ಅಜ್ಞಾನ ಜಗದಿ ಮಾನವ ಬಾಳು
ಸುಜ್ಞಾನಿ ಮಾನವ ಬದುಕು ಗೋಳು
ದಿನನಿತ್ಯದ ಹೊಡೆತ ತಪ್ಪಿಸಲು ಅಸಾದ್ಯವೆಂದ ……………………………. ಅವ್ಯಕ್ತ
ವ್ಯಾಪಾರ ಯುಗದಿ ಬದುಕುವ ಕಲೆ
ಅರಿತು ಬಾಳುವೆ ನಡೆಸಿದರೆ ಒಳಿತು
ನ್ಯಾಯಯುತ ಬಾಳು ಊಟಕ್ಕಿಲ್ಲದ ಉಪ್ಪಿನಕಾಯಿ …………………………. ಅವ್ಯಕ್ತ
ಮೂಲ ನಂಬಿಕೆಗೆ ಸೂಕ್ತ ಬದಲಾವಣೆ ಅನಿವಾರ್ಯವಾದೊಡೆ
ಮಾಲ್ಪದೆ ಕುರುಡ ಹಿಡಿದ ಬಡಿಗೆ ಉಪಯೋಗಿಸಿದೊಡೆ
ಬದುಕು ನಿಂತ ನೀರಾಗಿ ನೆಮ್ಮದಿ ಶೂನ್ಯವೆಂದ ………………………………. ಅವ್ಯಕ್ತ
ಗತಕಾಲದ ಪುಸ್ತಕ ಬೋದಿಪ ಮಾನವ
ಗತಕಾಲದ ವಾಹನ ಬಳಕೆ ಮಾಡದಾತ
ಬದುಕು ಬೋಧನೆ ವೆತ್ಯಾಸ ನೋಡೆಂದ ……………………………………. ಅವ್ಯಕ್ತ
ವೃತ್ತಿ ಮಾಡುವವರ ಸೇವಾ ಒಕ್ಕೂಟ
ವೃತ್ತಿ ಬದುಕಿಗೆ ಆವಿಸ್ಕಾರ ವೇದಿಕೆ
ದೊಣ್ಣೆ ಏಟಿಗೆ ನಮಗಾಗಿ ಆಯುಧವೆಂದ …………………………….. ಅವ್ಯಕ್ತ
ಬದುಕಿನ ಅವಧಿ ಇತಿ ಮಿತಿಯೊಳಗೆ ಇರುವಾಗ
ಬದುಕಿಗೆ ಒಂದು ಗುರಿ ನಿಗದಿ ಪಡಿಸಿ
ಸದುಪಯೋಗ ಮಾಡುವ ಕಲೆ ಬದುಕಿಗೆ ಭೂಷಣ …………………… ಅವ್ಯಕ್ತ
ಹೊಗಳುವವರು ತೆಗಳುವವರ ಪೈಕಿ ನಿನ್ನ ಆಯ್ಕೆ
ತೆಗಳುವವರ ಆರಿಸಿದೊಡೆ ಮನ ದೇಹ ಸ್ವಚ್ಛ
ಹೊಗಳುವವರ ಆಯ್ಕೆ ಬದುಕಿಗೆ ಕನ್ನಡಿ ಕೊರತೆ ………………………. ಅವ್ಯಕ್ತ
ಆವಿಸ್ಕಾರದ ದ್ಯೋತಕವಾದ ಭಜನೆ ಗಣೇಶೋತ್ಸವ
ಆವಿಸ್ಕಾರಕ್ಕೆ ತಲೆಕೆಡಿಸದ ದೈವ ದೇವಸ್ಥಾನ
ದೈವ ದೇವಸ್ಥಾನಗಳಿಗೆ ಎಚ್ಚರಿಕೆ ಗಂಟೆ …………………………………. .ಅವ್ಯಕ್ತ
ಅಕ್ಷರ ಜ್ಞಾನದ ಸದ್ಬಳಕೆ
ವಿಪುಲ ಸಮಯದ ಸದ್ಬಳಕೆ
ಮಾಡಿದಾತ ಆಗರ್ಭ ಶ್ರೀಮಂತನೆಂದ …………………………………. ಅವ್ಯಕ್ತ
ತಂತ್ರ ಪ್ರತಿಷ್ಠೆ ಬದಲಾಗಿ ಭಾವ ಪ್ರತಿಷ್ಠೆ
ಭಾವ ಪ್ರತಿಷ್ಠೆ ಬದಲಾಗಿ ಶಕ್ತಿ ಪ್ರತಿಷ್ಠೆ
ಜನಮನದ ಮೊದಲ ಇಂಗಿತ ಧರೆಗಿಳಿದು ಈಡೇರಿಸಲಾರೆಯ …………….ಅವ್ಯಕ್ತ
ಪುಸ್ತಕದ ಬದನೇಕಾಯಿ ಓದುವಾತ ಜ್ಞಾನಿ
ಮಸ್ತಕದ ಬದನೇಕಾಯಿ ಓದುವಾತ ಸುಜ್ಞಾನಿ
ಮಸ್ತಕದ ಬದನೇಕಾಯಿ ಓದಿ ತಿಳಿಯೆಂದ …………………………ಅವ್ಯಕ್ತ