ದೈವಾಲಯ ಅಭಿಯಾನ

Share this

 ದೈವ ಇರುವ ಸ್ಥಳ ದೈವಾಲಯ
ಒಂದು ಕಾಲದಲ್ಲಿ ಬಾರಿಕೆ, ಗುತ್ತು , ಬೀಡು , ಅರಮನೆ, – ಇತ್ಯಾದಿ ಸ್ಥಳಗಳಲ್ಲಿ ದೈವ ಇದ್ದದ್ದು ಜ್ವಲಂತ ಉದಾರಣೆ ನಮ್ಮ ಮುಂದೆ ಇದೆ
ದೈವ ನಿತ್ಯ ನಿರಂತರ -ಸತ್ಯ ಧರ್ಮ ನ್ಯಾಯವನ್ನು ಕಿಂಚಿತ್ತು ದಕ್ಕೆ ಬಾರದಂತೆ ನೋಡಿಕೊಳ್ಳುವ ವಿಶ್ವ ಮಟ್ಟದಲ್ಲಿ ಅತ್ಯಂತ ಶ್ರೇಷ್ಠ ಶಕ್ತಿ
ವ್ಯಕ್ತಿಯೊಬ್ಬ ತನ್ನ ಮನದಾಳದ ನೋವನ್ನು ಬಿನ್ನವಿಸಿದಾಗ – ಕನಿಷ್ಠ ಸಮಯದಲ್ಲಿ ಅತಿ ಕಡಿಮೆ ವೆಚ್ಚದಲ್ಲಿ ಪೂರೈಸುವ ಕಾಮದೇನು
ಕಳ್ಳರು , ವಂಚನೆಗಾರರು , ಕೇಡಿಗಳು , ಇನ್ನಿತರ ಕೇಡು ಬಯಸುವವರಿಗೆ ಅವಕಾಶ ಇಲ್ಲದ ಸ್ವರ್ಗ ನಿರ್ಮಾಣ ಮಾಡುವ ಕಾರಣಕರ್ತರು
ಆದುನಿಕ ಪ್ರಜಾಪ್ರಭುತ್ವದ ಸಕಲ ವ್ಯವಸ್ಥೆಯನ್ನು ಆರೋಗ್ಯವನ್ನು ಸೇರಿಸಿ – ನಿರ್ವಹಿಸಬಲ್ಲ ದೇವಾ ದೂತ
ನಮ್ಮ ಪೂರ್ವಜರು ಪ್ರತಿಯೊಬ್ಬರು – ತಮ್ಮ ಮನದಲ್ಲಿ ದೈವ ದೇವರನ್ನು ತಾವೇ ಪ್ರತಿಷ್ಠಾಪಿಸಿ – ಶ್ರದ್ದೆ ಭಕ್ತಿ ಭಾವದಿಂದ ನೆಮ್ಮದಿಯಿಂದಿದ್ದರು
ಮನದಲ್ಲಿ ದೈವ ದೇವರ ಪ್ರತಿಷ್ಠೆ ಮಾಯವಾಗಿ – ಮೂರ್ತಿಯಲ್ಲಿ ಅನ್ಯರಿಂದ ಪ್ರತಿಷ್ಠಾಪಿಸುವ ಪದ್ಧತಿ ನಮ್ಮ ದುರಂತ ಬದುಕಿಗೆ ನಾಂದಿ
ಮನದ ಪ್ರತಿಷ್ಠೆ ಮಾಯವಾಗಿ ಮೂರ್ತಿ ಪ್ರತಿಷ್ಠೆ ಕಂಡು ಕೇಳರಿಯದ ದುರಂತಕ್ಕೆ ನಾಂದಿ
ನಾವು ನಮ್ಮ ಬದುಕು ಸುಖ ಶಾಂತಿ ನೆಮ್ಮದಿ ಪುನಃ ನಮಗೆ ದೊರಕಬೇಕಾದರೆ – ದೈವದ ಜೊತೆಗೆ ದೇವರ ಎರಡನೆಯ ಮೂಲವನ್ನು ಅರಿತು ಅನುಷ್ಠಾನ ಮಾಡುವ ದ್ರಡ ಸಂಕಲ್ಪ ಮಾಡಬೇಕು.
ವ್ಯಕ್ತಿಯ ಬದುಕಿನ ಜೀರ್ಣೋದ್ದಾರ ಮೊದಲು ಮಾಡಿದಾಗ ಮಾತ್ರ – ನಮ್ಮ ಶಿಲಾಮಯ ಯಾ ಇನ್ನಿತರ ಜೀರ್ಣೋದ್ದಾರ ಕೆಲಸ ಪರಿಪೂರ್ಣ
ದೈವ ದೇವರು ದಟ್ಟ ಕಾಡಿನಲ್ಲಿದ್ದಾರೆ – ಯಾವುದೇ ದೈವಾಲಯ ದೇವಾಲಯದಲ್ಲಿಲ್ಲ – ವಾಸ್ತು ತಜ್ಞರ ಅಭಿಪ್ರಾಯ – ನೂರಕ್ಕೆ ನೂರು ಸತ್ಯ
ಪ್ರತಿಯೊಬ್ಬರ ಮನದ ಮಾತಿಗೆ ಈ ವೇದಿಕೆಯನ್ನು ಬಳಸಿ ನಾವೆಲ್ಲರೂ ನಮ್ಮ ಭಿನ್ನತೆಯನ್ನು ಮರೆತು ಮೂಲ ದೈವಾರಾಧನೆ ಮತ್ತು ದೇವರಾದನೆಯಲ್ಲಿ ನೆಮ್ಮದಿಯ ಬಾಳು ನಡೆಸೋಣ
ಇದು ನಮ್ರ ವಿನಂತಿ – ತಪ್ಪುಗಳಿದ್ದರೆ ಕ್ಷಮೆಯಿರಲಿ

See also  ದೈವಾಲಯ ಅಭಿಯಾನ

Leave a Reply

Your email address will not be published. Required fields are marked *

error: Content is protected !!! Kindly share this post Thank you