ದೇವಾಲಯ – ಅಂದು – ಇಂದು – ಮುಂದು

ಶೇರ್ ಮಾಡಿ

ದೇವರು ಇರುವ ಸ್ಥಳ ದೇವಾಲಯ. ದೇವರು ಯಾರು – ಹುಟ್ಟು ಸಾವಿನ ಪ್ರಯಾಣದಲ್ಲಿ – ಸುಖ ಶಾಂತಿ ನೆಮ್ಮದಿಯ ಬದುಕಿನ ಕಲೆಯನ್ನು ತಿಳಿಸಿ – ಸ್ವತಃ ಬದುಕಿ ತೋರಿಸಿದ ಮಾನವ ಕುಲಕೋಟಿಗೆ ಆದರ್ಶ ವ್ಯಕ್ತಿ. ಅಂತಹ ವ್ಯಕ್ತಿಯ ಮರಣಾನಂತರ ಆತನ ಮೂರ್ತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ – ಮಣ್ಣಿನ,ಕಲ್ಲಿನ, ಇತರ ಲೋಹದ -ಯಾವುದಾದರು ಒಂದು ಮೂರ್ತಿಗಳನ್ನು ಇಟ್ಟ ಸ್ಥಳ ದೇವಾಲಯ – ಆ ಮೂರ್ತಿಯನ್ನು ಸದಾ ನೋಡುತ ಆ ವ್ಯಕ್ತಿಯಂತ ಬಾಳು ಮಾನವರದ್ದು ಆಗಬೇಕೆಂಬ ಅಂದಿನ ಅಂಬೋಣ – ಆ ಮೂರ್ತಿಗೆ ವಿವಿಧ ರೀತಿಯಲ್ಲಿ – ಹೋಮ ಹವನ ಪೂಜೆ – ಮಾಡಿದರೆ ಸಕಲ ಪ್ರಾಪ್ತಿ ಎಂಬ ಇಂದಿನ ಅಂಬೋಣ – ಎರಡನ್ನು ತಾಳೆ ಮಾಡಿ ನೋಡಿದಾಗ ಮತ್ತು ಈ ಬಗ್ಗೆ ಮೌನ ವಹಿಸಿರುವ ಶಾಲಾ ಶಿಕ್ಸಣವೆಂಬ ಅಕ್ಷರ ಜ್ಞಾನದ ಪರಿಣಾಮವಾಗಿ – ದೇಹದ ಒಳಗಿರುವ ದೇವರನ್ನು ಮರೆತು ದೇವಾಲಯದ ಒಳಗಿರುವ ದೇವರನ್ನು ಮರೆತು – ಬಾಳುವ ಅವನತಿಯ ಅಂತಿಮಘಟ್ಟ ತಲುಪವ ಮಾನವ ಕುಲಕ್ಕೆ ಮರಣ ಮೃದಂಗ – ದೇವರಿಂದಲೋ ಅಥವಾ ಪ್ರಕೃತಿ ಯಾ ಇನ್ನಿತರ ಕಾರಣಗಳಿಂದ ತನ್ನ ಅಟ್ಟಹಾಸ ಬಟ್ಟಬಯಲಾಗಿರುವುದು ಪ್ರಸ್ತುತ ನಮ್ಮ ಬದುಕಿನ ಸ್ಥಿತಿ.
ಉತ್ತಮ ಮಾನವರನ್ನು ತಯಾರು ಮಾಡುವ ಕಾರ್ಖಾನೆ ದೇವಾಲಯ ಎಂಬುದನ್ನು ಮರೆತು ಶಿಕ್ಷಣಾಲಯ ಹುಟ್ಟು ಹಾಕಿ ದಾನವರನ್ನು ತಯಾರು ಮಾಡುತಿರುವುದರ ಪರಿಣಾಮ ಪ್ರಪಂಚದ ಪ್ರತಿ ದೇಶಗಳು ಅತಿ ಹೆಚ್ಚಿನ ಸಂಪನ್ಮೂಲವನ್ನು ರಕ್ಸಣೆಗಾಗಿ ವ್ಯಯ ಮಾಡುತಿರುವುದು ನಮ್ಮ ಅಂತ್ಯ ನಾವೇ ಕಾಣುವ ಅತಿ ಬುದ್ದಿವಂತಿಕೆ.
