Mens Bulletin – ಪುರುಷರ ಬುಲೆಟಿನ್

ಶೇರ್ ಮಾಡಿ

ಪ್ರತಿ ಮಾನವರು ತನ್ನ ಸ್ಥಾನ ಮಾನ ಘನತೆ ಗೌರವ ಮುಂತಾದುಗಳನ್ನು ಎತ್ತರದಿಂದ ಎತ್ತರಕ್ಕೆ ಕೊಂಡು ಹೋಗುವುದರಲ್ಲಿ ಸದಾ ವಿಬ್ಬಿಣ್ಣ ಮಜಲುಗಳತ್ತ ಗಮನ ಹರಿಸುತ್ತ ದಾಪುಗಾಲಿಡುತ್ತಿರುತಾನೆ. ಕಣ್ಣಿಗೆ ಕಾಣುವ ಪ್ರಪಂಚದಲ್ಲಿ – ಅರಮನೆಯಂಥ ಮನೆ, ವಿದೇಶಿ ದುಬಾರಿ ಬೆಲೆಯ ಕಾರುಗಳು, ಅದ್ದೂರಿ ಸಭೆ ಸಮಾರಂಭಗಳು ಒಂದೇ ಎರಡೇ – ನೂರಾರು ಮಾಡುತಿರುತಾನೆ. ಈ ನೆಲೆಯಲ್ಲಿ ಇನ್ನು ಒಂದು ಹೆಜ್ಜೆ ಮುಂದೆಹೋದಾಗ ನಮ್ಮ ಕಣ್ಣಿಗೆ ಕಾಣುವುದೆ ಪುರುಷರ ಬುಲೆಟಿನ್. ದೀರ್ಘಕಾಲಿಕ, ಸರ್ವಕಾಲಿಕ,ಪ್ರತಿ ಮಾನವರಲ್ಲಿ ಮನದಲ್ಲಿ ನೆಲೆ ನಿಂತಿರುವ ರಾಜರಿಗೆ ಸಲ್ಲತಕ್ಕ ಗೌರವ ಪಡೆಯಬಲ್ಲ ಅಂತರ್ಜಾಲ ಪ್ರವೇಶಮಾಡಿ – ಪುರುಷರ ಬುಲ್ಲೆಟಿನಿನಲ್ಲಿ ವಿರಾಜಮಾನವಾಗುವದೇ ಏಕಮಾತ್ರ ಜನಸಾಮಾನ್ಯರಿಗೂ ಎಟಕಬಲ್ಲ ಅಚ್ಚುಮೆಚ್ಚಿನ ಸ್ಥಳ ನಮ್ಮಗೆ ರತ್ನಗಂಬಳಿ ಸ್ವಾಗತ ನೀಡುತಿದೆ. ಬಳಸುವತ್ತ ಗಮನ ಹರಿಸೋಣ.
ಇದಕ್ಕೆ ಏನು ಮಾಡಬೇಕು?
ಹೆಸರು ಭಾವಚಿತ್ರ ಊರು ಉದ್ಯೋಗ ಬೇಕಾದಲ್ಲಿ ಮೊಬೈಲ್ ನಂಬರ್ -ಪುರುಷರ ಬುಲ್ಲೆಟಿನಿನಲ್ಲಿ ಪ್ರಕಟಿಸುವುದು ಸಾಮಾನ್ಯರಿಗೆ – ಅಸಾಮಾನ್ಯರಿಗೆ ಆದರೆ – ವಿಭಿನ್ನ ಸ್ಥಾನ ಮಾನಗಳ ಭಾವಚಿತ್ರದೊಂದಿಗೆ ಸವಿಸ್ತಾರವಾಗಿ ಅವರ ಬದುಕಿನ ಬಗ್ಗೆ ವಿವರಣೆ ಪ್ರಕಟಿಸಿದರೆ – ಬುಲೆಟಿನ್ – ಅರಸರ ಕಾಲದಲ್ಲಿದ್ದ ಡಂಗುರ ಸಾರುವ ಕೆಲಸವನ್ನು ಸದಾ ಮಾಡುವ ಅತ್ಯುತಮ ಸಾಧನ – ಸದಾ ಸ್ವಾಗತ ಕೋರುತಿದೆ
ಇದು ಜನ ಸಾಮಾನ್ಯರಿಗೂ ಬೇಕೇ
ಚಟುವಟಿಕೆಯಿಂದಿರುವುದು ಜೀವಂತ ಪ್ರಾಣಿಯ ಲಕ್ಷಣ – ಅದೇ ರೀತಿಯಲ್ಲಿ ನಮ್ಮ ಇರುವಿಕೆಯನ್ನು ಅತ್ಯಂತ ಸೂಕ್ತ ಸ್ಥಳದಲ್ಲಿ ವ್ಯಕ್ತಪಡಿಸುವುದು ನಮ್ಮ ಕರ್ತವ್ಯ . ಮಾಡೋಣ .
ಇದು ಯುವಜನಾಂಗಕ್ಕೆ ಹೊರತು ನಮಗಲ್ಲ ?
ದೇಹಕ್ಕೆ ಮಾತ್ರ – ವಯೋಮಿತಿಯ ಕಾಟ – ಆದರೆ ವಾಹನ ಚಾಲಕನಿಗಿಲ್ಲ – ಅವನು ಅಪಾರ ಅನುಭವದ ಮುತ್ಸದ್ದಿ ಯುವಕ. ಸಮಾಜ ಮತ್ತು ಪ್ರಪಂಚ ಸದಾ ತನ್ನ ವೇಗವನ್ನು ವೃದಿಸುತ್ತ ಹೋಗುತಿರುತದೆ. ಅದಕ್ಕೆ ಅನುಗುಣವಾಗಿ ನಾವು ನಮ್ಮ ವೇಗವನ್ನು ಹೆಚ್ಚಿಸಿಕೊಳ್ಳದಿದ್ದರೆ ಮರದಿಂದ ಬಿದ್ದ ಮಂಗನಂತಾಗಿ – ಚಟುವಟಿಕೆ ಇಲ್ಲದೆ – ಖಿನ್ನತೆಗೊ ಮನೋವ್ಯಾಕುಲತೆಗೊ ಹೋಗುವ ಸಾಧ್ಯತೆ ವಿಪುಲವಾಗಿರುವುದರಿಂದ ಪ್ರವಾಹದ ಜೊತೆಗೆ ಈಜಿ ನಮ್ಮ ಇಚ್ಛಾಶಕ್ತಿಗೆ ಅನುಕೂಲವಾದ ದಡ ಸೇರೋಣ.

See also  ಬದುಕಿನಲ್ಲಿ ಸನ್ಮಾರ್ಗಿಗಳು ಹೆಚ್ಚು ಕಷ್ಟ ಪಡುವುದಕ್ಕೆ ಕೆಲವು ಪರಿಹಾರಗಳು

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?