ಭಾವನೆ ಮತ್ತು ಉದ್ದೇಶ:
“ಜೈನರ ಅಭಿಯಾನ” ಎನ್ನುವುದು ಜೈನ ಸಮಾಜದ ಆಂತರಿಕ ಶಕ್ತಿ, ಶ್ರದ್ಧೆ, ಮತ್ತು ಸಾಂಸ್ಕೃತಿಕ ಬಲವನ್ನು ಪುನರುಜ್ಜೀವನಗೊಳಿಸುವ ಒಂದು ಮಹತ್ತರ ಚಳವಳಿ.
ಈ ಅಭಿಯಾನವು ಕೇವಲ ಧಾರ್ಮಿಕ ಕಾರ್ಯವಲ್ಲ — ಅದು ಜೀವನ ಶೈಲಿ, ಆತ್ಮಶಕ್ತಿ, ಉದ್ಯೋಗ, ಕೃಷಿ, ವ್ಯಾಪಾರ ಮತ್ತು ಸಮಾಜಸೇವೆಗಳ ಸಂಯೋಜನೆಯಾಗಿದೆ.
ಈ ಅಭಿಯಾನದ ಪ್ರಮುಖ ಉದ್ದೇಶವೆಂದರೆ –
“ಪ್ರತಿ ಜೈನರು ಧರ್ಮ, ಉದ್ಯೋಗ ಮತ್ತು ಜೀವನದ ನೆಮ್ಮದಿಯಲ್ಲಿ ಸ್ವಾವಲಂಬಿಯಾಗಿ, ಸಂತುಷ್ಟಿಯಾಗಿ, ಮತ್ತು ಗೌರವಪೂರ್ಣವಾಗಿ ಬದುಕಬೇಕು.”
ಅಭಿಯಾನದ ಪ್ರಮುಖ ಉದ್ದೇಶಗಳು:
- ವಾರದ ದೇವಾಲಯ ಅಭಿಯಾನ: 
 ಪ್ರತಿ ಶುಕ್ರವಾರ ಬೆಳಿಗ್ಗೆ ೯:೩೦ ರಿಂದ ೧೧:೩೦ ತನಕ ಎಲ್ಲರೂ ಸ್ಥಳೀಯ ಜೈನ ದೇವಾಲಯಕ್ಕೆ ತೆರಳಿ ಪಂಚನಮಸ್ಕಾರ ಮಂತ್ರಪಠಣ, ಸಾಮೂಹಿಕ ಪೂಜೆ, ಮತ್ತು ಬಸದಿ ಸ್ವಚ್ಛತೆ ಕಾರ್ಯಕ್ರಮದಲ್ಲಿ ಭಾಗವಹಿಸುವುದು.
 ಉದ್ಯೋಗಿಗಳಿಗೆ ರಜಾದಿನಗಳಲ್ಲಿ ಭಾಗವಹಿಸಲು ಅವಕಾಶ
- ಮನೆಯಲ್ಲಿಯೇ ಉದ್ಯೋಗ ಅಭಿಯಾನ: 
 ಪ್ರತಿಯೊಬ್ಬ ಜೈನ ಕುಟುಂಬಕ್ಕೂ ಮನೆಮಟ್ಟದಲ್ಲಿ ಸ್ವಾವಲಂಬಿ ಉದ್ಯೋಗ ಸೃಷ್ಟಿಸುವ ಚಿಂತನೆ ಮತ್ತು ಅನುಷ್ಠಾನ.
 “ಉದ್ಯೋಗ ಮನೆಗೇ ಬರಲಿ, ಜೀವನದ ನೆಮ್ಮದಿ ಅಲ್ಲಿ ಬೇರೂರಲಿ” ಎಂಬ ಧ್ಯೇಯವಾಕ್ಯ.
- ಸ್ವಾವಲಂಬನೆ ಮತ್ತು ಸಂತೃಪ್ತಿ: 
 ದೇವರು, ಧರ್ಮ ಮತ್ತು ಜೀವನ – ಈ ಮೂರರ ನಡುವೆ ಸಮತೋಲನ ಸಾಧಿಸುವ ಬದುಕು.
- ಸಾಮಾಜಿಕ ಗೌರವ: 
 ಪ್ರತಿಯೊಬ್ಬ ಜೈನರಿಗೆ ಸ್ಥಾನ, ಮಾನ, ಘನತೆ, ಗೌರವ ಮತ್ತು ಸಂಪಾದನೆ ದೊರೆಯುವ ವ್ಯವಸ್ಥೆ ರೂಪಿಸುವುದು.
