ನರ ಪ್ರಾಣಿಗಳನ್ನು ಭಕುತರನ್ನಾಗಿಸದೆ
ದೈವ ದೇವಸ್ಥಾನಗಳ ಜೀರ್ಣೋದ್ದಾರ ಮಲ್ಪರೆ
ಜನರಿಗೆ ಭೂಮಿಗೆ ಬರವಾಗಿಹ ನೋಡ ……………………….ಅವ್ಯಕ್ತ
ದೈವ ದೇವರು ಮತ್ತು ಬದುಕು ಒಂದೇ ನಾಣ್ಯದ ಎರಡು ಮುಖಗಳು. ನಾವು ನಮ್ಮ ಸಂಸ್ಕೃತಿ ಸಂಸ್ಕಾರಗಳನ್ನು ಮರೆತು ವಿದೇಶಿ ವಿದ್ಯೆ ಆಡಳಿತ ಬದುಕು ಇತ್ಯಾದಿಗಳ ಅನುಕರಣೆ ಮಾಡುತ್ತ ಮುಂದೆ ಮುಂದೆ ಸಾಗಿ ಹುಟ್ಟು ಮಾತ್ರ ಸ್ವದೇಶಿ ಬದುಕು ವಿದೇಶಿ ಆದುದರ ಪ್ರತಿಫಲ ಮರದಿಂದ ಬಿದ್ದ ಮಂಗನ ಬದುಕು ನಮ್ಮದಾಗಿದೆ.
ದೈವದ ದೇವರ ಬದುಕಿನ ಅರಿವು ಪ್ರತಿಯೊಬ್ಬ ಪ್ರಜೆಯಲ್ಲಿ ಜಾಗ್ರತಿಗೊಳಿಸಿ ಬಾಳಿನ ಪಾಠವನ್ನು ತೋರಿಸಬೇಕಾದ ವಿದ್ಯೆ ಮಾನವ ಜನಾಂಗವನ್ನು ಮುಗ್ದ ಮಕ್ಕಳಿಗೆ ಕಣ್ಣಿಗೆ ಬಟ್ಟೆ ಕಟ್ಟಿ ಯಾವನದಲ್ಲಿ ಕಣ್ಣಿನ ಬಟ್ಟೆ ಬಿಚ್ಚಿ ಕಾಡಿನಲ್ಲಿ ಬಿಡುವ ಸ್ಥಿತಿ ನಿರ್ಮಾಣವಾಗಿದೆ ಎನ್ನುವ ಬಹು ಜನರ ಅಭಿಪ್ರಾಯದತ್ತ ಚಿಂತನ ಮಂಥನ ಅನುಷ್ಠಾನದತ್ತ ಗಮನಹರಿಸಬೇಕಾಗಿದೆ.
ನಡೆ ನುಡಿ ನಡವಳಿಕೆಯಲ್ಲಿ ಸದಾ ಮಾನವರಲ್ಲಿ ಜೀವರಾಶಿಗಳಲ್ಲಿ ದೇವರನ್ನು ಕಾಣುವದೇ – ಪ್ರತಿಯೊಬ್ಬ ಮಾನವ ಮಾಡಬೇಕಾದ ನಿಜವಾದ ದೇವರ ಪೂಜೆ. ಇಂತಹ ಉನ್ನತ ಸ್ಥಿತಿಯಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ನಮ್ಮ ಪೂರ್ವಜರು ಆರಿಸಿಕೊಂಡ ಸ್ಥಳವೇ ದೇವಾಲಯ – ದೇವರು ಇರುವ ಸ್ಥಳ. ಹೆಚ್ಚಿನ ಬದುಕಿನ ಸಮಯವನ್ನು ದೇವಾಲಯಗಳಲ್ಲಿ ಮಾನವರು ಉಪಯೋಗ ಮಾಡುವ ಸಲುವಾಗಿ ವಿಭಿನ್ನ ರೀತಿಯ ಪೂಜಾ ಪದ್ದತಿಗಳು ಹುಟ್ಟಿಕೊಂಡು – ದೇವಾಲಯಗಳಿಗೆ ಆದಾಯಕ್ಕೂ ಮೂಲವಾಗಿ – ದೇವಾಲಯವನ್ನು ಸುಸ್ಥಿತಿಯಲ್ಲಿಡಲು ಸಹಕಾರಿಯಾಗಿವೆ. ದೇವಾಲಯಕ್ಕೆ ಆದಾಯವನ್ನು ಒದಗಿಸುವುದು ಅಂದು ರಾಜರು ಇಂದು ಸರಕಾರದ ಆದ್ಯ ಕರ್ತವ್ಯವಾಗಿದೆ.
