ಸಮಗ್ರ ಕೃಷಿ ಅಭಿಯಾನ

ಶೇರ್ ಮಾಡಿ

ಕೃಷಿಯನ್ನು ಲಾಭದಾಯಕದ ಜೊತೆಗೆ ಸಮಗ್ರ ಹಾಗೂ ತಾಂತ್ರಿಕ ಸ್ನೇಹಿಯನ್ನಾಗಿಸಲು ಕೃಷಿ ಇಲಾಖೆ ಇತರೆ ಇಲಾಖೆಗಳ ಸಹಕಾರದೊಂದಿಗೆ ರೈತರ ಮನೆಗೆ ಮಾಹಿತಿ ಹಾಗೂ ಸೌಲಭ್ಯ ನೀಡಲು ‘ಕೃಷಿ ಅಭಿಯಾನ’ ಕಾರ್ಯಕ್ರಮ ಹಮ್ಮಿಕೊಂಡಿದೆ.ಜನಸಂಖ್ಯೆಗೆ ಆಹಾರಭದ್ರತೆ ಮತ್ತು ಲಭ್ಯ ಸಾಗುವಳಿ ಜಮೀನಿನಲ್ಲಿ ಗರಿಷ್ಠ ಕೃಷಿ ಉತ್ಪಾದನೆ, ಬೆಳೆ ವೈವಿದ್ಧೀಕರಣ, ವ್ಯವಸಾಯ ವೆಚ್ಚ ಕಡಿತ, ಕೃಷಿಯೊಂದಿಗೆ ಪೂರಕ ಉಪಕಸುಬುಗಳಾದ ಪಶುಸಂಗೋಪನೆ, ರೇಷ್ಮೆ ಕೃಷಿ, ಮೀನುಗಾರಿಕೆ ಮುಂತಾದ ಚಟುವಟಿಕೆಗಳನ್ನು ನಡೆಸಲು ರೈತರಿಗೆ ಮಾಹಿತಿ ಹಾಗೂ ಪ್ರೋತ್ಸಾಹ ನೀಡುವುದು ಕೃಷಿ ಅಭಿಯಾನದ ಉದ್ದೇಶ
ರೈತರು ಮಣ್ಣಿನ ಪರೀಕ್ಷೆ ಮಾಡಿಸಿಕೊಂಡು ಮಣ್ಣಿನ ಗುಣಕ್ಕೆ ತಕ್ಕ ಬೆಳೆಗಳನ್ನು ಬೆಳೆಯಬೇಕು. ಬೇಸಾಯಕ್ಕೆ ಮೊದಲು ಕೃಷಿ ಅಧಿಕಾರಿಗಳನ್ನು ಭæೕಟಿ ಮಾಡಿ ಸಲಹೆಯಂತೆ ಬಹುಬೆಳೆ ಪದ್ಧತಿಯಲ್ಲಿ ಬೇಸಾಯ ಕæೖಗೆತ್ತಿಕೊಂಡರೆ ಉತ್ತಮ ಬೆಳೆ ಬೆಳೆದು ಲಾಭ ಗಳಿಸಬಹುದು
ಭೂಮಿಯ ಫಲವತ್ತತೆ ಕಾಪಾಡುವ ಸೂಕ್ಷ್ಮಾಣುಗಳನ್ನು ಸಂರಕ್ಷ ಣೆ ಮಾಡಿಕೊಂಡು ಮಣ್ಣಿನ ಆರೋಗ್ಯ ಕಾಪಾಡಿಕೊಳ್ಳಬೇಕು. ಇದಕ್ಕಾಗಿ ಸಾವಯವ ಬೇಸಾಯ ಮಾಡಬೇಕು. ರಾಸಾಯನಿಕ ಗೊಬ್ಬರ ಹೆಚ್ಚಾದ ಬಳಕೆ ನಿಲ್ಲಿಸಬೇಕು. ಕೊಟ್ಟಿಗೆ ಗೊಬ್ಬರ, ಹಸಿರೆಲೆ, ಎರೆಹುಳು ಗೊಬ್ಬರ ಬಳಕೆ ಮಾಡಬೇಕು. ಈ ಮೂಲಕ ಮಣ್ಣಿನ ಆರೋಗ್ಯವನ್ನು ಉತ್ತಮ ಪಡಿಸಿಕೊಂಡರೆ ಉತ್ತಮ ಫಸಲು ಬೆಳೆಯಬಹುದು. ಮನುಷ್ಯರಾದ ನಾವು ಆರೋಗ್ಯ ಸರಿ ಇಲ್ಲದಿದ್ದರೆ ಹೇಗೆ ವೈದ್ಯರ ಬಳಿ ಹೋಗಿ ಪರೀಕ್ಷೆ ನಂತರ ವೈದ್ಯರು