ಪ್ರತಿ ಕ್ಷೇತ್ರಕ್ಕೊಂದು ಮಂತ್ರ ರಚಿಸಿ ಪ್ರತಿ ಭಕ್ತರು
ಪ್ರತಿ ದಿನ 108 ಸಲ ಮಂತ್ರ ಪಠಿಸಿದೊಡೆ
ಭಾವ ಪ್ರತಿಷ್ಠೆಯೊಂದಿಗೆ ಕ್ಷೇತ್ರ ನಿತ್ಯ ಬೆಳಗುವುದೆಂದ …………………………….. ಅವ್ಯಕ್ತ
ವ್ಯವಹಾರ ವಾಸ್ತು ಜ್ಯೋತಿಷ್ಯ ತಂತ್ರಿ ಅರ್ಚಕ ನರ್ತಕರಿರೆ
ದೈವ ದೇವರು ವ್ಯವಹಾರ ಕ್ಷೇತ್ರದ ಹೊರಗೆ ಇರುತಿರೆ
ಮಾನವರಾದ ನಮ್ಮ ಪ್ರಯತ್ನ ನೀರ ಮೇಲಿನ ಹೋಮವೆಂದ ……………………..ಅವ್ಯಕ್ತ
ಭಕ್ತರ ನಂಬಿಕೆಯಿಂದ ದೈವ ದೇವರು ಅಂದು
ಕಲ್ಲಿನ ಮೇಲೆ ಕಲ್ಲಿನ ರೂಪದಲ್ಲಿ ಕುಳಿತಿಹರು
ಕಲ್ಲು ಸಲ್ಲವೆಂಬ ಜನರು ನಿನ್ನ ಭಕ್ತರೇ ………………………………………………..ಅವ್ಯಕ್ತ
ಮನ ಮಂದಿರದಿ ದೈವ ದೇವರ ಪ್ರತಿಷ್ಠೆ ಮಾಡದಾತನಿಗೆ
ಕಲ್ಲು ಮಣ್ಣು ಗುಡಿಯೊಳಗೆ ಪ್ರತಿಷ್ಠಾ ವಿಧಿ ಪೂರೈಸಿದೊಡೆ
ಮಾನವರ ಶ್ರಮ ಸಮಯ ಧನ ಗುಡಿ ವ್ಯರ್ಥವೆಂದ ………………………………….ಅವ್ಯಕ್ತ
ಸ್ವಾರ್ಥ ಕ್ಷೇತ್ರ ಜಾತಿ ತ್ಯಾಗ ಮಂತ್ರಗಳಿಹುದು
ಮಾನವ ಪ್ರಾಣಿ ಜೀವರಾಶಿ ಪ್ರಕೃತಿ ಏಳಿಗೆಗೆ
ಅತ್ಯುತ್ತಮ ತ್ಯಾಗ ಮಂತ್ರ ಪಠನೆ ಲೇಸೆಂದ ………………………………. ಅವ್ಯಕ್ತ