ವಿಷ ಪೂರಿತ ಆಹಾರ ದೇಹಕ್ಕೆ ಮಾರಕ
ವಿಷ ಪೂರಿತ ಮಾಧ್ಯಮ ಬದುಕಿಗೆ ಮಾರಕ
ಬದುಕಿಗೆ ಪೂರಕ ಆಹಾರ ಮಾಧ್ಯಮ ಬೇಕೆಂದ …………………….. ಅವ್ಯಕ್ತ
ಶ್ರಾದ್ಧ ಭಕ್ತಿ ನಂಬಿಕೆ ಪ್ರತಿಷ್ಠೆ ಅಂದು
ತಂತ್ರ ಪೂಜೆ ಆಡಂಬರ ಪ್ರತಿಷ್ಠೆ ಇಂದು
ವ್ಯಾಪಾರೀಕರಣ ಪ್ರತಿಷ್ಠೆ ದೈವ ದೇವರ ಅವನತಿಯೆಂದ ………………………….ಅವ್ಯಕ್ತ
ತಪ್ಪು ಮಾಡಿದಾತನಿಗೆ ಕೊಡದ ಶಿಕ್ಷೆ
ತಪ್ಪು ಮಾಡದ ವಂಶಸ್ಥನಿಗೆ ಕೊಟ್ಟರೆ
ದೈವ ದೇವರ ನಂಬಿಕೆಗೆ ಕೊಡಲಿಯೆತೆಂದ ………………………………………..ಅವ್ಯಕ್ತ
ವೇದಿಕೆಯ ಮುಖಸ್ತುತಿ ಅರಿತು ಬಾಳದಿದ್ದೊಡೆ
ವೇದಿಕೆಯ ಮನಸ್ಥಿತಿ ಅರಿಯದೆ ಬಾಳಿದರೆ
ಪಟ್ಟವೆಂಬ ಚಟ್ಟದಲ್ಲಿ ಕುಳಿತ ಮೂರ್ಖನೆಂದ ……………………………………..ಅವ್ಯಕ್ತ
ಅರಸರ ಅರಮನೆಯ ಕಾರ್ಯಕ್ಕೆ ಕರೆದು ಬಾರದಿದ್ದವಂಗೆ
ಅರಮನೆಯ ಅರಸ ತನ್ನ ಪಾಡಿಗೆ ತಾನಿದ್ದರೂ
ಕ್ಷೇತ್ರದ ದೈವ ದೇವರ ಕೋಪ ಭಾದಿಸುವುದೆಂದ ………………………………..ಅವ್ಯಕ್ತ
ಕ್ಷೇತ್ರದ ಜೀರ್ಣೋದ್ದಾರ ತನ್ನದೆಂದು ದೇವರು ಭಾವಿಸಿ
ಮುನ್ನಡೆಸುವವರಿಗೆ ಆಜ್ಞಾಪಿಸಿ ಪ್ರಕ್ರಿಯೆ ಹಂತದ ನಾಂದಿ
ಭಕ್ತರು ಕೈಜೋಡಿಸಿದರೆ ಬಾಳು ಇಲ್ಲದಿದ್ದರೆ ಗೋಳೆಂದ …………………………ಅವ್ಯಕ್ತ
ನೀತಿ ನಿಯಮ ಚೌಕಟ್ಟು ಇಲ್ಲದ ಬದುಕು
ನೀತಿ ನಿಯಮ ಚೌಕಟ್ಟು ಇಲ್ಲದ ವೃತ್ತಿ
ಬಾಳಿನ ಗೋಳು ವೃತ್ತಿಯ ಅವನತಿ ತಿಳಿಯೆಂದ …………………… ಅವ್ಯಕ್ತ
ಜ್ಯೋತಿಷ್ಯ ರಾಶಿಯ ಪುಟ ಓದುತಿಹನು
ತಪ್ಪಾಗಿ ಓದುವುದು ಜ್ಯೋತಿಷಿ ಅಪರಾಧ
ನಿರ್ದಿಷ್ಟ ರಾಶಿ ಗ್ರಾಹಕ ಪೇಳಿದನೆಂದ ………………………………..ಅವ್ಯಕ್ತ
ರಾಶಿಯ ಪುಟ ಓದಲು ಜ್ಯೋತಿಷ್ಯರಿಹರು
ಅನ್ಯರಲ್ಲಿ ಪುಟ ಓದಿಸಿ ಅರ್ಥೈಸಿ
ಪುರಸ್ಕಾರ ತಿರಸ್ಕಾರ ಪಟ್ಟ ಕಟೆಂದ…………………………………..ಅವ್ಯಕ್ತ
ಪ್ರಸ್ನಾ ಚಿಂತನೆ ಅರಿವಿಲ್ಲದ
ಪ್ರಸ್ನಾ ಚಿಂತನೆ ಮಾಡಿದೊಡೆ
ಕಾಯಿಲೆ ಇಲ್ಲದವನಿಗೆ ಮದ್ದೆಂದ …………………………………….. ಅವ್ಯಕ್ತ