ದೇವರು ದೈವ ಆಡಳಿತ ವಿದ್ಯೆ ಶಾಸಕಾಂಗ ಕಾರ್ಯಂಗ ನ್ಯಾಯಾಂಗ ಅರಸು ಪದ್ಧತಿ ಪ್ರಜಾಪದ್ಧತಿ – ಇತ್ಯಾದಿಗಳ ಮರ್ಮ ಅರಿತು ಬಾಳುವ ಸಮಾಜ ನಮ್ಮದು ಆದಾಗ ಮಾತ್ರ ನಮ್ಮ ಬೆನ್ನಿನ ಕೊಳೆ ಮನಗಂಡು ಶುಚಿ ಮಾಡಿ ಮಾನವ ಬದುಕು ನಮ್ಮದಾಗಬಹುದು. ನಾವು ಕನಸ್ಸಿನಲ್ಲಿಯೂ ಈ ವಿಷಯದ ಬಗ್ಗೆ ಚಿಂತನೆ
ಮಾಡದಿರುವುದು ಮಾನವ ಕುಲಕೋಟಿಯ ಅಂತ್ಯಕ್ಕೆ ನಾಂದಿ.
ಮಾನವ ತನ್ನ ಒಳಗಿರುವ ದೇವರನ್ನು ಅರಿತು – ಅದಕ್ಕೆ ಪೂಜೆ ಪುರಸ್ಕಾರ ಮಾಡುವ ಅತ್ಯುನ್ನತ ಸ್ಥಾನಕ್ಕೆ ಏರುವ ಹಂಬಲ ನಮ್ಮಲ್ಲಿ ಹೆಮ್ಮರವಾಗಿ ಬೆಳೆದಾಗ – ಪೂಜ್ಜನಿಯ ಬದುಕು ನಮ್ಮದಾಗುತದೆ. ಕನಿಷ್ಠ ಈ ಬದುಕು ಪೂಜೆ ಮಾಡುವ ಅರ್ಚಕ ಅಮುದಾಯದಲ್ಲಿ ಕೂಡ ೫೦ ಪ್ರತಿಶತ ಕಾಣದಿರುವುದು ವಾಸ್ತವ ಸಮಾಜದ ಘನ ಘೋರ ಅಪರಾಧ.
ಬಾಹ್ಯ ಪೂಜೆ ಮಾಡಲು ದೇವರು ದೇವಾಲಯದ ಅವಶ್ಯಕತೆಯಿದೆ. ಆಂತರಿಕ ಪೂಜೆ ಮಾಡಲು ಯಾವುದು ಬೇಕಾಗಿಲ್ಲ. ಮಾನವರಾದ ನಾವು ನಮ್ಮ ಬದುಕಿನಲ್ಲಿ ಯಾವುದೇ ಕೆಲಸ ಕಾರ್ಯಗಳನ್ನು ಮಾಡುತ್ತಾ ನಿತ್ಯ ನಿರಂತರ ಪೂಜೆ ಮನದಲ್ಲಿ ಮಾಡಲು ಸಾಧ್ಯವಿದೆ. ಈ ಸತ್ಯವನ್ನು ಅರಿತು ಬಾಳುವ ಮಾನವ ಬದುಕು ನಮ್ಮದಾಗಲಿ.