ದಾನದ ಮರ್ಮವನ್ನರಿಯದ ದಾನಿ ಇರುತಿರೆ
ಭಿಕ್ಷೆಯ ಮರ್ಮವನ್ನರಿಯದ ಭಿಕ್ಸುಕ ಇರುತಿರೆ
ದಾನ ದರೋಡೆಕೋರನಿಗೆ ತೆರೆದಿಟ್ಟ ಅಂಗಡಿಯೆಂದ ………………………ಅವ್ಯಕ್ತ
ದೇವಾಲಯಗಳಿಗೆ ದೈವಾಲಯಗಳಿಗೆ ಸಾಮಾಜಿಕ ಮತ್ತು ಧಾರ್ಮಿಕ ಕೆಲಸ ಕಾರ್ಯಗಳಿಗೆ ಕಷ್ಟದಲ್ಲಿರುವವರಿಗೆ – ಇತ್ಯಾದಿ ಅವಶ್ಯಕತೆಯನ್ನರಿತು ಸ್ಪಂದಿಸಿದಾಗ ಅದು ದಾನವೆಂದು ಕರೆಯಲ್ಪಡುತದೆ. ದೇವ ಮಾನವರು ಮತ್ತು ಮಾನವರು ಇರುವ ಸಮಾಜದಲ್ಲಿ ದಾನ ತನ್ನ ಪವಿತ್ರತೆಯನ್ನು ಉಳಿಸಿಕೊಂಡು ದಾನವರು ಇರುವಂಥ ಈ ಕಾಲದಲ್ಲಿ ದಾನ ಮಾಡುವ ವ್ಯಕ್ತಿ ಸ್ವಾರ್ಥಿಗಳ ಸೋಮಾರಿಗಳ ದರೋಡೆಕೋರ ಪಾಲಾಗದಂತೆ ನೋಡಿಕೊಳ್ಳುವುದು ಬಹಳ ಕಷ್ಟ. ನಾವು ದಾನಿಗಳಿಂದ ಸಹಕಾರ ಬಯಸುವವರು – ಊರಿಗೆ ಮಾತ್ರವಲ್ಲ ಸಮಾಜದೊಂದಿಗೆ ಪ್ರಪಂಚಕ್ಕೆ ಆದರ್ಶವಾಗುವ ರೀತಿಯಲ್ಲಿ ನಮ್ಮ ಸಮಾಜ ಮುಖಿ ಕೆಲಸ ಕಾರ್ಯಗಳು ಮುಂದುವರಿತಿದ್ದಲ್ಲಿ – ಹಣದ ಹೊಳೆ ಹರಿದು ಬರುವುದು ಜ್ವಲಂತ ನಿದರ್ಶನಗಳಿಂದ ನಮ್ಮ ಅರಿವುಗೆ ಬಂದಿರುತದೆ.
ಆದುದರಿಂದ ದಾನಿಗಳ ಬುಲೆಟಿನ್ ಇಂತಹ ಚಟುವಟಿಕೆಗಳ ಬೆನ್ನಹಿಂದೆ ನಿಂತು ತನ್ನ ಜವಾಬ್ದಾರಿ nrvaisuthide
ದೈವಸ್ಥಾನ ದೇವಸ್ಥಾನಗಳ ಭಾವಚಿತ್ರದೊಂದಿಗೆ ದಾನಿಗಳು ಕೊಟ್ಟ ಹಣದ ಸಂಪೂರ್ಣ ಮಾಹಿತಿ ಇಲ್ಲಿ ಕೊಡಲು ಅವಕಾಶ ಕಲ್ಪಿಸಲಾಗಿದೆ. ಆದುದರಿಂದ ದಾನಿಗಳ ಪರಿಚಯದ ಜೊತೆಗೆ ಸಮಾಜಮುಖಿ ಕೆಲಸ ಕಾರ್ಯಗಳ ಜಾಗತಿಕ ಪ್ರಚಾರ ಸಿಗುತದೆ.
ಧಾರ್ಮಿಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತೊಡಗುವವರು ದಾನ ಕೊಡುವವರ ಭಾವಚಿತ್ರದೊಂದಿಗೆ ಸಂಪೂರ್ಣ ಸಂಸಾರ ಪರಿಚಯ ಮಾಡುವ ವ್ಯವಸ್ಥೆ ಕಲ್ಪಿಸಿದ್ದು – ಇದಕ್ಕೆ ಕನಿಷ್ಠ ವೆಚ್ಚ ನಿಗದಿಪಡಿಸಿ ಐವತ್ತು ಪ್ರತಿಶತ ಸಂಬಧಪಟ್ಟವರಿಗೆ ಕೊಡುವ ಅವಕಾಶ ಇರುತದೆ.
ದಾನಿಗಳ ಕೊಡುಗೆ ದಾನದ ಮಹತ್ವ ಅರಿತು ಬಳಸುವವರಿಗೆ ಮಾತ್ರ ದೊರಕುವಂತೆ ಆಗುವ ಹೆಬ್ಬಯಕೆ ನಮ್ಮದಾಗಿದೆ.