- ಸಾವಿರ ವೆಚ್ಚದ ಕೆಲಸ ಒಂದು ರೂಪಾಯಿಯಲ್ಲಿ: 
 ನವೀನ ಕಲ್ಪನೆಯಡಿ, ಬಂಡವಾಳವಿಲ್ಲದೆ (ಸೂನ್ಯ ಹೂಡಿಕೆ) ಕಾರ್ಯರೂಪ ನೀಡಬಹುದಾದ ಸಾಮಾಜಿಕ ಯೋಜನೆಗಳ ಅನುಷ್ಠಾನ.
- ಜೈನರ ಆತ್ಮವಿಶ್ವಾಸದ ಘೋಷಣೆ: 
 “ಜೈನರು ಅಂದಿನ, ಇಂದಿನ ಮತ್ತು ಮುಂದಿನ ರಾಜರು – ಶತಸಿದ್ಧ ಸಮಾಜ!” ಎಂಬ ನಂಬಿಕೆಯ ಬಲವರ್ಧನೆ.
- ಪಂಚನಮಸ್ಕಾರ ಮಂತ್ರದ ಶಕ್ತಿ: 
 ಈ ಮಂತ್ರಪಠಣವೇ ಜೈನರ ಮನೋಶಕ್ತಿ ಮತ್ತು ಆತ್ಮಶಕ್ತಿ ಅಭಿವೃದ್ಧಿಗೆ ಮೂಲ.
 “ಅರಿತು ಪಠಿಸೋಣ, ಅರಿತು ಬದುಕೋಣ” ಎಂಬ ಸಂದೇಶದೊಂದಿಗೆ ಮನಸ್ಸಿನ ಶುದ್ಧತೆ, ಆತ್ಮಶಾಂತಿ, ಮತ್ತು ಏಕಾಗ್ರತೆ ಬೆಳೆಸುವುದು.
ಅನುಷ್ಠಾನದ ವಿಧಾನ:
- ಪ್ರತಿ ಶುಕ್ರವಾರ ಬಸದಿ ಭೇಟಿ (ಬೆಳಿಗ್ಗೆ ೯:೩೦ – ೧೧:೩೦). 
- ೩೦ ನಿಮಿಷ ಮಂತ್ರಪಠಣ, ಸಾಮೂಹಿಕ ಪೂಜೆ, ೩೦ ನಿಮಿಷ ಮನೆ ಉದ್ಯೋಗ ಚಿಂತನೆ, ಮತ್ತು ೧ ಗಂಟೆ ಬಸದಿ ಸ್ವಚ್ಛತೆ. 
- ಪ್ರತಿ ಅಭಿಯಾನದ ಅಧ್ಯಕ್ಷರನ್ನು ವಾರ್ಷಿಕವಾಗಿ ಬದಲಾಯಿಸಲಾಗುತ್ತದೆ, ಸಹಕಾರದಿಂದ ಹೊಸ ಮುಖಗಳು ಬೆಳೆಯಲು ಅವಕಾಶ. 
- ಸಕಲ ಅಭಿಯಾನಗಳ ಅಧ್ಯಕ್ಷರು – ಜೈನರ ಅಭಿಯಾನದ ಉಪಾಧ್ಯಕ್ಷರು. 
- ಪಾಲುಗಾರಿಕೆ ಶೇ. ೫ ಅಧ್ಯಕ್ಷರಿಗೆ, ಶೇ. ೫ ಉಪಾಧ್ಯಕ್ಷರಿಗೆ, ಮತ್ತು ಶೇ. ೨೦ ಸದಸ್ಯರಿಗೆ — ಉಳಿದದ್ದು ಸಮಾಜ ಸೇವೆಗೆ ಮೀಸಲು. 
- ಬಂಡವಾಳ ಹೂಡಿಕೆ: ಶೂನ್ಯ! 
- ಪ್ರವರ್ತಕರು ಮತ್ತು ಪ್ರಾಯೋಜಕರು: “ಅವ್ಯಕ್ತ ಬುಲೆಟಿನ್” – ಶುಭಾಕರ ಹೆಗ್ಗಡೆ. , ಸಹ ಪ್ರಾಯೋಜಕರು – ಭಾರತೀಯ ಜೈನ ಮಿಲನ್ ಮತ್ತು ಸಕಲ ಜೈನ ಸಂಘ ಸಮುಸ್ತೆಗಳು ಮತ್ತು ಸಕಲ ಜಿನಬಂದುಗಳು 
- ದೇವರ ಅನುಗ್ರಹ ಮತ್ತು ಜನರ ಅಭಿಪ್ರಾಯ ಮೇರೆಗೆ ಅಗತ್ಯ ಬದಲಾವಣೆಗಳು ಸಾಧ್ಯ. 