ಏರು ಗತಿಯಲ್ಲಿರುವ ರಕ್ಷಣಾ ವೆಚ್ಚ ಮತ್ತು ಏರು ಗತಿಯಲ್ಲಿರುವ ಪೂಜೆ ಪುರಸ್ಕಾರ , ಹೋಮ ಹವನ , ದೇವಾಲಯಗಳಲ್ಲಿ ನಡೆಯುತಿರುವ ದುಬಾರಿ ವೆಚ್ಚಗಳು ಒಂದಕ್ಕೊಂದು ವಿರುದ್ಧ ದಿಕ್ಕಿನಲ್ಲಿ ಜಾಗತಿಕ ನೆಮ್ಮದಿಗಾಗಿ ಸೆಣಸುತಿವೆ. ವಿಶ್ವ ಶಾಂತಿಗಾಗಿ ಸಂಸ್ಥೆಯೊಂದನ್ನು ಹೂತು ಹಾಕಿ – ಶಾಂತಿ ನೆಮ್ಮದಿ ಪ್ರಪಂಚದಲ್ಲಿ ಶಾಶ್ವತ ನೆಲೆಯಾಗಲು ಪ್ರಯತ್ನ ಮುಂದುವರಿಯುತಿದೆ.
ದೇವರಿಲ್ಲದ ದೇವಾಲಯ – ಶಿಕ್ಸಣ ಕೊಡದ ಶಿಕ್ಸಣಾಲಯ – ಆಡಳಿತವಿಲ್ಲದ ದೇಶ – ಜ್ಞಾನದ ಕಣ್ಣಿಗೆ ಗೋಚರಿಸುತಿದೆ.
ಹೆಣ್ಣಿಗಾಗಿ ರಾಮಾಯಣ – ರಾಜ್ಜಕ್ಕಾಗಿ ಮಹಾಭಾರತ – ಸ್ವಾರ್ಥಕ್ಕಾಗಿ ಕಲಿಯುಗ ಬಲಿಯಾಗುವ ಲಕ್ಷಣಗಳಿವೆ. ಸ್ವ ಪ್ರತಿಷ್ಠೆಯ ತುತ್ತ ತುದಿಯಲ್ಲಿ ನಿಂತು ರಣ ಕಹಳೆ ಉಡುತಿರುವವರು ಜ್ವಾಲಾಗ್ನಿಯಾಗಿ ಜಗತ್ತನ್ನೇ ಸುಡುವ ಭಯ ಕಾಡುತಿದೆ
ಅಂದಿನ ದೇವಾಲಯ ಇಂದಿನ ಮುಂದಿನ ದೇವಾಲಯವಾಗುವುದೊಂದೇ ಪರಿಹಾರ ಮಂತ್ರ ಮಾನವ ಕುಲಕೋಟಿ ಒಂದಾಗಿ ಪಠಣ ಮಾಡುವ ಕಾಲ ಸನ್ನಿಹಿತವಾಗಿದೆ. ಮಾನವರ ಮನೋ ಸ್ಥಿತಿಯನ್ನು ಕೋರೋಣ ಜಗತ್ತಿಗೆ ಸಾರಿ ಸಾರಿ ಹೇಳುತ್ತಿದೆ.
ಆಂತರಿಕವಾಗಿ ದೂರವಿದ್ದು ಬಾಹ್ಯವಾಗಿ ಒಂದಾಗಿದ್ದೇವೆಂದು ನಟಿಸುವ ನಟನೆಗೆ ಇತಿಶ್ರೀ ಹಾಡೋಣ
. ಇದು ಎಲ್ಲಿಂದ ಆರಂಭವಾಗಬೇಕು – ಮನದಿಂದ – ಮನೆಯಿಂದ – ಊರಿನಿಂದ – ರಾಜ್ಜದಿಂದ – ದೇಶಗಳಿಂದ – ಮಾನವಕುಲದಿಂದ – ನಮ್ಮ ಅರಿವು – ಮಾನವರ ಉಳಿವು.

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?