ಶಿಫಾರಸು ಮಾಡುವ ಔಷಧ, ಮಾತ್ರೆಗಳನ್ನು ಬಳಸಿ ಆರೋಗ್ಯ ಸರಿಪಡಿಸಿಕೊಳ್ಳುತ್ತೇವೆಯೋ ಹಾಗೆಯೇ ಮಣ್ಣು ಪರೀಕ್ಷೆ ಮಾಡಿಸಿ ಯಾವ ಗೊಬ್ಬರ ಹಾಕಬೇಕು ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎಂಬುದನ್ನು ಕೃಷಿ ತಜ್ಞ ಅಧಿಕಾರಿಗಳಿಂದ ತಿಳಿದುಕೊಂಡು ಬಳಕೆ ಮಾಡಬೇಕು
ಮಣ್ಣಿಗೆ ಹೊಂದಿಕೆಯಾಗದ ರಸಗೊಬ್ಬರ ಬಳಸಿದರೆ ಸೂಕ್ಷ್ಮಾಣು ಜೀವಿಗಳು ಸತ್ತು ಹೋಗಿ ಮಣ್ಣು ಸತ್ವ ಕಳೆದುಕೊಳ್ಳುತ್ತದೆ. ಹಾಗಾಗಿ ರೈತರು ಕಡ್ಡಾಯವಾಗಿ ತಮ್ಮ ಭೂಮಿಯ ಮಣ್ಣನ್ನು ಪರೀಕ್ಷೆಗೆ ಒಳಪಡಿಸಿ ಮಣ್ಣಿಗೆ ಹೊಂದಿಕೊಳ್ಳುವ ಬೆಳೆಗಳನ್ನು ಬೆಳೆಯಬೇಕು. ಪ್ರಧಾನ ಮಂತ್ರಿ ಫಸಲ್‌ ವಿಮಾ ಯೋಜನೆ ಸದ್ಬಳಕೆ ಮಾಡಿಕೊಳ್ಳಬೇಕು. ಕೃಷಿ ಯಾಂತ್ರೀಕರಣ ಯೋಜನೆ ಬಳಕೆ ಮಾಡಿಕೊಳ್ಳಬೇಕು
ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ರೈತರಲ್ಲಿ ಜಾಗೃತಿ ಮೂಡಿಸಲು ಉತ್ಪಾದಕತೆ ಹೆಚ್ಚಿಸುವ ತಾಂತ್ರಿಕತೆಗಳ ಮನವರಿಕೆ, ವಿಜ್ಞಾನಿಗಳೊಂದಿಗೆ ರೈತರ ಸಂವಾದ, ಸಮಗ್ರ ಕೃಷಿ ಮಾಹಿತಿ ಕಘಟಕ, ಕೃಷಿ ವಸ್ತು ಪ್ರದರ್ಶನ ನಡೆಯಲಿದೆ.
ಮೂರು ಹಂತದಲ್ಲಿ ಜಿಲ್ಲಾ ಮಟ್ಟ, ತಾಲೂಕು ಮಟ್ಟ ಮತ್ತು ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ರಚನೆ ಮಾಡಬೇಕು

See also  ಜಿನಾಲಯ ಅಭಿಯಾನ

Leave a Reply

Your email address will not be published. Required fields are marked *

error: Content is protected !!! Kindly share this post Thank you
× How can I help you?