ಅಭಿಯಾನದ ಶಾಖೆಗಳು / ಉಪ ಅಭಿಯಾನಗಳು:
೧. ಜಿನಾಲಯ ಅಭಿಯಾನ
೨. ಶ್ರದಾಂಜಲಿ ಅಭಿಯಾನ
೩. ಜೀವನ ಚರಿತ್ರೆ ಅಭಿಯಾನ
೪. ಸಾಧಕ ವ್ಯಕ್ತಿ ಅಭಿಯಾನ
೫. ವ್ಯಾಪಾರ ಅಭಿಯಾನ
೬. ಅಡಿಕೆ ಕೃಷಿ ಅಭಿಯಾನ
೭. ತೆಂಗು ಕೃಷಿ ಅಭಿಯಾನ
೮. ಗೇರು ಕೃಷಿ ಅಭಿಯಾನ
೯. ಕಾಳುಮೆಣಸು ಕೃಷಿ ಅಭಿಯಾನ
೧೦. ರಬ್ಬರ್ ಕೃಷಿ ಅಭಿಯಾನ
೧೧. ಉದ್ಯೋಗಿಗಳ ಅಭಿಯಾನ
೧೨. ಉದ್ಯಮಿಗಳ ಅಭಿಯಾನ
೧೩. ಟೀಚರ್ಸ್ ಅಭಿಯಾನ
೧೪. ಚಾಲಕರ ಅಭಿಯಾನ
೧೫. ಟೈಲರ್ ಅಭಿಯಾನ
೧೬. ಮಹಿಳಾ ಅಭಿಯಾನ
೧೭. ವಸ್ತ್ರ ಅಭಿಯಾನ
೧೮. ಚಿನ್ನ ಅಭಿಯಾನ
೧೯. ಫೋಟೋಗ್ರಾಫರ್ ಅಭಿಯಾನ
೨೦. ಲೇಖಕರ ಅಭಿಯಾನ
೨೧. ಭಾಷಾಗಗರ ಅಭಿಯಾನ
೨೨. ಡಾಕ್ಟರ್ಸ್ ಅಭಿಯಾನ
೨೩. ನ್ಯಾಯವಾದಿಗಳ ಅಭಿಯಾನ
೨೪. ಅಡುಗೆ ಅಭಿಯಾನ
೨೫. ಮದುವೆ ಅಭಿಯಾನ
೨೬. ಮನೆ ಅಭಿಯಾನ
೨೭. ವಿದ್ಯಾರ್ಥಿ ಅಭಿಯಾನ
೨೮. ರಾಜಕಾರಿಣಿಗಳ ಮತ್ತು ಜೈನ ಪುರೋಹಿತರ ಅಭಿಯಾನ – ಇತ್ಯಾದಿ – ಮುಂದುವರಿಯುವುದು 
ಪ್ರತಿಯೊಂದು ಕ್ಷೇತ್ರದಲ್ಲಿಯೂ ಜೈನರ ಶಕ್ತಿಯನ್ನು, ನೈತಿಕತೆಯನ್ನು ಮತ್ತು ಸಹಕಾರವನ್ನು ಒಟ್ಟುಗೂಡಿಸುವ ಗುರಿಯಿದೆ.
ಅಂತಿಮ ಸಂದೇಶ:
ಈ ಅಭಿಯಾನವನ್ನು ಯಾವುದೇ ಒಬ್ಬ ವ್ಯಕ್ತಿ ನಡೆಸುತ್ತಿಲ್ಲ.
“ಈ ಕೆಲಸವನ್ನು ನಾನು ಮಾಡುತ್ತಿಲ್ಲ – ಜಿನೇಶ್ವರನೇ ಮಾಡುತ್ತಿದ್ದಾರೆ”
ಎಂಬ ಭಾವನೆಯೊಂದಿಗೆ, ಎಲ್ಲರೂ ಸೇರಿ ಈ ಕಾರ್ಯವನ್ನು ಮುನ್ನಡೆಸೋಣ.
ನಾವು ಮಾನವರನ್ನು ನೋಡುವ ಬದಲು, ಪ್ರತಿಯೊಬ್ಬರಲ್ಲಿ ಜಿನೇಶ್ವರನ ಪ್ರಕಾಶವನ್ನು ಕಾಣುವ ಹಂಬಲದೊಂದಿಗೆ ನಡೆಯೋಣ.
ಅದಾಗ ಮಾತ್ರ ಈ ಅಭಿಯಾನ ಸಾರ್ಥಕ.
ಸಕಲ ಜಿನ ಬಂದುಗಳಿಗೆ ಅವ್ಯಕ್ತ ಪ್ರಣಾಮಗಳು
ಜೈನರ ಏಕತೆ – ಸಮಾಜದ ಶಕ್ತಿ – ಧರ್ಮದ ಪ್ರೇರಣೆ – ಬದುಕಿನ ದಿಕ್ಕು.