ಇದೆಯಾ ?
ಸಮಯ ಶ್ರಮದ ಮಿತ ಬಳಕೆ ಮಾಡಿ, ಬಂಡವಾಳ ತೊಡಗಿಸದೆ, ಮಧ್ಯವರ್ತಿಯಾಗಿ ಸಂಪಾದನೆಗೆ ವಿಪುಲ ಅವಕಾಶ ಇಲ್ಲಿದೆ, ಆರ್ ಡಿ ಏಜೆಂಟ್ , ಪಿಗ್ಮಿ ಏಜೆಂಟ್ ಇತ್ಯಾದಿ ಹಲವಾರು ಪ್ರತಿನಿಧಿಗಳು ಪ್ರಯೋಜನ ಪಡೆಯಲು ಸಾಧ್ಯವಿದೆ.
ಇದರ ವ್ಯಾಪ್ತಿ ಮತ್ತು ಪ್ರಯೋಜನ ಬಗ್ಗೆ ಅನ್ನಿಸಿಕೆ
ಇದರ ವ್ಯಾಪ್ತಿ ಜಾಗತೀಕವಾಗಿದ್ದು – ಯಾವುದೇ ಕ್ಷೇತ್ರದಲ್ಲಿ ಸಿಗದ ಪ್ರಯೋಜನವಿದ್ದು – ಆನ್ಲೈನ್ ವಿಸಿಟಿಂಗ್ ಕಾರ್ಡ್ ರೀತಿಯಲ್ಲಿ ಕೆಲಸ ನಿರ್ವಹಿಸುತ್ತದೆ.
ನಾವು ಅತಿ ಸಣ್ಣ ಮಟ್ಟದಲ್ಲಿ ವ್ಯಾಪಾರ ಮಾಡುವವರಿಗೆ ಬೇಕೇ ?
ಮನೆ ಮನೆಗೆ ಮನ ಮನಕ್ಕೆ ತಲುಪುವ ಸಾಧನ ಮೊಬೈಲ್ ಆದುದರಿಂದ ಇದು ಸಣ್ಣದು ದೊಡ್ಡದು ಭೇದ ಭಾವವಿಲ್ಲದೆ ಸಕಲರಿಗೂ ಪ್ರಯೋಜನಕಾರಿ
ಮುಂದುವರಿಯುವುದು

See also  Kehava Gowda Alekki - Ichilampady - Daksha communication

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?